42ವರ್ಷಗಳ ಇತಿಹಾಸದ ಹಿರಿಯ ಜಿಲ್ಲಾ ಮಟ್ಟದ ಪತ್ರಿಕೆಯಾದ ತುಂಗಾ ತರಂಗ ಹೊಸ ಯುವ ಪಡೆಯ ನೇತೃತ್ವದ ಅಡಿಯಲ್ಲಿ ಹೊಸ ತನವನ್ನು ಆರಂಭಿಸಿ ಈಗ ದಶಕದ ದಿನಗಳನ್ನು ಸವಸಿದೆ.
ಲೋಕೋ ಭಿನ್ನ ರುಚಿ ಎಂಬಂತೆ ಎಲ್ಲರ ರುಚಿಗಳಿಗೆ ಇಷ್ಟವಾಗುವ ಸಾಮಾಜಿಕ ವೈಜ್ಞಾನಿಕ, ಆದ್ಯಾತ್ಮಿಕ, ಶೈಕ್ಷಣಿಕಾ ಕ್ರೀಡೆ ಹಾಗೂ ಇತರೆ ಎಲ್ಲಾ ರಂಗಗಳ ಸುದ್ದಿ ಮಾಹಿತಿ, ಮುಖ್ಯಾಂಶ, ವಿವರಣೆಗಳನ್ನು ಅತ್ಯಂತ ಚಿಕ್ಕ ಚೌಕಟ್ಟಿನಲ್ಲಿ ಚೊಕ್ಕದಾಗಿ ಬಿಂಬಿಸುತ್ತಾ ಬಂದಿರುವ ತುಂಗಾ ತರಂಗ ಕನ್ನಡ ದಿನಪತ್ರಿಕೆ ಕಳೆದ 10 ವರ್ಷಗಳಿಂದ ಸಾಮಾಜಿಕ ಜಾಲತಾಣದ ಗಳಲ್ಲಿನ ಎಲ್ಲಾ ಬಗೆಗಳಲ್ಲಿ ತನ್ನ ಅಸ್ತಿತ್ವವನ್ನು ಅಗತ್ಯತೆಯನ್ನು ಎತ್ತಿ ಹಿಡಿದಿದೆ ಎಂಬುದು ಸಂತಸದ ಸಂಗತಿ.
ಮುದ್ರಣದ ಜೊತೆಗೆ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಟ್ವೀಟರ್, ಗೂಗಲ್+ , ಫೇಸ್ ಬುಕ್, ಕೂ, ಇನ್ಟಲ್‌ಗ್ರಾಮ್, ಟೆಲಿಗ್ರಾಂ ಗಳ ಜೊತೆಗೆ ಕಳೆದ 2 ವರ್ಷಗಳಿಂದ tungataranga.com ಮೂಲಕ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಓದುಗರನ್ನು ತಲುಪುತ್ತಾ ಅಲ್ಲಿಂದಲೇ ಮಾಹಿತಿಗಳನ್ನೆ ಯೆಕ್ಕಿ, ಅವುಗಳನ್ನು ನೀಡುತ್ತಲೇ ಜನಮಾನಸದಲ್ಲಿ ಜನಪ್ರಿಯ ತೆ ಗಳಿಸಿದೆ.
ತುಂಗಾ ತರಂಗ ಪ್ರತಿ ವರುಷ ನಿತ್ಯ ದ ಮುದ್ರಣದ ಜೊತೆಗೆ ತನ್ನದೇ ಅದ ವಿಭಿನ್ನ ವೈಶಿಷ್ಟ್ಯ ವಾದ ವಿಶೇಷಾಂಕವನ್ನು ನೀಡುತ್ತಲೇ ಬಂದಿದೆ.ಕರಾಳ ಕೊರೊನಾದ ದುರ್ಗತಿಯ ದಿನಗಳಲ್ಲಿನ ಲಾಕ್ ಡೌನ್ ಗೂ ಬೆದರದೆ ತುಂಗಾ ತರಂಗ ತನ್ನ ಚೌಕಟ್ಟಿನ ಸುದ್ದಿದಾತ ಚೌಕಟ್ಟನ್ನು ಅತ್ಯಂತ ನಿಷ್ಠೆ ಯ ಕಾಯಕವೆಂದೇಪರಿಗಣಿಸಿ ಮಾಡುತ್ತಿರುವುದು ನಮ್ಮಓದುಗ ಸಹೃದಯ ಮನಸ್ಸುಗಳನ್ನು ಮುಟ್ಟಿರುವುದು ಅವರ ಅಭಿಪ್ರಾಯಗಳಲ್ಲೇ ವ್ಯಕ್ತವಾಗಿದೆ.
ಮುದ್ರಣ ದ ದುಬಾರಿ ವೆಚ್ಚಗಳ ನಡುವೆ ಅಂತರ್ಜಾಲ ದಲ್ಲಿ ತನ್ನ ಚೌಕಟ್ಟನ್ನು ವಿಸ್ತರಿಸುತ್ತಾ ಬೆಳೆದಿರುವ ತುಂಗಾ ತರಂಗ ಪತ್ರಿಕೆಗೆ ಈಗ ಈ ಜಾಲತಾಣ ಗಳಲ್ಲಿ ಲಕ್ಷಗಳನ್ನು ದಾಟಿರುವುದು ಸಂತಸವಿಷಯ.
ನಿತ್ಯ ನಿಮ್ಮಲ್ಲಿ ಜಾಗೃತಿ ಸುದ್ದುದಾತ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಿಕಾ ಬಳಗಕ್ಕೆ ತಾವುಗಳು ಮುಕ್ತ ಮನದಿಂದ ಶುಭ ಹರಸಿ ಸಹಾಯ ಹಸ್ತ ನೀಡುವಂತೆ ಪತ್ರಿಕಾ ಬಳಗ ವಿನಂತಿಸುತ್ತದೆ.
ಗಜೇಂದ್ರ ಸ್ವಾಮಿ,
ಸಂಪಾದಕರು,
ತುಂಗಾತರಂಗ ದಿನಪತ್ರಿಕೆ,
ನೆಹರೂ ರಸ್ತೆ, ಶಿವಮೊಗ್ಗ.
ಮೊ:9448256183