ಶಿವಮೊಗ್ಗ: ಶಿವಮೊಗ್ಗದಿಂದ ಹೊರಡುವ ಹಾಗೂ ತಲುಪುವ ಹಲವು ರೈಲುಗಳ ಸಂಚಾರ ಸಮಯದಲ್ಲಿ ಒಂದಷ್ಟು ಬದಲಾವಣೆಯಾಗಲಿದ್ದು, ಜ.1ರ ನಾಳೆಯಿಂದ ಜಾರಿಗೆ ಬರಲಿದೆ.
ಯಾವೆಲ್ಲಾ ರೈಲುಗಳ ಸಮಯ ಬದಲಾವಣೆ?
*ಶಿವಮೊಗ್ಗ-ಎಂಜಿಆರ್ ಚೆನ್ನೆÊ: 12692 ಎಂಜಿಆರ್ ಚೆನ್ನೆÊ ಸೆಂಟ್ರಲ್ ರೈಲು ಬೀರೂರನ್ನು ಈವರೆಗೂ ಸಂಜೆ 6.23ಕ್ಕೆ ತಲುಪಿ 6.25 ಕ್ಕೆ ಹೊರಡುತ್ತಿತ್ತು. ಆದರೆ, ಜ.4ರಿಂದ ಇದೇ ರೈಲು ಸಂಜೆ 5.15ಕ್ಕೆ ಶಿವಮೊಗ್ಗದಿಂದ ಹೊರಟು 6.18ಕ್ಕೆ ಬೀರೂರು ತಲುಪಿ, 6.20ಕ್ಕೆ ಹೊರಡಲಿದೆ.
*ಶಿವಮೊಗ್ಗ-ತಾಳಗುಪ್ಪ ನಡುವೆ ಪ್ರತಿದಿನ ಸಂಚರಿಸುವ 07350 ಸಂಖ್ಯೆಯ ಪ್ಯಾಸೆಂಜರ್ ರೈಲು ಈವರೆಗೂ ಮಧ್ಯಾಹ್ನ 2.35ಕ್ಕೆ ಶಿವಮೊಗ್ಗದಿಂದ ಹೊರಡುತ್ತಿತ್ತು. ಆದರೆ, ಜ.1ರ ನಾಳೆಯಿಂದ ಮಧ್ಯಾಹ್ನ 2.25ಕ್ಕೆ ಹೊರಡಲಿದ್ದು, 4.55 ಕ್ಕೆ ತಲುಪುತ್ತಿದ್ದ ತಾಳುಗುಪ್ಪ ನಿಲ್ದಾಣವನ್ನು 4.50 ಕ್ಕೆ ತಲುಪಲಿದೆ.
ಈ ಮಾರ್ಗಗಳಲ್ಲಿ ಬರುವ ಕೊನಗವಳ್ಳಿ ರೈಲು ನಿಲ್ದಾಣವನ್ನು ಮಧ್ಯಾಹ್ನ 2.49 ಕ್ಕೆ ತಲುಪಿ, 2.50 ಕ್ಕೆ ಹೊರಡುತ್ತಿತ್ತು. ನಾಳೆಯಿಂದ ಈ ರೈಲು 2.39 ಕ್ಕೆ ತಲುಪಿ 2.40 ಕ್ಕೆ ಹೊರಡಲಿದೆ. ಅದೇ ರೀತಿ, 2.55ಕ್ಕೆ ಹಾರನಹಳ್ಳಿ ತಲುಪಿ 2.56ಕ್ಕೆ ಹೊರಡುತ್ತಿದ್ದ ರೈಲು, ನಾಳೆಯಿಂದ 2.45ಕ್ಕೆ ತಲುಪಿ 2.46ಕ್ಕೆ ಹೊರಡಲಿದೆ.
