ಹುಡುಕಾಟದ ವರದಿ ಶಿವಮೊಗ್ಗ, ಡಿ.31 :
ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ ಓಸಿ ಹಾವಳಿ ಅತಿ ಹೆಚ್ಚಾಗುತ್ತಿದ್ದು ನಗರದ ಬಹಳಷ್ಟು ಕಡೆ ಒಸಿ ಬರೆಯುವವರ ಹಾವಳಿ ಹೆಚ್ಚಾಗಿದೆ ಎಂದು ಸಾರ್ವಜನಿಕ ವಲಯ ಹಾಗೂ ತುಂಗಾತರಂಗ ಪತ್ರಿಕೆಯ ಬಹಳಷ್ಟು ಓದಗರು ಆರೋಪಿಸಿದ್ದಾರೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಈ ಸಂಬಂಧ ಹತ್ತು ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಸಹ ಬಿಡ್ಡರ್ ಗಳಿಂದ ಮಿತಿಮೀರಿದ ಹಾವಳಿ ಹೆಚ್ಚಾಗಿದೆ ಎಂಬುದು ಸಾರ್ವಜನಿಕ ಆರೋಪ.
ನಗರದ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣದ ಬಳಿ ಸಾಕಷ್ಟು ಮಂದಿ ನಿತ್ಯ ಬೆಳಿಗ್ಗೆ ಏಳರಿಂದಲೇ ಓಸಿ ಚೀಟಿ ಬರೆಯುತ್ತಾ ತಿರುಗಾಡುತ್ತಿರುತ್ತಾರೆ. ಅಲ್ಲಿಯೇ ಸುಳಿದಾಡುವ ಪೊಲೀಸರಿಗೆ ಈ ವಿಷಯ ಗೊತ್ತಿಲ್ಲವೇ ಎಂಬುದು ಪ್ರಶ್ನೆ ನಗರದ ವಿನೋಬನಗರ ಲಕ್ಷ್ಮಿ
ಟಾಕೀಸ್ ನ್ಯೂ ಮಂಡಳಿ ಗೋಪಾಲ ಹಳೆ ಶಿವಮೊಗ್ಗ, ಟ್ಯಾಂಕ್ ಮೊಹಲ್ಲಾ, ವಿದ್ಯಾನಗರ ಸೇರಿದಂತೆ ೧೦ ಹಲವು ಕಡೆ ಓಸಿ ಹಾವಳಿ
ಹೆಚ್ಚಾಗಿದ್ದು ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಸದ್ಯದಲ್ಲೇ ಓಸಿ ಬಿಡ್ಡರ್ ಒಬ್ಬನನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ಮಾಹಿತಿ ಅನುಸಾರ ಜಿಲ್ಲಾಧಿಕಾರಿಗಳು ಗಡಿಪಾರು ಮಾಡಲಿದ್ದಾರೆ ಎಂಬ ಮಾಹಿತಿ ಸುಳಿದಾಡುತ್ತಿದೆ.