ತುಮರಿ: ಸಮೀಪದ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಮಕರ ಸಂಕ್ರಮಣ ಜಾತ್ರಾ ಮಹೋತ್ಸವದ ಮೊದಲ ದಿನ ದಿನ ದೇವಿಗೆ ವಿಶೇಷ ಪೂಜೆ ನೇರವೇರಿತು.
ಮಂಗಳವಾರ ಬೆಳಿಗ್ಗೆ 5ರಿಂದ ದೇವಿಗೆ ಪಂಚಾಮೃತ ಅಭಿಷೇಕ. ಮಹಾಭಿಷೇಕ. ಅರ್ಚನೆ ದೇವಿಯ ಮೂಲ ಸ್ಥಾನದಲ್ಲಿ ನವ ಚಂಡಿಕಾ ಹೋಮ ನೆರವೇರಿತು. ಹೋಮ ಹವನ ಪೂರ್ವಹುತಿಯಲ್ಲಿ ಧರ್ಮಾಧಿಕಾರಿ ಡಾ ಎಸ್ ರಾಮಪ್ಪನವರು ಕುಟುಂಬ ಸಮೇತರಾಗಿ ಭಾಗವಹಿಸಿ, ವಿವಿಧ ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಾಗಿಯಾದರು.
ಹರಿದು ಬಂದ ಭಕ್ತರು.
ಮೂದಲ ದಿನದ ದಿನದ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಭಕ್ತರು ಆಗಮಿಸಿ ದೇವಿಗೆ ಹೂವು. ಅಕ್ಕಿ. ಬೆಲ್ಲ. ವಿವಿಧ ಸೇವೇ ನೀಡಿ ಹರಕೆ ಪೂಜೆ ಸಲ್ಲಿಸಿ. ಮುಡಿಗಂಧ ಪ್ರಸಾದ ಸ್ವೀಕರಿಸಿದರು.
ಸೀಗೇ ಕಣಿವೆಯ ಮೂಲ ಸ್ಥಳದಿಂದ ನೂರಾರು ಮಹಿಳೆಯರು ಪೂರ್ಣಕುಂಭ ಕಳಶ ಹೊತ್ತು, ಚೌಡೇಶ್ವರಿ ದೇವಿಗೆ ಉಘೇ ಉಘೇ ಎಂದು ಈಗಿನ ಸಿಗಂದೂರಿನತ್ತ ಹೆಜ್ಜೆ ಹಾಕಿದರು. ಸಿಗೇ ಕಣಿವೆಯ ಮೂಲ ಸ್ಥಾನದಲ್ಲಿ ದೇವಿಯ ಉದ್ಭವ ಸ್ಥಳದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಹೊಸನಗರದ ಯೋಗೇಂದ್ರ ಅವಧೂತ ಸ್ವಾಮೀಜಿ ಶ್ರೀ ಕ್ಷೇತ್ರ ಕಾರ್ತಿಕೇಯ ಪೀಠ, ಸಾರಗನ ಜಡ್ಡು ಇವರು ಜಾತ್ರಾ ಮಹೋತ್ಸವದ ವೇದಿಕೆಯ ದಿವ್ಯ ಸಾನಿಧ್ಯ ವಹಿಸಿ ಅಶಿರ್ವಚನ ನೀಡಲಿದ್ದಾರೆ.
ಅಖಂಡ ಜ್ಯೋತಿ ಮೆರವಣಿಗೆಗೆ ಧರ್ಮಾಧಿಕಾರಿ ಡಾ ಎಸ್ ನವರ ಸಮ್ಮುಖದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ ಜಿ ಚಾಲನೆ ನೀಡಿದರು. ಜಾತ್ರಾ ಮಹೋತ್ಸವಕ್ಕೆ ಚಾಲನೆಯನ್ನು, ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ನೇರವೇರಿಸಿದರು, ಅಥಿತಿಗಳಾಗಿ ಚಿಕ್ಕಬಳ್ಳಾಪುರ ಲೋಕಾಯುಕ್ತ ಡಿವೈಎಸ್ ಪಿ ಪಿ.ವೀರೇಂದ್ರ ಕುಮಾರ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಈಡೀಗ ಸಂಘದ ರಾಜ್ಯ ಘಟಕದ ಅಧ್ಯಕ್ಷ ತಿಮ್ಮೇಗೌಡ, ಈಡೀಗ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಕೆಡಿಪಿ ಸದಸ್ಯ ಸತ್ಯನಾರಾಯಣ ಸತ್ಯನಾರಾಯಣ ಜಿ ಟಿ, ತಾಲ್ಲೂಕು ಪಶು ವೈದ್ಯಕೀಯ ನಾಮ ನಿರ್ದೇಶಕ ಸದಸ್ಯ ಗಣೇಶ ಜಾಕಿ, ಶ್ರೀದೇವಿ ರಾಮಚಂದ್ರ. ಜಿಲ್ಲಾ ಮಟ್ಟದ ವಿವಿಧ ಸದಸ್ಯರು, ಕರೂರು ಹೋಬಳಿಯ ಹಲವು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು. ಸದಸ್ಯರು ಗಣ್ಯರು ಉಪಸ್ಥಿತರಿದ್ದರು.
ಆನ್ನ ದಾಸೋಹದಲ್ಲಿ ತುಂಬಿ ತುಳಿಕಿದ ಭಕ್ತರು.
ಪ್ರಥಮ ದಿನದ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ಅನ್ನ ಪ್ರಸಾದ ಪಡೆದರು. ಭಕ್ತಾದಿಗಳು ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ನಿರಂತರವಾಗಿ ಬೆಳಿಗ್ಗೆ. ಮಧ್ಯಾಹ್ನ. ಸಂಜೆ ದೇವಸ್ಥಾನ ಸಮಿತಿ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು.
ಸಂಜೆ 5ಗಂಟೆಯಿಂದ ವೇದಿಕೆಯಲ್ಲಿ ವಿವಿಧ ಕಲಾ ತಂಡಗಳಿಂದ ಭಜನೆ, ನಾಟ್ಯ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7ರಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ನೆಡೆಯಿತು.
ಲಾಂಚ್ ನಲ್ಲಿ ಹೆಚ್ಚಿದ ಜನ ದಟ್ಟಣೆ.
ಮಂಗಳವಾರ ಜಾತ್ರಾ ಮಹೋತ್ಸವದ ಪ್ರಥಮ ದಿನ ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ ಭಕ್ತರು ಟ್ಯಾಕ್ಸಿ, ಬಸ್ಸು ದ್ವಿಚಕ್ರ ವಾಹನದಲ್ಲಿ ಆಗಮಿಸಿ. ಅಂಬಾರಗೊಡ್ಲು ಲಾಂಚ್ ತಟದಲ್ಲಿ ವಾಹನ ನಿಲ್ಲಿಸಿ. ಹೊಳೆಬಾಗಿಲು ಲಾಂಚ್ ಮೂಲಕ ಸಿಗಂದೂರು ದೇವಸ್ಥಾನ ಭಾಗಕ್ಕೆ ಬಂದರು. ಜನ ದಟ್ಟಣೆ ಹೆಚ್ಚು ಹಿನ್ನೆಲೆಯಲ್ಲಿ ಭಕ್ತರು. ಸ್ಥಳಿಯರು ಪ್ರಯಾಣ ಮಾಡಲು ಹರ ಸಾಹಸ ಪಟ್ಟರು.