ರುಂಡವಿಲ್ಲದ ಶವ ಪತ್ತೆ,
ಶಿವಮೊಗ್ಗ: ತಲೆಯಿಲ್ಲದ ಅನಾಮಧೇಯ ಶವ ವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಶಿವಮೊಗ್ಗ ತಾಲೂಕು ಬೇಡರಹೊಸಹಳ್ಳಿಯ ತುಂಗಾ ನದಿಯ ದಡದಲ್ಲಿ ಪತ್ತೆಯಾಗಿದೆ.
ಈ ಪ್ರಕರಣದಲ್ಲಿ ಪತ್ತೆಯಾದ ಮೃತದೇಹದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಬೇಡರಹೊಸಹಳ್ಳಿಯ ಬಸರಾಜ ಗೌಡರ ಅಡಿಕೆ ತೋಟದ ಹಿಂಭಾಗದಲ್ಲಿ ಹರಿಯುವ ತುಂಗ ನದಿಯ ದಡದಲ್ಲಿ ಕಲ್ಲು ಮಣ್ಣಿನ ದಿಣ್ಣೆಯಲ್ಲಿ ಪತ್ತೆಯಾಗಿದೆ. ಸಾರ್ವ ಜನಿಕರು ನೋಡಿ ತೋಟದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಕೊಳೆತಸ್ಥಿತಯಲ್ಲಿ ಪತ್ತೆಯಾದ ಅನಾಮಧೇಯ ಶವದ ಬಗ್ಗೆ ಹಲವು ಶಂಕೆಗಳನ್ನ ವ್ಯಕ್ತಪಡಿಸಲಾಗಿದೆ ಈ ಶವ ಒಂದುವರೆ ತಿಂಗಳ ಹಿಂದೆ ಆಕಸ್ಮಾತ್ ನದಿಗೆ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕೊಳೆತ ಸ್ಥಿತಿಯಲ್ಲಿ ತೇಲಿ ಬಂದ ಶವವನ್ನ ನಾಯಿಗಳು ಎಳೆದು ದಡದಲ್ಲಿ ಹಾಕಿರುವ ಶಂಕೆ ವ್ಯಕ್ತ ವಾಗಿದೆ. ಬಹಿರ್ದೆಸೆಗೆ ಹೋದಾಗ ನೀರಿಗೆ ಬಿದ್ದಿರುವ ಶಂಕೆಯೂ ವ್ಯಕ್ತವಾಗಿದೆ.
ಸಾಲಬಾಧೆಃ ತೋಟದಲ್ಲಿ ರೈತ ನೇಣಿಗೆ ಶರಣು
ರಿಪ್ಪನ್ಪೇಟೆ : ಸಾಲಬಾಧೆಗೆ ಬೇಸತ್ತು ರೈತರೊಬ್ಬರು ತಮ್ಮದೇ ಅಡಿಕೆ ತೋಟದಲ್ಲಿದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹರತಾಳು ಗ್ರಾಪಂ ವ್ಯಾಪ್ತಿಯ ಕೆ ಹುಣಸವಳ್ಳಿ ಗಣಂದೂರು ಗ್ರಾಮದ ಪುಟ್ಟನಾಯ್ಕ್ (೮೦) ಮೃತ ರು. ಮೃತ ಪುಟ್ಟನಾಯ್ಕ್ ಕೃಷಿ ಉದ್ದೇಶದಿಂದ ಸಾಲ ಮಾಡಿದ್ದು ಬೆಳೆ ನಷ್ಟದಿಂದ ಸಾಲ ಕಟ್ಟಲಾಗದೆ ಬ್ಯಾಂಕ್ ಹಾಗೂ ಸಂಘ ಸಂಸ್ಥೆಗಳಲ್ಲಿ ಸಾಲಕ್ಕೆ ಬಡ್ಡಿ ಹೆಚ್ಚಾದ ಕಾರಣ ಬೇಸತ್ತಿದ್ದರು ಎನ್ನಲಾಗಿದೆ. ಇವರಿಗೆ ಕೃಷ್ಣ ಪ್ರಗತಿ ಗ್ರಾಮೀಣ ಬ್ಯಾಂಕ್ ಹೊಸನಗರ ೧೩ ಲಕ್ಷ , ತೋಟಗಾರ್ಸ್ ಅಡಿಕೆ ಮಂಡಳಿ ಸಾಗರ ೨.೫ ಲಕ್ಷ , ಪಿಎಲ್ ಡಿ ಬ್ಯಾಂಕ್ ೨.೫ ಲಕ್ಷ ಸಾಲವಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರು ಮೂರು ಗಂಡು ಹಾಗೂ ಎರಡು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಪ್ಪನ್ ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿದೆ.
ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂತಿದ್ದ ಬಸ್ಗೆ ಕಾರು ಡಿಕ್ಕಿ : ಶಾಹಿ ಗಾರ್ಮೆಂಟ್ಸ್ನ ಅಧಿಕಾರಿ ಸಾವು
ಶಿವಮೊಗ್ಗ: ನಗರದ ಸಾಗರ ರಸ್ತೆಯ ಭಾರ್ಗವಿ ಪೆಟ್ರೋಲ್ ಬಂಕ್ ಎದುರು ನಿಂತಿದ್ದ ಬಸ್ ಗೆ ಡಿಕ್ಕಿ ಹೊಡೆದು ಪ್ರತಿಷ್ಠಿತ ಗಾರ್ಮೆಂಟ್ಸ್ ನ ಸೀನಿಯರ್ ಕ್ಯಾಲಿಟಿ ಮ್ಯಾನೇಜರ್ ಸಾವನ್ನಪ್ಪಿದ್ದಾರೆ.
ಮೃತರನ್ನು ವಿಜಯ ಕುರ್ಲಿ ಎಂದು ಗುರುತಿಸಲಾಗಿದೆ. ವಿನೋಬನಗರದಲ್ಲಿರುವ ಸ್ನೇಹಿತನನ್ನು ಮನೆಗೆ ಬಿಟ್ಟು ವಾಪಾಸ್ ಶಾಹೀ ಗಾರ್ಮೆಂಟ್ಸ್ ಗೆ ಹೋಗುವಾಗ ಮಧ್ಯ ರಾತ್ರಿ ಈ ದುರ್ಘಟನೆ ಸಂಭವಿಸಿದೆ.
ವಿಜಯ ಕುರ್ಲಿ ಶಾಹೀ ಗಾರ್ಮೆಂಟ್ಸ್ ನಲ್ಲಿ ಸೀನಿಯರ್ ಕ್ವಾಲಿಟಿ ಮ್ಯಾನೇಜರ್ ಆಗಿದ್ದರು. ೪೮ ರ ಇವರು ಸ್ಯಾಂಟ್ರೋ ಕಾರಿನಲ್ಲಿ ತೆರಳುವಾಗ ಬಾರ್ಗವಿ ಪೆಟ್ರೋಲ್ ಬಂಕ್ ಎದುರಿನ ರಸ್ತೆಯಲ್ಲಿ ನಿಲ್ಲಿಸಿದ್ದ ಬಸ್ಗೆ ಡಿಕ್ಕಿ ಹೊಡೆದಿದ್ದಾರೆ. ಆಲ್ಕೊಳ ಸರ್ಕಲ್, ಎಪಿಎಂಸಿ ರಸ್ತೆ, ಬಸ್ ನಿಲ್ದಾಣದ ಮೂಲಕ ಮಲಗೊಪ್ಪದ ಶಾಹೀ ಗಾರ್ಮೆಂಟ್ಸ್ ಗೆ ವಿಜಯ ಕುರ್ಲಿ ತೆರಳಬೇಕಿತ್ತು. ಕಾರನ್ನ ಚಲಾಯಿಸುತ್ತಿದ್ದ ಚಾಲಕ ಕಾರನ್ನ ನಿಂತ ಬಸ್ ಹಿಂಭಾಗಕ್ಕೆ ಡಿಕ್ಕಿ ಹೊಡೆಸಿದ್ದಾರೆ. ಪರಿಣಾಮ ಕಾರಿನ ಮುಂಭಾಗ ನುಜ್ಜು ಗುಜ್ಜಾಗಿದೆ. ವಿಜಯ ಕುರ್ಲಿಯವರನ್ನು ತಕ್ಷಣ ಮೆಗ್ಗಾನ್ ಸಾಗಿಸಲಾದರೂ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಚಾಲಕ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾನೆ. ವಿಜಯ ಕುರ್ಲಿ ಮೂಲತ ಧಾರವಾಡ ಜಿಲ್ಲೆಯವರಾಗಿದ್ದರು. ಪ್ರಕರಣ ಪಶ್ಚಿಮ ಸಂಚಾರಿ ರಸ್ತೆಯಲ್ಲಿ ಸಂಭವಿಸಿದೆ.
