ಜ.5: ನೂತನ ಗ್ರಂಥಾಲಯ ಕಟ್ಟಡದ ಉದ್ಘಾಟನಾ ಸಮಾರಂಭ
ಶಿವಮೊಗ್ಗ : ಸಹ್ಯಾದ್ರಿ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ನೂತನವಾಗಿ ನಿರ್ಮಿಸಿರುವ ಗ್ರಂಥಾಲಯ ಕಟ್ಟಡದ ಉದ್ಘಾಟನಾ ಸಮಾರಂಭ ಜನವರಿ 5 ರ ಬೆಳಿಗ್ಗೆ 9:30 ಕ್ಕೆ ಆಯೋಜಿಸಲಾಗಿದೆ.
ಸಹ್ಯಾದ್ರಿ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಂಥಾಲಯದ ಕಟ್ಟಡದ ಉದ್ಘಾಟನೆಯನ್ನ ಸಂಸದ ಬಿ.ವೈ.ರಾಘವೇಂದ್ರ, ನಾಮಪಲಕ ಅನಾವರಣವನ್ನ ಶಾಸಕ ಚನ್ನಬಸಪ್ಪ ನೆರವೇರಿಸಲಿದ್ದು, ಸಂಘದ ಅಧ್ಯಕ್ಷ ಶಿವನಾಗಪ್ಪ ಎಸ್ ಮಂಡಕ್ಕಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಎಂಎಲ್ ಸಿ ಡಿ.ಎಸ್.ಅರುಣ್ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘದ ಕಾರ್ಯದರ್ಶಿ ಟಿ.ಮಂಜಪ್ಪ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಜನವರಿ 5 ರಂದು “ಸಿ. ಅಶ್ವತ್ ಗಾನಸಿರಿ” ಕಾರ್ಯಕ್ರಮ
ಶಿವಮೊಗ್ಗ : ರಾಗ ರಂಜನಿ ಟ್ರಸ್ಟ್ (ರಿ), ಶಿವಮೊಗ್ಗ ವತಿಯಿಂದ ಸಿ.ಅಶ್ವತ್ ರವರು ಸ್ವರ ಸಂಯೋಜಿಸಿ-ಹಾಡಿರುವ ಗೀತೆಗಳ ಗಾಯನ “ಸಿ. ಅಶ್ವತ್ ಗಾನಸಿರಿ” ಕಾರ್ಯಕ್ರಮ ಜನವರಿ 05 ರಂದು ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಸದರಿ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿರುತ್ತದೆ ಎಂದು ರಾಂಗರಂಜಿನಿ ಟ್ರಸ್ಟ್ ಅಧ್ಯಕ್ಷ ಪ್ರಹ್ಲಾದ್ ದಿಕ್ಷಿತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನವರಿ 06 ರಂದು 18 ನೇ ವಾರ್ಷಿಕೋತ್ಸವ ಮತ್ತ ಚಿಣ್ಣರ ಕಲಾ ಮೇಳಾ
ಶಿವಮೊಗ್ಗ: ಮಾನಸ ವಿದ್ಯಾಲಯದ 18 ನೇ ವಾರ್ಷಿಕೋತ್ಸವ ಮತ್ತ ಚಿಣ್ಣರ ಕಲಾ ಮೇಳಾ ಜನವರಿ 6 ರ ಮಧ್ಯಾಹ್ನ 1:30 ಕ್ಕೆ ನಗರದ ಕುವೆಂಪುನಗರದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸುಬ್ಬಯ್ಯ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟಕರಾಗಿ ಬೆಂಗಳೂರಿನ ಭಾವನ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಎನ್.ಶ್ರೀನಿವಾಸ್ ಆಗಮಿಸಲಿದ್ದಾರೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಮತ್ತು ಬೆಂಗಳೂರಿನ ಇ.ಎಸ್.ಐ ಆಸ್ಪತ್ರೆಯ ಅರವಳಿಕೆ ತಜ್ಞರಾದ ಡಾ.ಜಯಪ್ರಕಾಶ್, ಕಸ್ತೂರ ಬಾ ಬಾಲಕಿಯರ ಕಾಲೇಜು ನಿವೃತ್ತ ಉಪನ್ಯಾಸಕರಾದ ಜಿ.ಎಸ್.