
ಹುಡುಕಾಟದ ವರದಿ
ಶಿವಮೊಗ್ಗ, ಫೆ.5;
ಬಡವರಿಗೆ ಹಾಗೂ ನಿರ್ಗತಿಗಳಿಗೆ ತುತ್ತಿಗೆ ತೊಂದರೆಯಾಗದಿರಲೆಂದು ಮಾಡಿರುವಂತಹ ಹಸಿರು ಕಾರ್ಡ್ ಅಂದರೆ ಬಿಪಿಎಲ್ ಕಾರ್ಡ್ ವ್ಯವಸ್ಥೆಯನ್ನು ನಾನಾ ನಮೂನೆಯಲ್ಲಿ ವ್ಯವಹಾರ ಮಾಡಿಕೊಂಡ ಸಾಕಷ್ಟು ನಿದರ್ಶನಗಳು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಂಗಳದಲ್ಲಿ ಕೇಳಿ ಬರುತ್ತಲೇ ಇವೆ.
ಇದಕ್ಕೆ ಪೂರಕವಾದಂತೆ ಶಿವಮೊಗ್ಗದ ಸರ್ಕಾರಿ ನೌಕರರೊಬ್ಬನ ಕುಟುಂಬದ ಬಿಪಿಎಲ್ ಕಾರ್ಡ್ ನಲ್ಲಿ ಆತನನ್ನು ಮಾತ್ರ ಯಾವುದೇ ದಂಡ ವಿಧಿಸದೆ ಏಕಏಕಿ ಕಿತ್ತುಹಾಕಿ ಉಳಿದವರನ್ನು ಬಿಪಿಎಲ್ ಕಾರ್ಡ್ ನಲ್ಲಿ ಮುಂದುವರೆಸಿರುವ ಬಗ್ಗೆ ನಾನಾ ಅನುಮಾನಗಳು ಭಾರಿ ಪ್ರಮಾಣದ ಎತ್ತುವಳಿ ನಡೆದಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.

ಶಿವಮೊಗ್ಗದ ಗಂಗಾಧರ್ ಎಂಬುವವರು ಈ ಸಂಬಂಧ ಮಾಹಿತಿ ಹಕ್ಕು ಅರ್ಜಿಯನ್ನು ಹಾಕಿದ್ದು 06-12- 2024 ರಂದು ಪಡಿತರ ಚೀಟಿ ಸಂಖ್ಯೆ 240500216547 ರಲ್ಲಿದ್ದ ಐದು ಐದು ಜನರಲ್ಲಿ ಈಗ ಏಕಾಏಕಿ ನಾಲ್ಕು ಜನರನ್ನಾಗಿ ಮಾಡಿ ಉಳಿದ ಒಬ್ಬನೇ ಒಬ್ಬ ವ್ಯಕ್ತಿಯನ್ನು ಡಿಲೀಟ್ ಮಾಡಿರುವ ಬಗ್ಗೆ ನಿಖರವಾದ ಮಾಹಿತಿ ಲಭಿಸಿದೆ.

ವಿಚಿತ್ರವೆಂದರೆ ಬಿಪಿಎಲ್ ಕಾರ್ಡ್ ನಿಂದ ವಜಾ ಆದ ವ್ಯಕ್ತಿ ಶಿವಮೊಗ್ಗ ಮಹಾನಗರ ಪಾಲಿಕೆಯ ಸರ್ಕಾರಿ ನೌಕರಿ ಹುದ್ದೆಗೆ ಕಳೆದ ಒಂದು ವರ್ಷ ಮೂರು ತಿಂಗಳ ಮುಂಚೆಯೇ ನೇಮಕವಾಗಿದ್ದ, ಇಡೀ ಕುಟುಂಬದ ಬಿಪಿಎಲ್ ಕಾರ್ಡ್ ಎಪಿಎಲ್ ಕಾರ್ಡ್ ಆಗಿ ಬದಲಾವಣೆ ಆಗಬೇಕಿತ್ತು. ಆದರೆ ಅಂತಹ ಬದಲಾವಣೆ ಆಗಿಲ್ಲ. ಆತನನ್ನು ಮಾತ್ರ ಕಾರ್ಡ್ ನಿಂದ ಹೊರಗಿಟ್ಟು ಹೇಗೆ ತಾನೇ ಉಳಿದವರನ್ನು ಬಿಪಿಎಲ್ ಕಾರ್ಡ್ ನಲ್ಲಿ ಉಳಿಸಿದಿರಿ. ಹೆಸರು ತಿದ್ದುಪಡಿ ಸೇರ್ಪಡೆ ಬಗ್ಗೆ ಎಷ್ಟೋ ಜನ ಸಾರ್ವಜನಿಕರು ಅರ್ಜಿ ಕೊಟ್ಟು ತಿಂಗಳುಗಟ್ಟಲೆ ಕಾದಿರ್ತಾರೆ. ಆದರೆ ಇವರು ಅರ್ಜಿ ಕೊಟ್ಟ ತಕ್ಷಣ ಕೇವಲ ಮೂರು ಗಂಟೆ ಒಳಗೆ ಅವರ ಕಾರ್ಡಿನಲ್ಲಿ ಈ ಬದಲಾವಣೆ ಮಾಡಿದ್ದಾರೆ. ಒಂದು ವರ್ಷ ಇತರೆ ತಿಂಗಳು ಆ ಸರ್ಕಾರಿ ನೌಕರರ ಹೆಸರಲ್ಲಿ ಪಡೆದಿರುವ ಆಹಾರ ಧಾನ್ಯಗಳು ಹೇಗೆ ನ್ಯಾಯ ಸಮ್ಮತವಾಗುತ್ತದೆ ಎಂಬುದು ಇಲ್ಲಿ ಸಾಧ್ಯ ಎಂಬುದು ಪ್ರಶ್ನೆ.