ಡಿವೈಡರ್ಗೆ ಬೈಕ್ ಡಿಕ್ಕಿ : ಯುವಕ ಸಾವು
ಶಿವಮೊಗ್ಗ : ನಗರದ ಏರ್ ಪೋರ್ಟ್ ರಸ್ತೆಯಲ್ಲಿ ಡಿವೈಡರ್ ಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸಾವು ಕಂಡಿದ್ದಾನೆ. ಹೆಲ್ಮೆಟ್ ಧರಿಸದ ಕಾರಣ ಯುವಕನ ಪ್ರಾಣ ಪಕ್ಷಿ ಅಲ್ಲಿಯೇ ಹಾರಿಹೋಗಿದೆ.
ನಗರದ ಪುಟ್ಟಪ್ಪನ ಕ್ಯಾಂಪ್ ನಲ್ಲಿರುವ ಪ್ರತಿಷ್ಠಿತ ರೆಸಾರ್ಟ್ ನಲ್ಲಿ ಮದುವೆ ಕಾರ್ಯಕ್ರಮ ಮುಗಿಸಿಕೊಡು ವಾಪಾಸ್ ಭದ್ರಾವತಿಯ ಹುಣ್ಸೆಕಟ್ಟೆ ಜಂಕ್ಷನ್ ನಲ್ಲಿರುವ ಮನೆಗೆ ಬೈಕ್ ನಲ್ಲಿ ಹೋಗುವಾಗ ಶಿವಮೊಗ್ಗ ಏರ್ಪೋರ್ಟ್ ಗೇಟ್ ಬಳಿ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದಾನೆ. ಮೃತನನ್ನು ನಿಶ್ಚಿತ್ (೨೦) ಎಂದು ಗುರುತಿಸಲಾಗಿದೆ. ಪೈಂಟ್ ಕೆಲಸ ಮಾಡಿಕೊಂಡಿದ್ದ ನಿಶ್ಚಿತ್ ನಿನ್ನೆ ರಾತ್ರಿ ಮದುವೆ ಕಾರ್ಯಕ್ರಮಕ್ಕೆ ಬಂದು ಊಟ ಮುಗಿಸಿಕೊಂಡು ವಾಪಾಸ್ ಜಂಕ್ಷನ್ ಗೆ ಬೈಕ್ ನಲ್ಲಿ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರು ಮರಕ್ಕೆ ಡಿಕ್ಕಿ: ಪ್ರಯಾಣಿಕರು ಪಾರು
ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಣಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳ್ಳಿಗದ್ದೆ ತಿರುವಿನಲ್ಲಿ ರಾತ್ರಿ ೧೦ಗಂಟೆ ಸುಮಾರು ಬಲೆನೋ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು ಸದ್ಯ ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಸೇಫ್ ಆಗಿದ್ದಾರೆ.ಕಾರು ಮಾಲೀಕರು ಶಿವಮೊಗ್ಗದವರಾಗಿದ್ದು, ಮಣಿಪಾಲ್ ಹೋಗುತ್ತಿದ್ದರು ಎನ್ನಲಾಗಿದೆ.
