ಶಿವಮೊಗ್ಗ: ಇಂದು ತಂತ್ರಜ್ಞಾನ ಸಾಕಷ್ಟು ಮುಂದುವರೆದಿದ್ದು, ತಂತ್ರಜ್ಞಾನದಿಂದ ಹೊಸ ಹೊಸ ಬೆಳವಣಿಗೆಗಳನ್ನು ಕಾಣುತ್ತಿದ್ದೇವೆ. ಮೊಬೈಲ್ನಲ್ಲಿ ವಿವಿಧ ಬಗೆಯ ಅಪ್ಲಿಕೇಶನ್ಗಳಿಂದ ಶಿಕ್ಷಣ, ಆರೋಗ್ಯ ಕುರಿತಾದ ಜ್ಞಾನ ಮತ್ತು ಕೌಶಲ್ಯ ವೃದ್ಧಿಸಿಕೊಳ್ಳಲು ಸಾಕಷ್ಟು ಸಹಕಾರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ನಗರದ ಸ್ಯಾಮ್ಸಂಗ್ ಶೋರೂಮಿನಲ್ಲಿ ಹೊಸದಾಗಿ ಮಾರುಕಟ್ಟೆಗೆ ಲೋಕಾರ್ಪಣೆಗೊಂಡ ಎಸ್ 25 ಅಲ್ಟ್ರಾ ಮಾದರಿಯ ಅತ್ಯಾಧುನಿಕ ಉಪಯೋಗಗಳನ್ನು ಒಳಗೊಂಡ ಮಾದರಿ ಮೊಬೈಲನ್ನು ಬಿಡುಗಡೆಗೊಳಿಸಿ ಮಾತನಾಡಿ, ನಾವು ಸಮಾಜದಲ್ಲಿ ಪರಿಪೂರ್ಣರಾಗಬೇಕಾದರೆ ಅನಿವಾರ್ಯವಾಗಿ ಹೊಸ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲೇಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಗಣೇಶ ಜಿ ಮಾತನಾಡಿ, ತಂತ್ರಜ್ಞಾನದ ಆವಿಷ್ಕಾರಗಳ ಸದುಪಯೋಗವನ್ನು ಪಡೆದುಕೊಂಡು ಯುವಜನರು ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಎಸ್ 25 ಅಲ್ಟ್ರಾ ಮೊಬೈಲ್ ಒಂದು ಮಾಹಿತಿ ಕಣಜವಾಗಿದೆ. ಇಂತಹ ಆವಿಷ್ಕಾರಗಳು ಮುಂದಿನ ದಿನದಲ್ಲಿ ಹೆಚ್ಚು ಆಗಬೇಕಾಗಿದೆ. ಇದರಿಂದ ಜೀವನ ಹಾಗೂ ಸಂಪರ್ಕ ವ್ಯವಹಾರಗಳು ಸುಲಭವಾಗಿ ನೆರವೇರಲಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಆರ್ಯ ವೈಶ್ಯ ಸಹಕಾರ ಸಂಘದ ನಿರ್ದೇಶಕ ಈಶ್ವರ್ ಭೂದಾಳ ಮಾತನಾಡಿ, ನಮ್ಮ ಭಾರತದ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ ಮೊಬೈಲ್ ಅತ್ಯಂತ ಹೆಚ್ಚು ದಾಖಲೆ ರೀತಿ ಮಾರಾಟವಾಗುತ್ತಿದೆ. ಎಲ್ಲಾ ಮೊಬೈಲ್ಗಳಿಗಿಂತ ಅತ್ಯಂತ ವಿಶೇಷ ಅಪ್ಲಿಕೇಶನ್ ಗಳನ್ನು ಒಳಗೊಂಡ ಮೊಬೈಲ್ ಇದಾಗಿದೆ. ಸ್ಯಾಮ್ಸಂಗ್ ಕಂಪನಿ ಒಂದು ನಂಬಿಕೆಯ ಬ್ರಾಂಡ್ ಆಗಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಹತ್ತು ಜನ ಹೊಸ ಗ್ರಾಹಕರು ಮೊಬೈಲ್ಗಳನ್ನು ಖರೀದಿಸಿದರು. ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಮಾಜಿ ಅಧ್ಯಕ್ಷ ಸತೀಶ್ ಚಂದ್ರ, ಲಕ್ಷ್ಮೀಕಾಂತ ಬುದಾಳ್, ಮಂಜುನಾಥ್ ಬೂದಾಳ್, ಸ್ನೇಹಿತರು ಉಪಸ್ಥಿತರಿದ್ದರು.