ಭದ್ರಾವತಿ : ಟಿ. ಬೈಲಪ್ಪ, ೭೫ ವರ್ಷ, ಬೊಮ್ಮನಕಟ್ಟೆ ಪಂಡರಹಳ್ಳಿ ಕ್ಯಾಂಪ್, ಭದ್ರಾವತಿ ತಾಲ್ಲೂಕ್ರವರು ಮಾ.೮ರಂದು ನೀಡಿದ ದೂರಿ ಅನ್ವಯ ಅವರ ಗ್ರಾಮದಲ್ಲಿನ ಶ್ರೀ ಮಾರಿಕಾಂಬ ದೇವಸ್ತಾನದ ಬಾಗಿಲಿನ ಬೀಗ ಮುರಿದು ಗರ್ಭಗುಡಿಯಲ್ಲಿದ್ದ ದೇವಿಯ ಬೆಳ್ಳಿಯ ಮುಖವಾಡ ಮತ್ತು ಬಂಗಾರದ ತಾಳಿಯ ಆಭರಣ ವಸ್ತಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಠಾಣಾ ಗುನ್ನೆ ನಂ ೭೨/೨೦೨೬ ಕಲಂ ೩೩೧(೩), ೩೩೧(೪).೩೦೫ ಬಿಎನ್ಎಸ್, ೨೦೨೩ ಕಾಯ್ದೆ ರಿತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.
ಪ್ರಕರಣದಲ್ಲಿ ಮಾಲು ಹಾಗೂ ಅರೋಪಿತರ ಪತ್ತೆಗಾಗಿ ಜಿಲ್ಲಾ ರಕ್ಷಣಾಧಿಕಾರಿಗಳಾದ ನಿಖಿಲ್ ಬಿ. ಅವರ ಮಾರ್ಗದರ್ಶನದಲ್ಲಿ ಶಿವಪ್ರಸಾದ್ ಎಂ., ಪೊಲೀಸ್ ಇನ್ಸ್ಪೆಕ್ಟರ್ ಹೊಳೆಹೊನ್ನೂರು ಪೊಲೀಸ್ ಠಾಣೆರವರ ನೇತೃತ್ವದಲ್ಲಿ ಪಿಎಸ್ಐ ಶಾಂತಲಾ ಹಾಗೂ ಸಿಬ್ಬಂದಿಗಳಾದ ಹೆಚ್ಸಿ ೭೧ ಅಣ್ಣಪ್ಪ, ಹೆಚ್ಸಿ ೭೨ ಪ್ರಸನ್ನ, ಹೆಚ್ಸಿ೪೬೨ ಪ್ರಕಾಶ ನಾಯ್ಕ ಹೆಚ್.ಸಿ. ೨೫೮ ಸವಿತಾ, ಪಿಸಿ ೧೧೨೫ ವಿಶ್ವನಾಥ, ರವರುಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು.

ಸದರಿ ತನಿಖಾ ತಂಡವು ದಿನಾಂಕ : ೦೯.೦೩.೨೦೨೬ ರಂದು ಮಾವಿನಕಟ್ಟೆ ಗ್ರಾಮ ಚನ್ನಗಿರಿ ತಾಲ್ಲುಕ್ ದಾವಣಗೆರೆ ಜಿಲ್ಲೆಯ ಆರೋಪಿ ಉಮೇಶ, ೪೫ ವರ್ಷ ದಸ್ತಗಿರಿ ಮಾಡಿ, ಆರೋಪಿತನಿಂದ ಹೊಳೆಹೊನ್ನೂರು ಪೊಲೀಸ್ ಠಾಣೆ ಹಾಗು ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸ್ ಠಾಣೆಯ ಗುನ್ನೆ ನಂ. ೫೦/೨೦೨೬ ಕಲಂ ೩೩೧(೩) ೩೩೧(೪) ೩೦೫(ಎ) ಬಿಎನ್ ಎಸ್ ಪ್ರಕರಣದಲ್ಲಿ ಒಟ್ಟು ಎರಡು ಪ್ರಕರಣದಲ್ಲಿ ಶ್ರೀ

ಮಾರಿಕಾಂಬ ದೇವಿಯ ಎರಡು ಮುಖವಾಡಗಳು, ನಾಲ್ಕು ಬೆಳ್ಳಿಯ ಕೈಗಳು ಮತ್ತು ಸೋಟದ ಪಟ್ಟಿ ಮತ್ತು ಬಂಗಾರದ ತಾಳಿ ಮೂಗುತಿ ಗುಂಡುಗಳು ಹಾಗು ಕುಂಸಿ ಠಾಣೆ ವ್ಯಾಪ್ತಿಯ ದುರ್ಗಾಂಭಿಕ ದೇವಿಯ ಮುಖವಾಡ ಪಾದುಕೆ ಮತ್ತು ಚಾಮರ ಒಟ್ಟು ೩ ಕೆ.ಜಿ. ೭೬೪ ಗ್ರಾಂ ಬೆಳ್ಳಿಯ ಆಭರಣ ಹಾಗೂ ೦೮ ಗ್ರಾಂ ಬಂಗಾರದ ಆಭರಣ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಬೈಕ್ ಸೇರಿ ಒಟ್ಟು ಅಂದಾಜು ಬೆಲೆ ೧೦,೪೯,೦೬೦ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.