ಕಾಲುಜಾರಿ ಬಿದ್ದು ವೃದ್ಧೆ ಸಾವು
ಶಿಕಾರಿಪುರ : ಪಟ್ಟಣದ ಮಂಡಿಪೇಟೆಯ ನಿವಾಸಿ ಲೀಲಾವತಿ(೭೨) ಎಂಬುವರು ಸ್ನಾನಕ್ಕೆಂದು ಬಚ್ಚಲು ಮನೆಗೆ ಹೋದಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.
ಮೃತ ದೇಹವನ್ನು ಸಿಮ್ಸ್ ಗೆ ನೀಡಲು ಬಯಸಿದ್ದು ಬಿದ್ದು ಗಾಯವಾದ ಕಾರಣ ಸಿಮ್ಸ್ ಈ ಮೃತ ದೇಹವನ್ನು ತಿರಸ್ಕರಿಸಿ ರುವುದಾಗಿ ತಿಳಿದು ಬಂದಿದೆ. ಮೃತ ದೇಹದ ಮೇಲೆ ಯಾವುದೇ ಗಾಯ ಇಲ್ಲವಾಗಿದ್ದರೆ ಮೃತದೇಹವನ್ನು ವೈದ್ಯಕೀಯ ಶಿಕ್ಷಣ ಸ್ವೀಕರಿಸುತ್ತದೆ.
ಮಾರಕಾಸ್ತ್ರದಿಂದ ಯುವಕನಿಗೆ ಹಲ್ಲೆ
ತೀರ್ಥಹಳ್ಳಿ: ಏಕಾಏಕಿ ಇಬ್ಬರು ಓರ್ವ ವ್ಯಕ್ತಿಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಲ್ಲದೇ ಹತ್ಯೆ ನಡೆಸಲು ಮುಂದಾದ ಘಟನೆ ಕಟ್ಟೆಹಕ್ಲು ಬಳಿ ನಡೆದಿದೆ. ತಾಲೂಕಿನ ಸಾಲ್ಗಡಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಟ್ಟೆಹಕ್ಲು ಸಮೀಪ ಪುನೀತ್ ಎಂಬಾತ ಬೈಕ್ ನಲ್ಲಿ ಬರುತ್ತಿದ್ದಾಗ ಕಾರಿನಲ್ಲಿ ಬಂದ ಇಬ್ಬರು ಮಾರಕಾಸ್ತ್ರ ಹಿಡಿದು ಹಲ್ಲೆ ನಡೆಸಿದ್ದಾರೆ.
ಅದೇ ರಸ್ತೆಯಲ್ಲಿ ಬರುತ್ತಿದ್ದ ಪುನೀತ್ ಸ್ನೇಹಿತರನ್ನು ನೋಡಿ ಹಲ್ಲೆ ಮಾಡುತ್ತಿದ್ದ ಇಬ್ಬರು ದುಷ್ಕರ್ಮಿಗಳು ಓಡಿ ಹೋಗಿದ್ದಾರೆ. ಹಲ್ಲೆಗೆ ಒಳಗಾದ ಪುನೀತ್ ಎಂಬಾತನನ್ನು ತೀರ್ಥಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದ್ದು ಪೊಲೀಸ್ ತನಿಖೆಯಿಂದ ಹೆಚ್ಚಿನ
ಮಾಹಿತಿ ತಿಳಿಯಬೇಕಿದೆ.
ಅಧಿಕ ಮದ್ಯ ಸೇವನೆ ಸಾವು
ಶಿವಮೊಗ್ಗ: ಅಧಿಕ ಮದ್ಯ ವ್ಯಸನದಿಂದ ನಿನ್ನೆ ನಗರದ ಪ್ರತಿಷ್ಠಿತ ಮೆಡಿಕಲ್ ಶಾಪ್ ಮುಂದೆ ಮಲಗಿದ್ದ ೩೮ ವರ್ಷದ ಧನಂಜಯ ಸಾವನ್ನಪ್ಪಿದ್ದಾರೆ. ಈತ ಮೇಲಿನ ತುಂಗಾ ನಗರದವನು. ಈತ ಮನೆಯನ್ನು ಬಿಟ್ಟು ೧೨ ವರ್ಷ ಕಳೆದಿತ್ತು.