ಶಿವಮೊಗ್ಗ :-ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯು ಪ್ರತಿ ತಿಂಗಳು ಏರ್ಪಡಿಸುವ ಸಾಹಿತ್ಯ ಹುಣ್ಣುಮೆಯ 247 ನೇ ತಿಂಗಳ ಕಾರ್ಯಕ್ರಮವನ್ನು, ಪೋಲಿಸ್ ಲೇಔಟ್ ನಿವಾಸಿಗಳ ಸಂಘದ ಸಹಯೋಗದಲ್ಲಿ ವೃದ್ಧಾಶ್ರಮದ ಎದುರಿರುವ ಪೋಲಿಸ್ ಸಮುದಾಯ ಭವನದಲ್ಲಿ ಮಾ.8 ರ ಭಾನುವಾರ ಸಂಜೆ 6 ಕ್ಕೆ ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶ್ವೇತಾ ಬಂಡಿ ಉದ್ಘಾಟಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪೋಲಿಸ್ ಲೇಔಟ್ ನಿವಾಸಿಗಳ ಸಂಘದ ಅಧ್ಯಕ್ಷರಾದ ಕುಪ್ಪಯ್ಯ, ಯುವ ಮುಖಂಡರಾದ ಶಶಿಧರ ಭಾಗವಹಿಸಲಿದ್ದಾರೆ. ಹಿಂದಿನ ಸಾಹಿತ್ಯ ಹುಣ್ಣಿಮೆ ಆತಿಥ್ಯ ವಹಿಸಿದ್ದ ಹೊಸನಗರ ಚಂದ್ರಶೇಖರ ಶೇಟ್ ಉಪಸ್ಥಿತರಿರುತ್ತಾರೆ.

ಗಾಯಕರಾದ ಪ್ರಿಯಾಂಕಾ ಜೆ.ಬಿ., ಸುಜಾತಾ ಮತ್ತು ತಂಡ, ನಿವೃತ್ತ ಅರಣ್ಯಾಧಿಕಾರಿಗಳಾದ ಅಣ್ಣಪ್ಪ ಹಾಡು ಹೇಳುತ್ತಾರೆ. ತೀರ್ಥಹಳ್ಳಿಯ ಖ್ಯಾತ ಕಲಾವಿದ ನಿಶ್ಚಲ್ ಜಾದೂಗಾರ್ ಮತ್ತು ತಂಡದವರು ಹಾಸ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕವಿಗಳಾದ ಭಾರತಿ ಎಚ್. ಡಿ., ಮಂಜುಳಾ, ಶಶಿಕಲಾ ಗೌಡ, ಗಾಯತ್ರಿ ಎಸ್. ಕೆ. ಕವನ ವಾಚಿಸಲಿದ್ದಾರೆ. ಸತ್ಯನಾರಾಯಣ ಹನಿಗವನ ವಾಚಿಸಲಿದ್ದಾರೆ. ಡಾ. ನಾಗೇಂದ್ರ ಕಥೆ ಹೇಳಲಿದ್ದಾರೆ.
ಬಡಾವಣೆಯ ನಿವಾಸಿಗಳು, ಸಾಹಿತ್ಯ ಸಾಂಸ್ಕೃತಿಕ ಮನಸ್ಸುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಹಿತ್ಯ ವೇದಿಕೆ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.