ಬೂದಿ ಮುಚ್ಚಿದ ಕೆಂಡವಾಗಿರುವ ಹಿರೇಚೌಟಿ | ಕೌಂಟರ್ ಕೇಸ್ ದಾಖಲಿಸಿದ ಪಿಎಸ್ಐ
ಸೊರಬ: ಗ್ರಾಪಂ ಅಧ್ಯಕ್ಷರ ಆಯ್ಕೆಯಲ್ಲಿ ನಡೆದಿದ್ದ ದ್ವೇಷದ ರಾಜಕೀಯ ನರೇಗಾ ಕಾಮಗಾರಿಯಲ್ಲಿ ಮರುಕಳಿಸಿ ದುಷ್ಕರ್ಮಿಗಳ ತಂಡವೊಂದು ಗ್ರಾಪಂ ಅಧ್ಯಕ್ಷೆಯ ಮನೆಗೆ ನುಗ್ಗಿ ಕುಟುಂಬಸ್ಥರ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ಹಿರೇಚೌಟಿ ಗ್ರಾಮದಲ್ಲಿ ನಡೆದಿದೆ.
ಹುರುಳಿ ಗ್ರಾಪಂ ಅಧ್ಯಕ್ಷೆಯಾಗಿರುವ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾದ ಅನುಸೂಯಮ್ಮ ಎಸ್ಟಿ ಸಮುದಾಯಕ್ಕೆ ಸೇರಿದ್ದರೂ ಸಹ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದನ್ನು ಸಹಿಸದ ವಿರೋಧಿಗಳು ಅಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿಯೂ ತಗಾದೆ ತಗೆದಿದ್ದರು. ಬೂದಿ ಮುಚ್ಚಿದ ಕೆಂಡದಂತಿದ್ದ ಧ್ವೇಷದ ರಾಜಕಾರಿ ನರೇಗಾ ಕಾಮಗಾರಿ ವಿಷಯದಲ್ಲಿ ಬುಗಿಲೆದಿದ್ದು, ಸುಮಾರು 150 ಜನ ಕಾರ್ಯನಿರ್ವಹಿಸುವ ವೇಳೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಈ ವೇಳೆ ಅನುಸೂಯಮ್ಮ ಮಧ್ಯೆ ಪ್ರವೇಶಿಸಿರುವುದು ವಿರೋಧಿಗಳಿಗೆ ಸಹಿಸಲು ಸಾಧ್ಯವಾಗದ ದುಷ್ಕರ್ಮಿಗಳ ತಂಡ ಗ್ರಾಪಂ ಅಧ್ಯಕ್ಷೆ ಮನೆಗೆ ನುಗ್ಗಿ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದೆ. ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಎರಡು ಬಣದ ಮೇಲೆ ಪ್ರಕರಣ ದಾಖಲಾಗಿದ್ದು, ಎರಡು ಗುಂಪಿನ ತಲಾ ೧೭ ಜನರ ಮೇಲೆ ಎಫ್ಐಆರ್ ದಾಖಲಾಗಿದೆ. ಇದರಿಂದ ಹಿರೇಚೌಟಿ ಗ್ರಾಮ ಬೂದಿ ಮುಚ್ಚಿದ ಕೆಂಡದಂತಾಗಿದೆ.
ಹಲ್ಲೆಕೋರರ ರಕ್ಷಣೆಗೆ ನಿಂತ ಪಿಎಸ್ಐ
ಆಡಳಿತ ಬಿಜೆಪಿ ಪಕ್ಷದ ಬೆಂಬಲಿತರು ಮೊದಲು ಅನುಸೂಯಮ್ಮ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಉದ್ಯೋಗ ಖಾತ್ರಿ ಕೆಲಸದ ವೇಳೆಯೂ ರಾಜಕೀಯ ಕೆಸರೆರೆಚಾಟ ನಡೆದಿದೆ ಎನ್ನಲಾಗುತ್ತಿದೆ. ಇದೇ ಜಿದ್ದನ್ನು ಸಾಧಿಸಿದ ವಿರೋಧಿ ಬಣ ರಾತ್ರಿ ವೇಳೆ ಅನುಸೂಯಮ್ಮ ಮನೆಗೆ ನುಗ್ಗಿ ಖಾರದ ಪುಡಿ ಎರಚಿ, ದೊಣ್ಣೆಯಿಂದ ಕುಟುಂಬದ ಸದಸ್ಯರಾದ ವೃದ್ಧನ್ನು ಹಾಗೂ ಮಕ್ಕಳನ್ನೂ ಗಮನಿಸದೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಪರಿಣಾಮ ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಹಾಗೂ ಸೊರಬದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆಯುತ್ತಿದ್ದಂತೆ ಪೊಲೀಸ್ ಇಲಾಖೆಗೆ ಮಾಹಿತಿ ದೊರೆತರೂ, ಮುಂಜಾಗೃತಾ ಕ್ರಮ ಕೈಗೊಳ್ಳದೇ, ಮುಖಂಡರನ್ನು ಠಾಣೆಗೆ ಕೆರೆಸಿ ಚರ್ಚಿಸಿದ ನಂತರವೇ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಹಲ್ಲೆ ನಡೆಸಿದ ಗುಂಪು ಬಿಜೆಪಿ ಬೆಂಬಲಿತರಾಗಿದ್ದು, ಆನವಟ್ಟಿ ಪೊಲೀಸ್ ಠಾಣೆ ಪಿಎಸ್ಐ ಪ್ರವೀಣ್ ವಾಲೀಕಾರ ಹಲ್ಲೆಕೋರರನ್ನು ಠಾಣೆಗೆ ಕರೆಸಿ ಹಲ್ಲೆಗೊಳದವರ ಮೇಲೆಯೂ ಪ್ರಕರಣ ದಾಖಲಿಸಿರುವುದು ಹಲ್ಲೆಕೋರರ ರಕ್ಷಣೆ ನಿಂತರೇ ಪಿಎಸ್ಐ ಎಂಬುದು ಸಾರ್ವಜನಿಕ ವಲಯದಲ್ಲಿ ಬಹು ಚರ್ಚೆಗೆ ಕಾರಣವಾಗಿದೆ. ಇನ್ನೂ ಪಿಎಸ್ಐ ಅವರನ್ನು ಸಂಪರ್ಕಿಸಿದರೆ ಒಂದೇ ಕುಟುಂಬದವರ ಗಲಾಟೆ ಎನ್ನುತ್ತಾರೆ. ಮತ್ತೊಂದಡೆ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದು ಸಾರ್ವಜನಿಕರ ಚರ್ಚೆಗೆ ಕಾರಣವಾಗಿದೆ. ಈ ನಡುವೆ ತನಿಖೆಯು ರಾಜಕೀಯ ಪಕ್ಷದ ಮುಖಂಡರ ಅಣತಿಯಿಂದ ಸಾಗುತ್ತಿದೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.