ಅವರು ಕೇಳಿದಾಕ್ಷಣ ಇಷ್ಟು ಬೇಗ ಅವರ ಕೆಲಸವನ್ನು ಮಾಡಿದ್ದಾದರೂ ಹೇಗೆ? ಬೇರೆಯವರ ಕೆಲಸ ನಿಮಗೆ ಕಣ್ಣಿಗೆ ಕಾಣುವುದಿಲ್ಲವೇ? ಎಷ್ಟೋ ಅಮಾಯಕರು ಬಡವರು ನಿರಾಶ್ರಿತರು ಕಾಡಿಗೆ ಬಂದು ನಿಮ್ಮ ಮುಂದೆ ಎಷ್ಟೇ ಅಂಗಲಾಚಿದರು ಅವರಿಗೆ ಕಾರ್ಡ್ ಸಿಗುವುದು ಕಷ್ಟ.
ಆದರೆ ಇಲ್ಲಿ ಡಿ ಜೆ ಮಂಜುನಾಥ್, ಸಹಾಯಕ ನಿರ್ದೇಶಕರು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಅನೌಪಚಾರಿಕ ಪಡಿತರ ಪ್ರದೇಶ, ಗೋಪಾಲ ಗೌಡ ಬಡಾವಣೆ, ಶಿವಮೊಗ್ಗ ಅವರು ಇಂತಹ ಬದಲಾವಣೆಯನ್ನು ಅದೆಷ್ಟು ಬೇಗ ಯಾವ ರೀತಿ ಮಾಡಿಕೊಟ್ಟರು. ಪೂರಕವಾದಂತೆ ಎಲ್ಲಾ ದಾಖಲಾತಿಗಳನ್ನು ಕೇಳಿದಾಗ ಇದೇ ಮಂಜುನಾಥ್ ಅವರು ಸದರಿ ಪಡಿತರ ಚೀಟಿಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಅರ್ಜಿ ವಾರು ಭೌತಿಕವಾಗಿ ನಿರ್ವಹಿಸುವುದಿಲ್ಲ. ಆದ್ದರಿಂದ ತಾವುಗಳು ಕೋರಿರುವ ಮಾಹಿತಿಯನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದರು.

ಮೇಲ್ಮಮವಿಯಲ್ಲಿ ಈಗ ಈ ದಾಖಲಾತಿಗಳನ್ನು ಕೊಡಲು ಉಪನಿರ್ದೇಶಕರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಹಾಯಕ ನಿರ್ದೇಶಕರು ಮತ್ತು ಅವರ ತಂಡ ಮಾಡಿರುವ ತಪ್ಪಿಗೆ ಮೊದಲು ಅವರಿಗೆ ದಂಡ ವಿಧಿಸಿ ಶಿಕ್ಷೆ ನೀಡಬೇಕು ಎಂಬುದು ಗಂಗಾಧರ್ ಅವರ ಅಗ್ರಹ.
ಬೆಟ್ಟದಷ್ಟು ಮೋಸದ ಮಾಹಿತಿಗಳನ್ನು, ಬೆಟ್ಟದಷ್ಟು ಅಕ್ರಮಗಳನ್ನು, ಬಗೆದಷ್ಟು ಲೋಪಗಳನ್ನು ಈ ಇಲಾಖೆಯ ಬುಡದಲ್ಲಿ ನಿರಂತರವಾಗಿ ಕಾಣುತ್ತಿದ್ದೇನೆ.
ಇಲ್ಲಿಗೆ ಕಾರ್ಡ್ ಗಾಗಿ ಸುಮಾರು ದೂರದ ಕಚೇರಿಗೆ ಹೋಗಿ ದಿನವಿಡಿ ಕುಳಿತುಕೊಳ್ಳುವ ಅದೆಷ್ಟೋ ಜನರು ಇವರ ಕಣ್ಣಿಗೆ ಕಾಣಿಸುವುದೇ ಇಲ್ಲ. ಶಿವಮೊಗ್ಗ ಜಿಲ್ಲಾಧಿಕಾರಿಗಳು ಒಮ್ಮೆ ಗಮನಿಸುವುದು ಹಾಗೂ ಸೂಕ್ತ ತನಿಖೆ ನಡೆಸುವುದು ಅತ್ಯಗತ್ಯ ಎಂಬುದು ಸಾರ್ವಜನಿಕ ಒತ್ತಾಯ.