ಶಿವಮೊಗ್ಗ, ಫೆ.04 : ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ನಿ. ಸಂಘದ ಸದಸ್ಯರುಗಳಿಗಾಗಿ ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ ಯಶಸ್ವಿನಿ ಯೋಜನೆಯ ನೋಂದಾಯಿಸುವ ಅವಧಿಯನ್ನು ಮಾರ್ಚ್ 31 ರವರೆಗೆ ವಿಸ್ತರಣೆಗೊಳಿಸಲಾಗಿದ್ದು, ಸಂಘದ ಸದಸ್ಯರು
ಯೋಜನೆಯ ಸದಸ್ಯತ್ವ ಪಡೆದು ತಮ್ಮ ಕುಟುಂಬ ಆರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು. ಈಗಾಗಲೇ ಈ ಯೋಜನೆಯ ಸದಸ್ಯತ್ವ ಪಡೆದವರಿಗೆ
ಮತ್ತು ಹೊಸದಾಗಿ ನೋಂದಣಿ ಮಾಡಿಕೊಳ್ಳುವ 4 ಜನ ಕುಟುಂಬ ಸದಸ್ಯರಿಗೆ ರೂ.1000 ನಂತರ ಪ್ರತಿ ಸದಸ್ಯರಿಗೆ ರೂ.200 ಇದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಸದಸ್ಯರುಗಳಿಗೆ ಯಾವುದೇ ವಂತಿಕೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಂಘದ ಕಛೇರಿ ವೇಳೆಯಲ್ಲಿ ಸಂಪರ್ಕಿಸಲು ಸಂಘದ ಅಧ್ಯಕ್ಷ ಎಸ್.ಕೆ.ಮರಿಯಪ್ಪ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.