ಶಿವಮೊಗ್ಗದ ತುಂಗಾತರಂಗ ದಿನಪತ್ರಿಕೆಯ ವಾರ್ಷಿಕ ದಿನದರ್ಶಿಕೆಯನ್ನು ಇಂದು ಆದಿಚುಂಚನಗಿರಿ ಶಾಖಾಮಠದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ವೀಕ್ಷಿಸಿ ಪತ್ರಿಕಾ ಕಾರ್ಯಕ್ಕೆ ಶುಭಾಶೀರ್ವಾದ ಮಾಡಿದರು.
ಈ ಸಂದರ್ಭದಲ್ಲಿ ಸಂಪಾದಕ ಎಸ್. ಕೆ. ಗಜೇಂದ್ರ ಸ್ವಾಮಿ, ಪತ್ರಿಕೆಯ ಹಿತೈಷಿಗಳಾದ ಎಸ್ ರಮೇಶ್, ಕೆ ನಾಗರಾಜ್, ಎಂಪಿ ಗಣೇಶ್, ಎಸ್ ಭರತ್, ಹಾಡೋನಹಳ್ಳಿ ಜಗದೀಶ್, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಆರುಂಡಿ ಶ್ರೀನಿವಾಸ್, ಹಿರಿಯ ಪತ್ರಕರ್ತರಾದ ಜಿಸಿ
ಸೋಮಶೇಖರ್, ಮೋಹನ್, ವಿದ್ವಾನ್ ದತ್ತ ಮೂರ್ತಿ ಭಟ್, ದೈಹಿಕ ಶಿಕ್ಷಕ ತಿಮ್ಮೇನಹಳ್ಳಿ, ಪತ್ರಿಕಾ ಬಳಗದ ಎ ರಾಕೇಶ್, ರವಿ ಸೋಮಿನಕೊಪ್ಪ ಹಾಗೂ ಇತರರು ಉಪಸ್ಥಿತರಿದ್ದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಆರುಂಡಿ ಶ್ರೀನಿವಾಸ್ ಅವರಿಗೆ ಆದಿಚುಂಚನಗಿರಿ ಮಹಾ ಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಆತ್ಮೀಯವಾಗಿ ಸನ್ಮಾನಿಸಿ ಶುಭ ಹರಸಿದರು. ಈ ಸಂದರ್ಭದಲ್ಲಿ ಪತ್ರಕರ್ತ ಎಸ್ಕೆ. ಗಜೇಂದ್ರ ಸ್ವಾಮಿ, ಪ್ರಮುಖರಾದ ಗಣೇಶ್ ನಾಗರಾಜ್ ರಮೇಶ್ ಹಾಗು ಇತರರು ಉಪಸ್ಥಿತರಿದ್ದರು