ಶಿವಮೊಗ್ಗ,ಜು.28:
ಶಿವಮೊಗ್ಗ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಲೆಕ್ಕ ಅಧೀಕ್ಷಕ ಎಂ ಸುಬ್ರಹ್ಮಣ್ಯ (ವಿದ್ಯಾನಗರ ನಿವಾಸಿ) ಅವರು ಇಂದು ನಿಧನರಾಗಿದ್ದಾರೆ.
ಶಿಕ್ಷಣ ಇಲಾಖೆಯ ಅಧಿಕಾರಿಗಳು, ನೌಕರರು ಹಾಗೂ ಶಿಕ್ಷಕರ ಜೊತೆ ಅತ್ಯಂತ ಆತ್ಮೀಯ ಎನಿಸಿಕೊಂಡಿದ್ದ ಸುಬ್ರಮಣ್ಯ ನಿಧನಕ್ಕೆ ಶಿಕ್ಷಣ ಇಲಾಖೆ ಕಂಬನಿ ಮಿಡಿದಿದೆ.


ಅವರ ಪತ್ನಿ ವೀಣಾ ಅವರು ಅಯನೂರು ಕೋಟೆ ಶಾಲೆಯ ಶಿಕ್ಷಕಿಯಾಗಿದ್ದಾರೆ. ಅವರು ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಬಿಟ್ಟು ಅಗಲಿದ್ದಾರೆ.
ಸುಬ್ರಮಣ್ಯ ಅವರು ಅನಾರೋಗ್ಯ ನಿಮಿತ್ತ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿರುವ ವಿಷಯ ತಿಳಿದು ಶಿಕ್ಷಕ ವೃಂದ ಕಂಬನಿ ಮಿಡಿದಿದೆ.



ಈ ದುಃಖದ ಕ್ಷಣದಲ್ಲಿ ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ಮತ್ತು ಬಂಧು-ಮಿತ್ರರಿಗೆ ಈ ದುಃಖವನ್ನು ಭರಿಸುವ ಶಕ್ತಿ, ಧೈರ್ಯ ಮತ್ತು ಸಾಂತ್ವನವನ್ನು ಕರುಣಿಸಲಿ ಎಂದು ಡಿಡಿಪಿಐ ಮಜುನಾಥ್, ಶಿವಮೊಗ್ಗ ಬಿಇಓ ರಮೇಶ್, ಶಿಕಾರಿಪುರ ಬಿಇಓ ಲೋಕೇಶ್ ಸೇರಿದಂತೆ ಶಿಕ್ಷಣ ಇಲಾಖೆಯವರು ಪ್ರಾರ್ಥಿಸಿದ್ದಾರೆ.