ಶಿವಮೊಗ್ಗ ತಾಲೂಕು ಪುರದಾಳು ಗ್ರಾಮದ ಶ್ರೀ ಉದ್ಭವ ಬಸವೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಮಾ.11 ಮತ್ತು 12 ರಂದು ನಡೆಯಲಿದೆ. ಪ್ರತಿವರ್ಷ ಶಿವರಾತ್ರಿಗೆ ವಿಜೃಂಬಣೆಯ ಜಾತ್ರೆ ನಡೆಯಲಿದ್ದು, ಮೊದಲ ದಿನ ಬಸವೇಶ್ವರ ಸ್ವಾಮಿಯ ರಥೋತ್ಸವ ಜರುಗಲಿದೆ. ಗಂಗಾಪೂಜೆ, ರುದ್ರಾಭಿಷೇಕ ಮಹಾಮಂಗಳಾರತಿ ನಡೆಯಲಿದೆ, ಸಂಜೆ 5.30ಕ್ಕೆ ಸ್ವಾಮಿಯ ರಾಜಬೀದಿ ರಥೋತ್ಸವ ನೆರವೇರಲಿದೆ. ಈ ಸಂದರ್ಭ ವಿವಿಧ ಜಾನಪದ ಕಲಾತಂಡಗಳಿಂದ ಕಲಾಪ್ರದರ್ಶನವಿದೆ.
ರಾತ್ರಿ 9.30ಕ್ಕೆ ಶ್ರೀ ಬಸವೇಶ್ವರ ಯಕ್ಷಗಾನ ಮಂಡಳಿ ಪುರದಾಳು ಹಾಗೂ ಮಹಾಗಣಪತಿ ಯಕ್ಷಗಾನ ಮಂಡಳಿ ಕಿಲಾರ ಇವರ ಸಹಯೋಗದಲ್ಲಿ ಮಧುರ-ಮಹೇಂದ್ರ ಎಂಬ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ.
ಶುಕ್ರವಾರ ಬೆಳಗ್ಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಮಧ್ಯಾಹ್ನ ಅನ್ನ ಸಂತರ್ಪಣೆ ಇರುತ್ತದೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ದೇವಸ್ಥಾನ ಸಮಿತಿ ಕೋರಿದೆ