ನಟೇಶ್ ಆಗಮಿಸಲಿದ್ದಾರೆ. ಸುಮನ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟನ ಎಲ್ಲಾ ಪದಾಧಿಕಾರಿಗಳ ಹಾಗೂ ಸದಸ್ಯರುಗಳು, ಶಾಲೆಯ ಮುಖ್ಯಶಿಕ್ಷಕರುಗಳು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು, ವಿದ್ಯಾಲಯದ ಸಿಬ್ಬಂದಿವರ್ಗದವರ ಉಪಸ್ಥಿತಿ ಇರಲಿದ್ದಾರೆ ಎಂದು ಶಾಲೆಯ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನವರಿ 05 ರಿಂದ 12 ರವರೆಗೆ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮ
ಶಿವಮೊಗ್ಗ ಜ.03 : ಕರ್ನಾಟಕ ಗಮನ ಕಲಾ ಪರಿಷತ್ತು ರಿ, ಶಿವಮೊಗ್ಗ ಶಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಶ್ರೀ ಪ್ರಸನ್ನ ಗಣಪತಿ (ಬಲಮುರಿ)ದೇವಾಸ್ಥಾನ ಅಭಿವೃದ್ಧಿ ದತ್ತಿ ರಿ ಇವರ ಸಂಯುಕ್ತಾಶ್ರಯದಲ್ಲಿ ಜನವರಿ 05 ರಿಂದ 12 ರವರೆಗೆ ರವೀಂದ್ರ ನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನ ಜನವರಿ 5 ರ ಸಂಜೆ 5:30 ಕ್ಕೆ ಪ್ರಸನ್ನ ಗಣಪತಿ ದೇವಸ್ಥಾನದ ಅಧ್ಯಕ್ಷರಾದ ಉಮಾಶಂಕರ ಉಪಾಧ್ಯಯ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರಾದ ಉಮೇಶ್ ಹಾಲಾಡಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನ ಕರ್ನಾಟಕ ಗಮನ ಕಲಾ ಪರಿಷತ್ತು ರಿ, ಶಿವಮೊಗ್ಗ ಶಾಖೆ ಅಧ್ಯಕ್ಷರಾದ ಹೆಚ್.ಆರ್.ಸುಬ್ರಮಣ್ಯ ಶಾಸ್ತ್ರಿ ವಹಿಸಲಿದ್ದು ಶಾಖೆಯ ಗೌರವಾಧ್ಯಕ್ಷರಾದ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ ಉಪಸ್ಥಿತರಿರಲಿದ್ದಾರೆ. ಜನವರಿ 05 ರಿಂದ 12 ರವರೆಗೆ ರವೀಂದ್ರ ನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಲಕ್ಷ್ಮೀಶ ಕವಿಯ ಜೈಮಿನಿ ಭಾರತದ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮ ನಡೆಯಲಿದೆ.
ಇನ್ನು ಸಮಾರೋಪ ಸಮಾರಂಭವನ್ನ ಜನವರಿ 12 ರ ಸಂಜೆ 5:30 ಕ್ಕೆ ನಡೆಯಲಿದ್ದು ಮುಖ್ಯ ಅತಿಥಿಯಾಗಿ ಪಾಲಿಕೆ ಆಯುಕ್ತೆರಾದ ಕವಿತಾ ಯೋಗಪ್ಪನವರ್ ಭಾಗವಹಿಸಲಿದ್ದಾರೆ. ಜನವರಿ 5 ರಂದು ಸಂಜೆ 5 30ಕ್ಕೆ ಗಮಕ ವಾಚನಾ ಮತ್ತು ವ್ಯಾಖ್ಯಾನದಲ್ಲಿ ಮೇಧಾ ಉಡುಪ ಅವರ ವಾಚನ ಮತ್ತು ಧೀಮಂತ್ ಭಾರದ್ವಾಜ್ ಅವರ ವ್ಯಾಖ್ಯಾನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಎಲ್ಲರೂ ಕಾರ್ಯಕ್ರಮ ದಲ್ಲಿ ಭಾಗವಹಿಸುವಂತೆ ಕಾರ್ಯದರ್ಶಿ ಕುಮಾರ್ ಶಾಸ್ತ್ರೀ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.