ಶಿವಮೊಗ್ಗ,ಡಿ.31: ಶ್ರೀ ರೋಜಾ ಗುರೂಜಿ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು
ಆಧ್ಯಾತ್ಮ ಗುರುಗಳಾದ ನಡೆದಾಡುವ ಅಯ್ಯಪ್ಪ ಶ್ರೀ ರೋಜಾ ಗುರೂಜಿ ರವರ ಹುಟ್ಟು ಹಬ್ಬವನ್ನು ವಿವಿಧ ಭಾಗಗಳಲ್ಲಿ ಆಚರಿಸಲಾಯಿತು.
ಶಿವಮೊಗ್ಗ ನಗರದಲ್ಲಿ ಶ್ರೀ ರೋಜಾ ಗುರೂಜಿ ಹಾಗೂ ಶ್ರೀ ಶಬರೀಶ್ ಗುರುಸ್ವಾಮಿ ಶಿಷ್ಯ ವೃಂದದಿಂದ ನಗರದ ಹಲವೆಡೆ ಅನ್ನ ಸಂತರ್ಪಣೆ ಮಾಡಲಾಯಿತು. ಅಮೃತ ಅನ್ನ ದಾಸೋಹ ಪ್ರತಿಷ್ಠಾನದ ಅಡಿಯಲ್ಲಿ ಶ್ರೀ ರೋಜಾ ಗುರೂಜಿ ರವರ ಜನ್ಮ ದಿನದ ಸ್ಮರಣೆಯಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಅನ್ನದಾನ ಸೇವೆಯನ್ನು ಮಾಡಲಾಯಿತು. ಈ ಅನ್ನ ಸಂತರ್ಪಣೆಯ ಸಂದರ್ಭದಲ್ಲಿ ಶ್ರೀ ಶಬರೀಶ್ ಗುರುಸ್ವಾಮಿ, ವೆಂಕಟೇಶ್, ವಿಶ್ವ, ಶಿವರಾಜ್, ಕೃಷ್ಣ, ಉದಯ್, ಪ್ರೇಮ್, ನಿಖಿಲ್, ಸತ್ಯನಾರಾಯಣ್, ಮುರಳಿ, ಶ್ರೀನಿವಾಸ್, ರಂಗನಾಥ್ ಯವರೊಂದಿಗೆ ಪಾಲ್ಗೊಂಡು ಸೇವೆಯನ್ನು ಬಹಳ ಸಂತಸದಿಂದ ನಡೆಸಿದರು.

ಗುರುಗಳು ನೆಲೆಯಾಗಿರುವ ಹೊಸೂಡಿ ಫಾರ್ಮ್ ನಲ್ಲಿ ಮಂಜು ಸ್ವಾಮಿ ಮತ್ತು ಗ್ರಾಮಸ್ಥರು ಮಾಡಿದ ಅಲಂಕಾರದೊಂದಿಗೆ ವಿಶೇಷವಾಗಿ ಪೂಜೆಯನ್ನು ಸಲ್ಲಿಸಲಾಯಿತು. ಹೊಸೂಡಿ ಶ್ರೀ ಅಯ್ಯಪ್ಪ ಸ್ವಾಮಿಗೆ ಶ್ರೀ ಶಬರೀಶ್ ಗುರುಸ್ವಾಮಿ ಯವರು ವಿಶೇಷ ಪೂಜೆಯನ್ನು ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಶಬರೀಶ್ ಗುರುಸ್ವಾಮಿ ಯವರೊಂದಿಗೆ ಪ್ರಿಯಾ, ಶ್ರೇಯಸ್, ಸಹರ್ಶ್, ಸಂದೇಶ್, ವೆಂಕಟೇಶ್, ಮಳೆಬೆನ್ನುರ್ ಮಂಜು ಸ್ವಾಮಿ, ಕೇಶವ್ ಸ್ವಾಮಿ, ಧನುಶ್, ವಿಶ್ವ, ನಿಖಿಲ್, ಮುರುಗೇಶ್, ಯೋಗರಾಜ್, ಉದಯ್, ಪ್ರೇಮ್, ಮಂಜು, ವಿವೇಕ್, ವಿಕಾಸ್, ಇಂದ್ರಾಣಿ, ರಂಗನಾಥ್, ಮುರಳಿ, ರವಿ, ಮುನಿಸ್ವಾಮಿ, ಶ್ರೀ ಶಬರೀಶ ಭಕ್ತ ಮಂಡಳಿಯ ಸದಸ್ಯರು ಹಾಗೂ ಹೊಸೂಡಿ ಗ್ರಾಮಸ್ಥರು ಗುರುಗಳಿಗೆ ಗೌರವ ಸಲ್ಲಿಸಿದರು.

