ಸಮಾಜಶಾಸ್ತ್ರ ವಿಭಾಗದಿಂದ ಏರ್ಪಡಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ನಮ್ಮ ವಿದ್ಯಾರ್ಥಿಗಳಿಗೆ ಸುಸ್ಥಿರ ಕೃಷಿ ಹಾಗೂ ಪರಿಸರ ಈ ವಿಚಾರದ ಕುರಿತು ಮಾತನಾಡಿದ ಶ್ರೀಯುತ ವೆಂಕಟೇಶ್ ನಾಯಕ್ ರವರು ನಿರ್ದೇಶಕರು ತಾಲೂಕು ಕೃಷಿಕ ಸಮಾಜ ಶಿವಮೊಗ್ಗ ಇವರು ವಿದ್ಯಾರ್ಥಿಗಳಲ್ಲಿ ಹೇಗೆ ಸುಸ್ಥಿರವಾದಂತ ಕೃಷಿಯನ್ನು ಆರಂಭಿಸಬೇಕು ಪರಿಸರ ಮಾಲಿನ್ಯವನ್ನು ಹೇಗೆ ತಡೆಗಟ್ಟಬೇಕು ಮಣ್ಣಿನ ಫಲವತತೆಯನ್ನು ಹೇಗೆ ರಕ್ಷಿಸಬೇಕು ಎಂದು ಹೇಳುತ್ತಾ ಕೃಷಿಯಲ್ಲಿ ವಿದ್ಯಾವಂತರ ಪಾತ್ರ ಬಹಳ ಅತ್ಯವಶ್ಯಕ ಕೃಷಿಕರಿಗೆ ಶಿಕ್ಷಣ ಇಲ್ಲದ ಕಾರಣ ಕೃಷಿ ಪದ್ಧತಿಯಲ್ಲಿ ವಿಫಲತೆಯನ್ನು ಕಾಣುತ್ತಿದ್ದಾರೆ ಭೂಮಿಯಲ್ಲಿ ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಾಗುತ್ತಿದೆ ಇದರ ಬದಲು ಸಾವಯವ ಕೃಷಿ ಎಲೇ ಗೊಬ್ಬರ ಕೊಟ್ಟಿಗೆ ಗೊಬ್ಬರ ಇವುಗಳನ್ನು ಬಳಸಿ ಉತ್ತಮ ರೀತಿಯ ಕೃಷಿಯನ್ನು ಮಾಡುವುದರಿಂದ ಭೂಮಿಯ ಫಲವತ್ತತೆ ಉಳಿಯುತ್ತದೆ ಇಲ್ಲದಿದ್ದರೆ ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿಯ ಫಲವತ್ತತೆ ತಿನಿಸುತ್ತಾ ಹೋಗಿ ಬರಡು ಭೂಮಿಯಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಮತ್ತೋರ್ವ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಸುಜಾರವರು ಸಹ ಪ್ರಾಧ್ಯಾಪಕರು ಸಮಾಜ ಶಾಸ್ತ್ರ ವಿಭಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಾಗರ ಇವರು ಅಂತಿಮ ಬಿಎ ವಿದ್ಯಾರ್ಥಿಗಳಿಗೆ ಸಂಶೋಧನ ವಿಧಾನ ಹಾಗೂ ಕಿರು ಪ್ರಬಂಧವನ್ನು ತಯಾರಿಸುವ ಬಗ್ಗೆ ಸಮಗ್ರವಾದ ಮಾಹಿತಿಯನ್ನು ನೀಡಿದರು ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಯನ್ನು ಹಾಡಿದ ಪ್ರೊಫೆಸರ್ ಸಕ್ರಿಯ ನಾಯಕರವರು ವಿದ್ಯಾರ್ಥಿಗಳಲ್ಲಿ ಓದುವಿನ ಜೊತೆಗೆ ಕೃಷಿಯ ಚಟುವಟಿಕೆ ಬಗ್ಗೆ ಆಸಕ್ತಿ ಮೂಡಿಸಲು ಹಾಗೂ ಸಂಶೋಧನೆಯಲ್ಲಿ ಹೆಚ್ಚು ಪ್ರಾವೀಣ್ಯತೆಯನ್ನು ಸಾಧಿಸಲು ಅನುಕೂಲವಾಗಲೆಂದು ಇಂತಹ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕೈಗೊಳ್ಳುವುದು ಅವಶ್ಯಕವಿದೆ ಎಂದರು ಇನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರು ವಿದ್ಯಾರ್ಥಿಗಳಲ್ಲಿ ಕೃಷಿ ಹಾಗೂ ಪರಿಸರ ಮಾಲಿನ್ಯದ ಬಗ್ಗೆ ಗಮನ ಹರಿಸಬೇಕು ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಕಿವಿಮಾತು ಹೇಳಿದರು ಕಾರ್ಯಕ್ರಮವನ್ನು ಸಮಾಜಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಮೋಹನ್ ರವರು ನಿರೂಪಿಸಿ ಸ್ವಾಗತ ಮಾಡಿದರು ಸಮಾಜಶಾಸ್ತ್ರ ವಿಭಾಗದ ಮತ್ತು ಉಪನ್ಯಾಸಕರಾದ Dr.ಜ್ಯೋತಿರವರು ವಂದನಾರ್ಪಣೆ ಮಾಡಿದರು