ಶಿವಮೊಗ್ಗ : ಕೋರ್ಟ್ ಆದೇಶದನ್ವಯ ವಿದ್ಯಾನಗರದ ಬಡಾವಣೆಯಲ್ಲಿ ಮನೆಗಳ ತೆರವು ಕಾರ್ಯಾಚರಣೆ ಕೈಗೊಂಡಿದ್ದು, ಅಲ್ಲಿನ ನಿವಾಸಿಗಳು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯದ ಆದೇಶದನ್ವಯ ಮನೆಗಳ ತೆರವು ಕಾರ್ಯಚರಣೆ ನಡೆಸಲು ಪೋಲಿಸ್ ಹಾಗು ಕೋರ್ಟ್ ಅಮೀನರೊಂದಿಗೆ ಸ್ಥಳಕ್ಕೆ ಬಂದಾಗ ಅಲ್ಲಿನ ನಿವಾಸಿಗಳು ೫೦ ವರ್ಷದಿಂದ ವಾಸವಾಗಿದ್ದು ನಗರಪಾಲಿಕೆಯಿಂದ ಹಕ್ಕು ಪತ್ರ, ಖಾತೆ, ಚರಂಡಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಆದರೂ ಮನೆಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ನ್ಯಾಯಾಲಯ ಸಿಬ್ಬಂದಿಗಳ ವಿರುದ್ಧ ಶಾಸಕ ಚನ್ನಬಸಪ್ಪ ಬಳಿ ದೂರು ಹೇಳಿದರು.
ಈ ಬಗ್ಗೆ ಶಾಸಕ ಚನ್ನಬಸಪ್ಪ ಮಾತನಾಡಿ, ನ್ಯಾಯಾಲಯದ ಆದೇಶ ಗೌರವಿಸಬೇಕು. ಹಾಗೆಯೇ ಮಾನವೀಯತೆ ನೆಲೆಯಲ್ಲಿ ಕ್ರಮ ಕೈಗೊಳ್ಳೋಣ ಎಂದರು.