ಶಿವಮೊಗ್ಗ : ಯುಗಾದಿ ಹಬ್ಬದ ಪ್ರಯುಕ್ತ ‘ಅವಿರಾ’ ಉಡುಪು ವತಿಯಿಂದ ಮಾ.೧೩, ೧೪, ೧೫ರಂದು ನಗರದ ರಾಯಲ್ ಆರ್ಕೆಡ್ ಸೆಂಟರ್ನಲ್ಲಿ ಯುಗಾದಿ ಸೀರೆಹಬ್ಬ ಹಬ್ಬ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಖ್ಯಾತ ಚಿತ್ರನಟಿ, ಕಾರುಣ್ಯಗೌಡ ಹೇಳಿದ್ದಾರೆ.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಳೆ ಬೆಳಿಗ್ಗೆ ೧೦.೩೦ಕ್ಕೆ ರಾಯಲ್ ಆರ್ಕೆಡ್ನಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಲಿದ್ದಾರೆ. ಪ್ರತಿದಿನ ಬೆಳಿಗ್ಗೆ ೧೦ರಿಂದ ರಾತ್ರಿ ೮ರ ವರೆಗೆ ಈ ಸೀರೆಹಬ್ಬ ಇರುತ್ತದೆ. ಇಲ್ಲಿ ಎಲ್ಲಾ ರೀತಿಯ ಪ್ಯೂರ್

ಮೈಸೂರು ಕ್ರೇಪ್ ರೇಷ್ಮೆ ಸೀರೆಗಳು, ಪ್ಯೂರ್ ಬನಾರಸಿ ಸೀರೆಗಳು, ಟಿಶ್ಯೂ ರೇಷ್ಮೆಸೀರೆಗಳು, ಪ್ಯೂರ್ ಮುದಲ್ ರೇಷ್ಮೆ, ಪೆನ್ನು ಕಲಂಕರಿ, ಹತ್ತಿಕಟ್ ವರ್ಕ್ ಕಸೂತಿ ಸೀರೆಗಳು, ಪ್ರಿಂಟ್ ಸೀರೆಗಳು ಮತ್ತು ದೈನಂದಿನ ಉಡುಗೆ ಸೀರೆಗಳು ರಿಯಾಯಿತಿ ದರದಲ್ಲಿ ದೊರೆಯುತ್ತದೆ. ಮಹಿಳಾ ಉದ್ಯಮಿಯನ್ನು ಪ್ರೋತ್ಸಾಹಿಸುವ ದೃಷ್ಠಿಯಿಂದ ಜಿಲ್ಲೆಯ ಮಹಿಳೆಯರು ಈ ಸೀರೆಹಬ್ಬದಲ್ಲಿ ಪಾಲ್ಗೊಳ್ಳಬೇಕು. ವಿಶೇಷ ರಿಯಾಯಿತಿಯನ್ನು ‘ಅವಿರಾ’ ಉಡುಪು ವೆಬ್ಸೈಟ್ಗಳಲ್ಲಿ ನಾವು ಘೋಷಿಸಲಿದ್ದೇವೆ. ಸ್ಥಳದಲ್ಲಿ ಕೂಡ ಕೆಲವೊಂದು ವಿಶೇಷ ರಿಯಾಯಿತಿಗಳನ್ನು ವಿವಿಧ ಸೀರೆಗಳ ಮೇಲೆ ನೀಡಲಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮನ್ವಯ ಕಾಶಿ, ಮಮತಾ ಶಿವಣ್ಣ, ಡಾ.ರಘುನಂದನ್, ಸಂತೋಷ್ ಮತ್ತಿತರರಿದ್ದರು.