ಶಿವಮೊಗ್ಗ: ಕೋವಿಡ್ ಹಿನ್ನೆಲೆಯಲ್ಲಿ ಮುಸ್ಲಿಮರು ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಮಾಡಿ ರಂಜಾನ್ ಹಬ್ಬವನ್ನು ಶುಕ್ರವಾರ ಶಿವಮೊಗ್ಗದಲ್ಲಿ
ಸರಳವಾಗಿ ಆಚರಿಸಿದರು.


ಲಾಕ್‌ಡೌನ್ ಇರುವುದರಿಂದ ಮಸೀದಿ ಹಾಗೂ ಈದ್ಗ ಮೈದಾನದಲ್ಲಿ ಸಾಮೂಹಿಕ ನಮಾಜ್ ಮಾಡಲು ಸರ್ಕಾರ ನಿರ್ಬಂಧ ವಿಧಿಸಿದೆ. ಕುಟುಂಬ ಸದಸ್ಯರೊಂದಿಗೆ ಸಾಮೂಹಿಕವಾಗಿ ಮನೆಯೊಳಗೆ ನಮಾಜ್ ಮಾಡಿದರು.
ಪರಸ್ಪರ ಅಲಿಂಗನ, ಕೈ ಕುಲುಕಿಸದೇ ಅಂತರ ಕಾಪಾಡಿಯೇ ಶುಭಾಶಯ ವಿನಿಮಯ ಮಾಡಿಕೊಂಡರು.

ಮಕ್ಕಳು ಮಾತ್ರ ಹೊಸಬಟ್ಟೆ ಧರಿಸಿದರೆ ಬಹುತೇಕರು ಶುಭ್ರ ಬಟ್ಟೆಯಲ್ಲಿಯೇ ಹಬ್ಬ ಆಚರಿಸಿದರು. ಕೆಲವರು ಸಾಮಾಜಿಕ ಅಂತರ ಹಾಗೂ ಮಾಸ್ಕ್‌ಗಳನ್ನು ಹಾಕದೇ ಒಬ್ಬೊರಿಗೊಬ್ಬರು ಅಪ್ಪಿಕೊಳ್ಳುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡ ದೃಶ್ತ ನಗರದಲ್ಲಿ ಅಲ್ಲಿಲ್ಲಿ ಕಂಡು ಬಂದಿತು.


ನೆರೆಹೊರೆಯವರನ್ನು ಹೆಚ್ಚಾಗಿ ಕರೆಯದೇ ಆಪ್ತರನ್ನು ಮಾತ್ರ ಮನೆಗಳಿಗೆ ಕರೆದು ಶಿರ್ ಖುರ್ಮಾ ವಿಶೇಷ ಊಟ ಮಾಡಿಸಿದರು.


ಲಾಕ್‌ಡೌನ್‌ನಿಂದಾಗಿ ವಿವಿಧ ಕಡೆ ಇರುವ ಸಂಬಂಧಿಕರು ಮನೆಗಳಿಗೆ ಭೇಟಿ ನೀಡಲು ಆಗದೇ ಸಾಮಾಜಿಕ ಜಾಲತಾಣದ ಮೂಲಕವೇ ಶುಭಾಶಯ ವಿನಿಮಯ ಮಾಡಿಕೊಂಡರು

By admin

ನಿಮ್ಮದೊಂದು ಉತ್ತರ

error: Content is protected !!