ಹುಡುಕಾಟದ ವರದಿ-1
ಶಿವಮೊಗ್ಗ, ಡಿ.31:
ವಿನೋಬನಗರದ ಬಹಳಷ್ಟು ಕಡೆ ಇರುವಂತಹ ಶಿವಮೊಗ್ಗ ಮಹಾನಗರ ಪಾಲಿಕೆಯ ಖಾಲಿ ಜಾಗಗಳಲ್ಲಿ ಕೆಲವರು ತಮ್ಮ ಸ್ವಾಧೀನ ಮೆರೆಯಲು ಅನಧಿಕೃತವಾಗಿ ಕ್ಲೀನ್ ಮಾಡುವ ಜೊತೆಗೆ ಕಾಂಪೌಂಡ್ ಕಟ್ಟಿಕೊಳ್ಳುವ ಹುನ್ನಾರ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದು, ಮಹಾನಗರ ಪಾಲಿಕೆ ಪರೋಕ್ಷವಾಗಿ ಇದಕ್ಕೆ ಬೆಂಬಲಿಸುತ್ತಿದೆ ಎಂಬ ಪ್ರಶ್ನೆ ಸಾರ್ವಜನಿಕವಾಗಿ ಕೇಳಿ ಬಂದಿದೆ.
ಶಿವಮೊಗ್ಗ ವಿನೋಬನಗರದ ಎಲ್ಲೆಡೆ ಹಾಗೂ ಶುಭಂ ಕಲ್ಯಾಣ ಮಂದಿರದ ರಸ್ತೆಯಲ್ಲಿ ಇಂತಹ ಹತ್ತಾರು ನಿವೇಶನಗಳಿಗೆ ಈಗಾಗಲೇ ಸ್ವಚ್ಛತೆ ಹಾಗೂ ಕಾಂಪೌಂಡ್ ಕಟ್ಟುವ ಕಾಮಗಾರಿಯನ್ನು ಪ್ರಭಾವಿಗಳು ತಮ್ಮ ಹೈ ಪವರ್ ಬಳಸಿಕೊಂಡು ಮಾಡುತ್ತಿದ್ದಾರೆ ಎಂದು ಬಲ್ಲಮೂಲಗಳು ಅಧಿಕೃತವಾಗಿ ಹೇಳಿವೆ.
ಪಾಲಿಕೆ ತನ್ನ ಜಾಗವನ್ನು ಉಳಿಸಿಕೊಳ್ಳಬೇಕು ಎಂಬ ಕಿಂಚಿತ್ತಾದರೂ ಕಾಳಜಿ, ಕಳಕಳಿ ಇದ್ದರೆ ಕೂಡಲೇ ಅತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕು.
ಅಕ್ರಮವಾಗಿ ಅನಧಿಕೃತವಾಗಿ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲು ಮುಂದಾಗಿರುವ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ.
ಪಾಲಿಕೆಯ ಕಂದಾಯ ಇಲಾಖೆ ಕೇವಲ ಅನ್ಯ ಕಾರ್ಯಗಳಲ್ಲಿ ಹಾಗೂ ಸಂಜೆ ಹೊತ್ತು ತಮ್ಮ ಯಥಾವಸ್ತು ಕಾರ್ಯಗಳಲ್ಲಿ ಮಗ್ನವಾಗಿದ್ದು, ಪಾಲಿಕೆಯ ಆಸ್ತಿಯನ್ನು ಉಳಿಸುವ ಯೋಚನೆ ಇಲ್ಲ ಎಂಬುದು ಸತ್ಯ ಅಲ್ಲವೇ?
ಶಿವಮೊಗ್ಗ ಪಾಲಿಕೆಯ ಆಯುಕ್ತರು ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳು ಒಮ್ಮೆ ಗಮನಿಸುವುದು ಒಳಿತು ಎಂಬುದು ನಗರಪಾಲಿಕೆಯ ಬಗ್ಗೆ ಕಳಕಳಿ ಹೊಂದಿರುವವರ