ಗುರುಗಳ ಹುಟ್ಟು ಹಬ್ಬದ ಅಂಗವಾಗಿ ರಾಮಣ್ಣ ಶ್ರೇಷ್ಟಿ ಪಾರ್ಕ್ ಬಳಿ ಇರುವ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರೋಜಾ ಗುರೂಜಿ ಹಾಗೂ ಶ್ರೀ ಶಬರೀಶ್ ಸ್ವಾಮಿ ಶಿಷ್ಯ ವೃಂದದಿಂದ ಅಯ್ಯಪ್ಪ ಸ್ವಾಮಿ ಪೂಜೆ ಹಾಗೂ ಭಜನೆ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ, ಭದ್ರಾವತಿ, ದ್ಯಾವನಕೆರೆ, ಸವಲಂಗ, ಸಾಸ್ವೆಹಳ್ಳಿ ಯಿಂದ ಅನೇಕ ಅಯ್ಯಪ್ಪ ಮಾಲಾಧಾರಿಗಳು, ಗುರುಗಳ ಆಪ್ತರು, ದೇವಸ್ಥಾನದ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಶ್ರೀ ರೋಜಾ ಗುರೂಜಿ ರವರ ಶಿಷ್ಯ ವೃಂದದಿಂದ ಮದ್ಯಾಹ್ನದ ಭೋಜನವನ್ನು ಏರ್ಪಡಿಸಲಾಗಿತ್ತು. ಅನೇಕ ಭಕ್ತಾದಿಗಳು ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿದರು.

ಸಂಜೆ ಶಾರದ ಅಂಧರ ವಿಕಾಸ ಕೇಂದ್ರದಲ್ಲಿ ಗುರುಗಳ ಜನ್ಮ ದಿನಕ್ಕೆ ಮಕ್ಕಳಿಗೆ ಸಿಹಿ ಹಂಚಲಾಯಿತು. ಈ ಸಂದರ್ಭದಲ್ಲಿ ಶ್ರೀ ಸಂದೇಶ್ ಷಣ್ಮುಗಂ ರವರು ಅಂದ ಮಕ್ಕಳಿಗೆ ಮೌಂಟ್ ಎವರೆಸ್ಟ್ ಶಿಖರ ವನ್ನು ಏರಿದ ಅಂದ ಎರಿಕ್ ವೈಗನ್ಮೇಯರ್ ರವರ ಉದಾಹರಣೆ ಕೊಟ್ಟು ಪ್ರೋತ್ಸಾಹದ ಮಾತನ್ನು ನುಡಿದರು. ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಗುರುಗಳ ಹುಟ್ಟು ಹಬ್ಬಕ್ಕೆ ನೂರಕ್ಕೂ ಹೆಚ್ಚು ವೃದ್ಧರಿಗೆ ಸಿಹಿ ಹಂಚಲಾಯಿತು. ಈ ಸಂದರ್ಭದಲ್ಲಿ ಶ್ರೀ ಸಂದೇಶ್ ಷಣ್ಮುಗಂ ರವರೊಂದಿಗೆ ಶಿಷ್ಯ ವೃಂದದಿಂದ ವಿಶ್ವ, ಉದಯ್, ಪ್ರೇಮ್, ಸೆಲ್ವಿ ಮತ್ತು ಇತರರು ಉಪಸ್ಥಿತರಿದ್ದರು.