ಶಿವಮೊಗ್ಗ, ಫೆ.5:
ಗಲೀಜುಮಯ ಶಿವಮೊಗ್ಗ ಪ್ರೀಡಂ ಪಾರ್ಕ್,
ಕಾರ್ಯಕ್ರಮ ಮಾಡಿ ಕಸ ಬಿಟ್ಟೋದವರಿಗೆ ದಂಡ ಹಾಕಿ,
ವಾಕಿಂಗ್ ಮಾಡೋರು ತಾಳದ ಗಬ್ಬು ವಾಸನೆ,
ಅಲ್ಲೇ ಡೈಲಿ ಎಣ್ಣೆ ದರಬಾರು,
ಅಕ್ರಮ ಲೈಂಗಿಕತೆ ನಡೀತಿದೆ ನೋಡ್ರಿ,
ಬೀದಿ ನಾಯಿಗಳ ಜೊತೆ ಈಗ ಹೆಚ್ಚಿದ ಹಂದಿ ಹಾವಳಿ,
ಕಡಿವಾಣ ಹಾಕೋ ಪಾಲಿಕೆ, ರಕ್ಷಣಾ ಇಲಾಖೆ ಅಧಿಕಾರಿಗಳೇ ನಾಪತ್ತೆ,
ಅಲ್ಲೆ ಇರೋ ಭದ್ರತಾ ಪೊಲೀಸರಿಗೆ ಅಕ್ರಮ ತಡೆಗೆ ಜವಾಬ್ದಾರಿ ಕೋಡೊಕೇನು ದಾಡಿ?..,
ಇಂತಹ ನೂರಾರು ಪ್ರಶ್ನೆಗಳನ್ನು ಸಾರ್ವಜನಿಕ ವಲಯ ಶಿವಮೊಗ್ಗ ಮಹಾನಗರ ಪಾಲಿಕೆಗೆ ಹಾಗೂ ಜಿಲ್ಲಾಡಳಿತಕ್ಕೆ ಕೇಳುತ್ತಿದೆ. ಕಾರಣ ಇಷ್ಟೇ ಹಂದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಅದರೊಂದಿಗೆ ಕಾರ್ಯಕ್ರಮ ನಡೆಯುವ ನಂತರ ಗಲೀಜಾದ ವಾಸನೆ ಕೊಳಕು ತುಂಬಿಕೊಂಡಿದ್ದು ನಿತ್ಯ ವಾಕಿಂಗ್ ಮಾಡುವವರು ಮೂಗುಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಬಂದಿದೆ. ಇಂತಹ ಪರಿಸ್ಥಿತಿಗೆ ಪೂರಕವಾದ ರೀತಿಯಲ್ಲಿ ಇದರ ಜವಾಬ್ದಾರಿ ನೋಡಿಕೊಳ್ಳುವ ಅಧಿಕಾರಿಗಳು ಹಾಗೂ ನೌಕರರು ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೂಡಲೇ ನಗರ ಪಾಲಿಕೆ ವ್ಯಾಪ್ತಿಯ ಈ ಅಲ್ಲಮಪ್ರಭು ಉದ್ಯಾನವನವನ್ನು ಶುಚಿಗೊಳಿಸಬೇಕು. ಇರುವ ಗಲೀಜನ್ನು ತೆಗೆದು ಹಾಕಬೇಕು. ನಡೆಯುವ ಅಕ್ರಮ ಚಟುವಟಿಕೆಗಳಿಗೆ ಸಂಪೂರ್ಣವಾದ ಬ್ರೇಕ್ ಹಾಕಬೇಕು ಎಂಬುದು ಸಾರ್ವಜನಿಕರ ಕಳಕಳಿಯ ಒತ್ತಾಯ.
ಇಲ್ಲಿ ಇರುವಂತಹ ಹಳೆ ಜೈಲಿನ ಹಿಂಭಾಗದ ತೆಂಗಿನಕಾಯಿ ತೋಟದ ಜಾಗದಲ್ಲಿ ಅಕ್ರಮ ಚಟುವಟಿಕೆಗಳು ಮಿತಿಮೀರಿ ನಡೆಯುತ್ತಿವೆ. ಅಲ್ಲೇ ಇರುವ ಹುಣಸೆ ಮರದ ಕೆಳಗೆ ನಿತ್ಯ ಸಂಜೆ ಹತ್ತಾರು ಜನ ಕುಡಿಯುವ ಕಾಯಕದಲ್ಲಿ ಮಗ್ನರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ಭದ್ರತೆಯನ್ನು ಒಂದಿಷ್ಟು ರಕ್ಷಣಾ ವ್ಯವಸ್ಥೆಯನ್ನು ನೀಡುವುದು ಅತ್ಯಂತ ಅಗತ್ಯ ಎಂಬುದು ಸಾರ್ವಜನಿಕ ಒತ್ತಾಯ.
ಶಿವಮೊಗ್ಗದ ಅತಿ ಹೆಚ್ಚು ಜನರ ವಾಕಿಂಗ್ ಸ್ಥಳವಾದ ಅಲ್ಲಮಪ್ರಭು ಉದ್ಯಾನವನದಲ್ಲಿ ಕಾರ್ಯಕ್ರಮ ನಡೆದ ನಂತರ ಕಾರ್ಯಕ್ರಮ ಮಾಡಿದವರು ಸ್ವಚ್ಛತೆ ಮಾಡದ ಹಿನ್ನೆಲೆಯಲ್ಲಿ ಅತ್ಯಂತ ಕೊಳಕಾದ ವಾಸನೆ ಹಾಗೂ ಗಲೀಜು ಕಸದ ರಾಶಿ ತುಂಬಿ ತುಳುಕಾಡುತ್ತಿದೆ. ಪಾಲಿಕೆ ಈ ಹಿನ್ನೆಲೆಯಲ್ಲಿ ಅದನ್ನು ಆದಷ್ಟು ಬೇಗನೆ ಸ್ವಚ್ಛಗೊಳಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು
ಸ್ಮಾರ್ಟ್ ಲೋಕೇಶ್,
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ,
ಉದ್ಯಮಿ ಶಿವಮೊಗ್ಗ