ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆಯಾಗಿ ಗೀತಾ ಸತೀಶ್ ಅವರು ಸತತ ಮೂರನೇ ಬಾರಿ ನೇಮಕವಾಗಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಆದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರ ಸ್ವಾಮಿ ಅವರು ಗೀತಾ ಅವರಿಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ನೇಮಕಾತಿ ಪತ್ರ ನೀಡಿದರು.

ಗೀತಾ ಅವರು ಈ ಹಿಂದಿನ ಎರಡು ಅವಧಿಯಲ್ಲಿ ಅಧ್ಯಕ್ಷೆಯಾಗಿ ಕೆಲಸ ಸಕ್ರಿಯವಾಗಿ ಕೆಲಸ ನಿರ್ವಹಿಸಿದ್ದರು. ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿರುವ ಗೀತಾ ಸತೀಶ್ ಅವರು ಭದ್ರಾವತಿ ತಾಲೂಕು ಸಿದ್ಲಿಪುರದವರಾಗಿದ್ದಾರೆ. ತಮ್ಮನ್ನು ಮೂರನೇ ಬಾರಿ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿದ ಪಕ್ಷದ ದೇವೇಗೌಡರು, ಕುಮಾರಸ್ವಾಮಿ, ನಿಖಿಲ್

ಕುಮಾರಸ್ವಾಮಿ, ಶಾರದಾ ಪೂರ್ಯಾನಾಯ್ಕ್, ಶಾರದಾ ಅಪ್ಪಾಜಿ, ಕೆ.ಬಿ.ಪ್ರಸನ್ನಕುಮಾರ್, ಶ್ರೀಮತಿ ರಶ್ಮಿ, ಭೋಜೇಗೌಡ ಹಾಗೂ ಕೆ.ಎನ್. ರಾಮಕೃಷ್ಣ ಅವರಿಗೆ ಗೀತಾ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.