ಶಿವಮೊಗ್ಗ, ಮಾರ್ಚ್ 03 : ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕಚೇರಿಯ ಆವರಣದಲ್ಲಿ ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಯ ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಕಾಡಾ ಅಧ್ಯಕ್ಷರಾದ ಡಾ. ಕೆ. ಪಿ. ಅಂಶುಮAತ್ ರವರು, ಕಾಡಾ ಕಛೇರಿಯಿಂದ ಕೃಷಿ ಚಟುವಟಿಕೆಗಳಿಗೆ ಉಪಯೋಗವಾಗುವ ಕೃಷಿ ಯೊಂತ್ರೋಪಕರಣ ಹಾಗೂ ವಾರ್ಷಿಕ ಕಾರ್ಯಅನುದಾನವನ್ನು ಇತ್ತೀಚೆಗೆ ನೀಡಿದರು.
ಈ ವೇಳೆ ಅವರು ಮಾತನಾಡಿ, ಕೃಷಿ ವಲಯದ ದಕ್ಷತೆಯನ್ನು ಹೆಚ್ಚಿಸಲು, ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಹಾಗೂ ಕೃಷಿ ಆರ್ಥಿಕತೆಯನ್ನು ಸುಧಾರಿಸಲು ಕೃಷಿ ಯಾಂತ್ರೀಕರಣ ಅಗತ್ಯವಾಗಿದೆ. ಹಾಗೂ ಪ್ರಸ್ತುತ ಕೃಷಿ ಚಟುವಟಿಕೆಗಳಿಗೆ ಕಾರ್ಮಿಕರ ಕೊರತೆಯಿಂದಾಗಿ ಕೃಷಿ

ಯಂತ್ರೋಪಕರಣಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಬೇಡಿಕೆಗ ತಕ್ಕಂತೆ, ಕೃಷಿ ಯಂತ್ರೋಪಕರಣಗಳು ಕೂಡ ದುಬಾರಿಯಾಗುತ್ತಿವೆ. ಈ ನಿಟ್ಟಿನಲ್ಲಿ ಸರ್ಕಾರ ರೈತರಿಗೆ ಸಹಾಯವಾಗಲೆಂದು ಕೃಷಿ ಯಂತ್ರೋಪಕರಣ ಖರೀದಿಸಲು ಸಹಾಯಧನ ನೀಡುತ್ತಿದ್ದು, ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಕಾಡಾ ವತಿಯಿಂದ ನೀಡಲಾಗುತ್ತಿರುವ ಕೃಷಿ ಯಂತ್ರೋಪಕರಣಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಡಾ ಆಡಳಿತಾಧಿಕಾರಿಗಳಾದ ಆರ್, ಸತೀಶ್ ಹಾಗೂ ಭೂ ಅಭಿವೃದ್ಧಿ ಅಧಿಕಾರಿಗಳಾದ ಕೆ ಪ್ರಶಾಂತ್ (ತಾಂತ್ರಿಕ),(ಕೃಷಿ)(ಪ್ರ) ಹಾಗೂ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ|| ಶಶಿಧರ್, ಡಾ. ನಾಗೇಶ್ ಎಸ್, ಡೋಂಗರೆ (ಸಹಕಾರ) ಮತ್ತು ಭದ್ರ ಕಾಡಾ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.