ಮಧ್ಯಾಹ್ನ 3.02ಕ್ಕೆ ಕುಂಸಿ ನಿಲ್ದಾಣ ತಲುಪಿ 3.03ಕ್ಕೆ ಹೊರಡುತ್ತಿದ್ದ ರೈಲು ಇನ್ನು ಮುಂದೆ 2.52ಕ್ಕೆ ತಲುಪಿ, 2.53ಕ್ಕೆ ಹೊರಡಲಿದೆ. ಹಾಗೆಯೇ, 3.19ಕ್ಕೆ ಅರಸಾಳು ನಿಲ್ದಾಣ ತಲುಪಿ 3.20ಕ್ಕೆ ಹೊರಡುತ್ತಿದ್ದ ರೈಲು ಇನ್ನು ಮುಂದೆ 3.09ಕ್ಕೆ ತಲುಪಿ 3.19ಕ್ಕೆ ಹೊರಡಲಿದೆ.
ಇನ್ನು, ಮಧ್ಯಾಹ್ನ 3.24 ಕ್ಕೆ ಕೆಂಚನಾಳತಲುಪಿ 3.25 ಕ್ಕೆ ನಿಲ್ದಾಣದಿಂದ ಹೊರಡುತ್ತಿದ್ದ ಈ ರೈಲು, ನಾಳೆಯಿಂದ 3.14 ಕ್ಕೆ ತಲುಪಿ 3.15ಕ್ಕೆ ಹೊರಡಲಿದೆ. ತಾಳಗುಪ್ಪ ನಿಲ್ದಾಣವನ್ನು ಇದುವರೆಗೆ ನಿಗದಿತವಾಗಿದ್ದ ಸಮಯಕ್ಕಿಂತ 10 ನಿಮಿಷ ಮುಂಚಿತವಾಗಿ ತಲುಪಲಿದೆ.
ಅದೇ ರೀತಿ ಯಶವಂತಪುರದಿAದ ಶಿವಮೊಗ್ಗಕ್ಕೆ ಮಧ್ಯಾಹ್ನ 2.30ಕ್ಕೆ ಬರುತ್ತಿದ್ದ 16579 ಸಂಖ್ಯೆಯ ಎಕ್ಸ್’ಪ್ರೆಸ್ ರೈಲು 2.15 ಕ್ಕೆ ತಲುಪಲಿದೆ. 20651 ಸಂಖ್ಯೆಯ ಯಶವಂತಪುರ-ತಾಳಗುಪ್ಪ ಇಂಟರ್ ಸಿಟಿ ರೈಲು ಶಿವಮೊಗ್ಗವನ್ನು 7.40 ಕ್ಕೆ ತಲುಪಿ ತಾಳಗುಪ್ಪಕ್ಕೆ 7.45 ಕ್ಕೆ ಹೊರಡುತ್ತಿತ್ತು. ರಾತ್ರಿ 10 ಗಂಟೆಗೆ ತಾಳಗುಪ್ಪ ತಲುಪುತಿತ್ತು. ಈ ರೈಲು ಬದಲಾದ ಸಮಯದಲ್ಲಿ ನಾಳೆಯಿಂದ 9.45ಕ್ಕೆ ತಾಳಗುಪ್ಪ ತಲುಪಲಿದೆ.
ಪ್ರತಿದಿನ ರಾತ್ರಿ 9 ಗಂಟೆಗೆ ತಾಳಗುಪ್ಪದಿಂದ ಹೊರಡುತ್ತಿದ್ದ 16228 ಸಂಖ್ಯೆಯ ತಾಳಗುಪ್ಪ-ಮೈಸೂರು ಎಕ್ಸ್’ಪ್ರೆಸ್ ರೈಲು ರಾತ್ರಿ 8.55 ಕ್ಕೆ ಹೊರಡಲಿದೆ. ಈ ರೈಲು ನಾಳೆಯಿಂದ ನಿಗದಿತ ಸಮಯಕ್ಕಿಂತ 5 ನಿಮಿಷ ಮುಂಚಿತವಾಗಿ ಹೊರಡಲಿದೆ.