ಶಿವಮೊಗ್ಗ: ನಗರದ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯಲ್ಲಿ ಇಂದು ನೂತನ ಎಚ್ಎಲ್ಎ ಪ್ರಯೋಗಾಲಯ ಉದ್ಘಾಟಿಸಲಾಯಿತು. ಅಂಗಾಂಗ ಕಸಿ ಹಾಗೂ ಕಸಿ ಸಂಬಂಧಿತ ರೋಗನಿರ್ಣಯ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರ ವಹಿಸುವ ಊಐಂ ಪರೀಕ್ಷಾ ಸೌಲಭ್ಯವು ಇದೀಗ ಆಸ್ಪತ್ರೆಯಲ್ಲೇ ಲಭ್ಯವಾಗುವಂತಾಗಿದೆ.

ಕಾರ್ಯಕ್ರಮದಲ್ಲಿ ಹಣಕಾಸು ಸಲಹೆಗಾರರಾದ ಝೀವಲ್ ಖಾನ್, ವೈದ್ಯಕೀಯ ಅಧೀಕ್ಷಕರಾದ ಡಾ. ಟಿ.ಡಿ. ತಿಮ್ಮಪ್ಪ, ಟ್ರಾನ್ಸ್ಫ್ಯೂಷನ್ ಮೆಡಿಸಿನ್ ಮತ್ತು ಟ್ರಾನ್ಸ್ಪ್ಲಾಂಟ್ ಇಮ್ಯುನಾಲಜಿ ಸಲಹೆಗಾರರಾದ ಡಾ. ವಿಜಯಾನಂದ, ಕಚೇರಿ ಅಧೀಕ್ಷಕರಾದ ರಿಯಾಜ್ ಅಹ್ಮದ್ ಖಾಜಿ, ನಸಿರ್ಂಗ್ ಅಧೀಕ್ಷಕರಾದ ಶೇಷಮ್ಮ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ರಾಮ್ ಪ್ರಸಾದ್, ಹೃದ್ರೋಗ ವಿಭಾಗದ ಮುಖ್ಯಸ್ಥರಾದ ಡಾ. ಪರಮೇಶ್ವರ್, ಜೆ.ಸಿ. ರಹಮತುಲ್ಲಾ ಬೇಗ್, ಅನಸ್ತೇಷಿಯಾ ವಿಭಾಗದ ಮುಖ್ಯಸ್ಥರಾದ ಡಾ. ಚಂಪಾ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ವೈದ್ಯರು, ನಸಿರ್ಂಗ್ ಸಿಬ್ಬಂದಿ ಹಾಗೂ ಆಸ್ಪತ್ರೆಯ ಇತರೆ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಎಚ್ಎಲ್ಎ ಪ್ರಯೋಗಾಲಯದ ಸ್ಥಾಪನೆಯಿಂದ ಅಂಗಾಂಗ ಕಸಿ ಸಂದರ್ಭದಲ್ಲಿ ದಾನಿ ಮತ್ತು ಸ್ವೀಕರಿಸುವವರ ಹೊಂದಾಣಿಕೆ ಪರೀಕ್ಷೆ ಹಾಗೂ ಟ್ರಾನ್ಸ್ಪ್ಲಾಂಟ್ ಇಮ್ಯುನಾಲಜಿ ಸಂಬಂಧಿತ ಪರೀಕ್ಷೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದರಿಂದ ಅಂಗಾಂಗ ಕಸಿ ಸೇವೆಗಳ ಗುಣಮಟ್ಟ ಮತ್ತು ಕಾರ್ಯಕ್ಷಮತೆಯನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಗಲಿದೆ.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವಿವಿಧ ವಿಭಾಗಗಳ ಸಿಬ್ಬಂದಿ ಹಾಗೂ ಗಣ್ಯರು ಉಪಸ್ಥಿತರಿದ್ದು, ಊಐಂ ಪ್ರಯೋಗಾಲಯದ ಸೇವೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಅಂಗಾಂಗ ಕಸಿ ಕ್ಷೇತ್ರದಲ್ಲಿ ಮತ್ತಷ್ಟು ಉತ್ತಮ ಸೇವೆ ನೀಡುವ ಕುರಿತು ಆಶಯ ವ್ಯಕ್ತಪಡಿಸಿದರು ಈ ನೂತನ ಎಚ್ಎಲ್ಎ ಪ್ರಯೋಗಾಲಯದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಶ್ರೀಮತಿ ಅರ್ಪಿತಾ ಅವರು ಹಾಗೂ ದುಃಖದ ಆಪ್ತಸಮಾಲೋಚಕರಾಗಿ ಅಭಿμÉೀಕ್ ಡಿ.ಸಿ. ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಅಂಗಾಂಗ ದಾನ ಹಾಗೂ ಕಸಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ರೋಗಿಗಳ ಕುