ಶಿವಮೊಗ್ಗ : ಇತ್ತೀಚೆಗೆ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ವಿಕಸಿತ್ ಭಾರತ್ ಯೋಜನೆಯಡಿಯಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಸಂಸತ್, ಸ್ಪರ್ಧೆಯಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಕಾಲೇಜುಗಳ ೧೦ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇಂದು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಪ್ರಾಚಾರ್ಯ ಮತ್ತು ಉಪನ್ಯಾಸಕ ವರ್ಗದವರು ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ ರಾಜ್ಯಮಟ್ಟದಲ್ಲಿಯೂ ಗೆಲ್ಲುವಂತೆ ಶುಭಹಾರೈಸಿದರು.
ಸಹ್ಯಾದ್ರಿ ಕಲಾ ಕಾಲೇಜಿನ ಮಧು(ಉಪ ಮುಖ್ಯಮಂತ್ರಿ), ಜೀವಿತ ಎನ್.ಜಿ. (ಉನ್ನತ ಶಿಕ್ಷಣ ಮಂತ್ರಿ), ಪವನ್ಕುಮಾರ್ ಎ. (ಅರಣ್ಯ ಇಲಾಖೆ), ಅವಿನಾಶ್ (ವಿರೋಧ ಪಕ್ಷದ ನಾಯಕ) ಇವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಇವರಲ್ಲದೆ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಷಣ್ಮುಖಗೌಡ, ಶರಣ್ಯಭಟ್, ಎಟಿಎನ್ಸಿ ಕಾಲೇಜಿನ ಅನನ್ಯಭಟ್, ಸೌಜನ್ಯ ಡಿ.ಡಿ. ಸಮೀಯ ಕುಲ್ಸಂ ಆಯ್ಕೆಯಾಗಿದ್ದಾರೆ ಎಂದು ಕಾರ್ಯಕ್ರಮ ಸಂಚಾಲಕ ಪ್ರೊ.ಹಾ.ಮ. ನಾಗರಾರ್ಜುನ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಸಿರಾಜ್ ಅಹ್ಮದ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಪ್ರಹ್ಲಾದಪ್ಪ, ಪ್ರಾಧ್ಯಾಪಕರಾದ ಪ್ರೊ.ಪ್ರಸನ್ನಕುಮಾರ್, ಡಾ.ಚಂದ್ರಪ್ಪ, ಕೃಪಾಲಿನಿ, ವಿದ್ಯಾರ್ಥಿ ಕ್ಷೇಮಾಧಿಕಾರಿ ಕೆ.ಎನ್. ಮಂಜುನಾಥ್, ಐಕ್ಯೂಎಸಿ ಸಂಚಾಲಕ ಹೆಚ್.ಪಿ. ಮಂಜುನಾಥ್ ಇದ್ದರು.