ಶಿವಮೊಗ್ಗ : ಹಗಲು-ರಾತ್ರಿ ಎನ್ನದೆ ತಮ್ಮ ಕುಟುಂಬಕ್ಕೂ ಸಮಯ ನೀಡದೆ ಕಾರ್ಯನಿರ್ವಹಿಸುವ ಪೊಲೀಸ್ ಇಲಾಖೆ ಇಂದು ಸಂಕಷ್ಟದಲ್ಲಿದೆ ಸರ್ಕಾರದ ಅನುದಾನದ ಕೊರತೆಯಿಂದ ತುರ್ತು ಸೇವೆಗಳಲ್ಲಿ ಕಾರ್ಯನಿರ್ವಹಿಸುವ ಪ್ರಮುಖ ಇಲಾಖೆಯಾದ ಪೊಲೀಸ್ ಇಲಾಖೆಗೆ ಕಳೆದ ತಿಂಗಳು ಫೆಬ್ರವರಿಯಲ್ಲಿ ಸಂಬಳ ಆಗಿಲ್ಲ. ಶಿವಮೊಗ್ಗ ಜಿಲ್ಲೆಯ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಇದೇ ಸಮಸ್ಯೆಯಾಗಿದೆ.

ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ, ಅಗ್ನಿಶಾಮಕ ಇಲಾಖೆ, ಸೇರಿದಂತೆ ತುರ್ತುಸೇವೆ ಒದಗಿಸುವ ಇಲಾಖೆಗಳಿಗೆ ಯಾವಾಗಲೂ ಅನುದಾನದ ಕೊರತೆಯನ್ನು ಮಾಡಬಾರದು ಅಗತ್ಯವಾಗಿ ಹಣವನ್ನು ಮೀಸಲಿಡಬೇಕು ಆದರೆ ಈ ಬಾರಿ ಫೆಬ್ರವರಿ ತಿಂಗಳಲ್ಲಿ ಪೊಲೀಸ್ ಇಲಾಖೆಗೆ ಸಂಬಳ ಆಗಿಲ್ಲ.
ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಅವರದೇ ಆದ ಸಮಸ್ಯೆಗಳಿರುತ್ತವೆ ತಿಂಗಳಾದರೂ ಸಾಕು ಒಂದಷ್ಟು ಕಮಿಟ್ಮೆಂಟ್ ಇರುತ್ತದೆ ಅದನ್ನು ತೀರಿಸಲು ಸಂಬಳದ ಅವಶ್ಯಕತೆ ಇರುತ್ತದೆ ಆದರೆ ಸಂಬಳನೇ ಆಗಿಲ್ಲವೆಂದರೆ ಜೀವನ ಕಷ್ಟವಾಗುತ್ತದೆ.
ಸರ್ಕಾರ ಕೂಡಲೇ ಈ ಸಮಸ್ಯೆಯನ್ನು ಪರಿಹರಿಸಿ ಇನ್ನು ಮುಂದೆ ಹೀಗಾಗದಂತೆ ಸದಾ ಕಾಲ ತುರ್ತು ಸೇವೆಗಳನ್ನು ಒದಗಿಸುವ ಇಲಾಖೆಗಳಿಗೆ ಸೂಕ್ತ ಅನುದಾನವನ್ನು ಕಾಯ್ದಿರಿಸಬೇಕೆಂದು ಪೊಲೀಸ್ ಇಲಾಖೆಯ ಕುಟುಂಬ ಮೂಲಗಳು ಒತ್ತಾಯಿಸಿದೆ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಾಗ ನಾಳೆ-ನಾಡಿದ್ದರೊಳಗೆ ವೇತನ ಪಾವತಿಯಾಗಲಿದೆ ಎಂದು ತಿಳಿಸಿದ್ದರೂ ಸಹ ಸಿಬ್ಬಂದಿಗಳಲ್ಲಿ ವೇತನ ವಿಳಂಬದ ಆತಂಕ ಮೂಡಿದೆ.