ಶಿವಮೊಗ್ಗ : ರಾಜ್ಯ ಸರ್ಕಾರದ ಬಜೆಟ್ ಚಿಂದಿ ಬಟ್ಟೆ ಬಿಸಾಕಿದ ಹಾಗಿದೆ. ಎಲ್ಲಾ ಕೊಳೆಗಳನ್ನು ಒರೆಸಿ ಬಿಸಾಕಿದ ಯಾವುದೇ ಉಪಯೋಗಕ್ಕೆ ಬಾರದ ವೆಸ್ಟ್ ಅನ್ನು ಒಟ್ಟಿಗೆ ಸೇರಿ ಕೌದಿ ರೂಪದಲ್ಲಿ ಹೊಲೆದ ಹಾಗೆ ಆಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಎಸ್ಸಿ, ಎಸ್ಟಿಗಳಿಗೆ ಮೀಸಲಿಟ್ಟ ಹಣ, ದೇವಾಲಯಗಳ ಹುಂಡಿಯಿಂದ ಬರುವ ಹಣ ಎಲ್ಲವನ್ನು ಬಳಸಿಕೊಂಡು ಮಾಡಿದ ಭಯದ ಬಜೆಟ್ ಇದಾಗಿದೆ. ಸರ್ಕಾ ದಿವಾಳಿಯಾಗಿದ್ದು, ಈ ಸರ್ಕಾರ ದಿಂದ ಯಾವುದೇ ಅಭಿವೃದ್ಧಿ ನಿರೀಕ್ಷೆ ಮಾಡಲಾಗುವುದಿಲ್ಲ ಎಂದು ಅವರು ಇಂದು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

ಶಿವಮೊಗ್ಗದ ಆಶ್ರಯ ಮನೆಗಳಿಗೆ ಅನೇಕ ಬಡವರು ತಮ್ಮ ತಾಳಿಯನ್ನು ಮಾರಿ ೮೦ ಸಾವಿರ ಹಣವನ್ನು ಕಟ್ಟಿದ್ದಾರೆ.೬೦೦ ಮನೆಗಳು ಸಿದ್ದವಾಗಿದ್ದರೂ, ಅವರಿಗೆ ಯಾವುದೇ ಮೂಲಭೂತ ಸೌಲಭ್ಯ ಇಲ್ಲದ ಕಾರಣ ಅವರಿಗೆ ಕೀ ಹಸ್ತಾಂತರ ಮಾಡಲಾಗುತ್ತಿಲ್ಲ. ಅದಕ್ಕೆ ಅಗತ್ಯವಾದ ೧೨ ಕೋಟಿ ರೂ. ಬಿಡುಗಡೆ ಆಗಿಲ್ಲ. ವಸತಿ ಸಚಿವರು ಭರವಸೆ ನೀಡಿ ಹೋಗಿದ್ದರೂ ಹಣ ಬಂದಿಲ್ಲ.ನಾವು ಹಲವಾರು ವಿಚಾರಗಳಿಗೆ ಸಂಬಂಧಿಸಿದಂತೆ ರಾಷ್ಟ್ರ ಭಕ್ತರಬಳಗದಿಂದ ಹೋರಾಟ ಮಾಡಿದ್ದೇವು. ಆಯುಕ್ತ ರಿಗೆಮನವಿ ಸಲ್ಲಡಿದ್ದೇವೆ. ಅವರತು ಎರಡು ತಿಂಗಳ ಅವಧಿ ಕೇಳಿದ್ದರು. ಈಗಾಗಲೇ ಒಂದು ತಿಂಗಳ ಮುಗಿದಿದೆ. ಆಯುಕ್ತರನ್ನು ಭೇಟಿಯಾಗಿ ಪಾಲಿಕೆಯಿಂದಲೇ ಹಣ ಹೊಂದಿಸಿ ಬಡವರಿಗೆ ಕೀ ಹಸ್ತಾಂತರ ಮಾಡಲು ಹೇಳಿದ್ದೇವೆ.ಅವರು, ಈಗಾಗಲೇ ಕಂಟ್ರ್ಯಾಕ್ಟರ್ ಸರ್ಕಾರದಿಂದ ಹಣ ಪಾವತಿಸಿಲ್ಲ ಎನ್ನುವ ಕಾರಣಕ್ಕೆ ಓಡಿ ಹೋಗಿದ್ದಾರೆಂದು ತಿಳಿಸಿದ್ದಾರೆ. ನಾನು ಉಸ್ತುವಾರಿ ಸಚಿವರ ಜತೆಗೆ ಮಾತನಾಡುತ್ತೇನೆ.ಸರ್ಕಾರ ಸ್ಪಂದಿಸದಿದ್ದರೆ ಮತ್ತೆ ಹೋರಾಟ ಅನಿವಾರ್ಯ ಎಂದರು.
ಈ ಸರ್ಕಾರಕ್ಕೆ ಚುನಾವಣೆ ಮಾಡುವ ಯೋಚನೆಯೇ ಇಲ್ಲ, ಪ್ರಜಾ ಪ್ರಭುತ್ವಕ್ಕೆ ಮಾರಕವಾದ ಸರ್ಕಾರ ಇದು. ಚುನಾವಣಾ ಆಯುಕ್ತರು ದುಬೈ ನಲ್ಲಿದ್ದಾರೆಂದು ತಿಳಿದು ಬಂದಿದೆ. ಅವರು ಮಾತಿಗೂ ಬೆಲೆ ಇಲ್ಲದಂತಾಗಿದೆ. ಅವರು ನಾನು ನಿಸ್ಸಾಹಾಯಕ ಸರ್ಕಾರ ನನ್ನ ಮಾತನ್ನು

ಕೇಳುತ್ತಿಲ್ಲ ಎಂದು ಬಹಿರಂಗ ಹೇಳಿಕೆ ನೀಡಲಿ, ಪಾಲಿಕೆ ಚುನಾವಣೆಗ ಸಂಬಂಧಿಸಿದ ದಂತೆ ರಾಷ್ಟ್ರ ಭಕ್ಯರ ಬಳಗ ಈಗಾಗಲೇ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು ಮಾ.೨೧ರಂದು ನ್ಯಾಯಾಲಯದಲ್ಲಿ ವಿಚಾರಣೆ ಇದೆ. ಸರ್ಕಾರ ಕೂಡಲೇ ಪಾಲಿಕೆ ಚುನಾವಣೆಗೆ ಕ್ರಮ ಕೈಗೊಳ್ಳಬೇಕು ಎಂದರು.
ಟಿ-೨೦ ವಿಶ್ವಕ್ರಿಕೆಟ್ನಲ್ಲಿ ಭಾರತ ತಂಡ ಗೆದ್ದು ದೇಶಕ್ಕೆ ಕೀರ್ತಿತಂದಿದೆ. ಭಾರತದ ಗೌರವವನ್ನು ಹೆಚ್ಚಿಸಿದೆ. ಭಾರತ ತಂಡ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಗೆದ್ದ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಶ್ರೀಕಾಂತ್, ಅಚ್ಚುತ್ರಾವ್, ರಾಮಾಚಾರ್, ಉಮೇಶ್ ಆರಾಧ್ಯ ಮತ್ತಿತರರಿದ್ದರು.