ಶಿವಮೊಗ್ಗ : ಅಣ್ಣನಿಂದಲೇ ತಮ್ಮನ ಹತ್ಯೆಯಾಗಿರುವ ಘಟನೆ ಅನುಪಿನಕಟ್ಟೆಯಲ್ಲಿ ವರದಿಯಾಗಿದೆ.
ಗಿರೀಶ್ ನಾಯ್ಕ (30) ಮೃತಪಟ್ಟ ವ್ಯಕ್ತಿ. ಇಲ್ಲಿನ ಲಂಬಾಣಿ ತಾಂಡಾದ ಮನೆಯೊಳಗೆ ಲೋಕೇಶ್ ನಾಯ್ಕ ಎಂಬಾತ ತನ್ನ ಸಹೋದರ ಗಿರೀಶ್ನನ್ನು ಕೊಲೆ ಮಾಡಿದ್ದಾರೆ. ವೈಯಕ್ತಿಕ ಕಾರಣಕ್ಕೆ ಇಬ್ಬರ ಮಧ್ಯೆ ಗಲಾಟೆಯಾಗಿ ಹತ್ಯೆಯಾಗಿದೆ ಎಂದು ಹೇಳಲಾಗುತಿದೆ.
ಸ್ಥಳಕ್ಕೆ ತುಂಗಾ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಲೋಕೇಶ್ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.