ಶಿವಮೊಗ್ಗ ಡಿ.31; ಮಹಾನಗರ ಪಾಲಿಕೆಗೆ 15 ನೇ ಹಣಕಾಸು ಯೋಜನೆಯಲ್ಲಿ 2024-25 ನೇ ಸಾಲಿನಲ್ಲಿ 15.70 ಕೋಟಿ ರೂ. ಸರ್ಕಾರದಿಂದ ಬಿಡುಗಡೆ ಆಗಬೇಕಿತ್ತು. ಇದುವರೆಗೂ ಹಣ ಬಿಡುಗಡೆ ಆಗಿಲ್ಲ ಎಂದು ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ತಿಳಿಸಿದರು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ನಡೆದ ಆಯುವ್ಯಯ ಕುರಿತ 2ನೇ ಪೂರ್ವಭಾವಿ ಸಭೆಯಲ್ಲಿ ನಾಗರೀಕರ ಪ್ರಶ್ನೆಗೆ ಉತ್ತರಿಸಿ, ಅನುದಾನ ಬಿಡುಗಡೆ ಆಗದೇ ಇರುವುದರಿಂದ ಏನೂ ವೆಚ್ಚ ಮಾಡಲು ಆಗಿಲ್ಲ. ಅನುದಾನ ಬಿಡುಗಡೆ ಆಗುವ ನಿರೀಕ್ಷೆಯಲ್ಲಿ ಇz್ದÉೀವೆ ಎಂದು ತಿಳಿಸಿದರು.
2025-16ನೇ ಸಾಲಿಗೆ ಮಹಾನಗರ ಪಾಲಿಕೆಯಿಂದ ಆಸ್ತ್ತಿ ತೆರಿಗೆ ಕಡೆಯಿಂದ 45 ಕೋಟಿ ಸಂಗ್ರಹ ಆಗುವ ನಿರೀಕ್ಷೆ ಇದೆ. ನೀರಿನ ತೆರಿಗೆ ಸುಮಾರು 10 ಕೋಟಿ ಹಾಗೂ ಹೊಸ ಸಂಪರ್ಕದಿಂದ 1.20 ಕೋಟಿ ಸೇರಿ 11.20 ಕೋಟಿ ಸಂಗ್ರಹ ಆಗಬಹುದು. ಎಲ್ಲ ಸೇರಿ 302 ಕೋಟಿ ರೂ. ಒಟ್ಟು ಆದಾಯ ಸಂಗ್ರಹ ಆಗುವ ನಿರೀಕ್ಷೆ ಹೊಂದಲಾಗಿದೆ ಎಂದು ಅಂದಾಜು ಆಯವ್ಯಯ ಪ್ರತಿಯನ್ನು ಅಧಿಕಾರಿಗಳಿಂದ ಓದಿಸಿದರು.
ಅಂದಾಜು ಆಯವ್ಯಯ ಜೆರಾಕ್ಸ್ ಪ್ರತಿಯನ್ನು ಇಲ್ಲಿ ಬಂದಿರುವವರಿಗೆ ಕೊಡಿ. ಕೇವಲ ಅಕಾರಿಗಳು ಓದಿದರೆ ಏನೂ ಅರ್ಥ ಆಗುವುದಿಲ್ಲ. ಯಾವ ವಿಭಾಗಕ್ಕೆ ಎಷ್ಟು ಹಣ ಮೀಸಲು ಇಟ್ಟಿದ್ದೀರಿ, ಎಲ್ಲಿಗೆ ಹಣ ಬೇಕು ಎಂದು ಕೇಳುವುದು ಹೇಗೆ ಎಂದು ನಾಗರೀಕರು ಆಕ್ಷೇಪಿಸಿದರು. ಸಾಕಷ್ಟು ಆಗ್ರಹವನ್ನೂ ಮಾಡಿದರು. ಆದರೆ ಆಯುಕ್ತರು ಮಾತ್ರ ಅಂದಾಜು ಆಯವ್ಯಯ ಪ್ರತಿ ಕೊಡಲು ಒಪ್ಪಲಿಲ್ಲ. ಕೊನೆಗೆ ಪಿಪಿಟಿ ಪ್ರದರ್ಶನದ ಮೊರೆ ಹೋದರು.
ಉಪ ಆಯುಕ್ತ ತುಷಾರ್ ಹೊಸೂರ್, ಮುಖ್ಯ ಲೆಕ್ಕಾಕಾರಿ ಡಕಣನಾಯ್ಕ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.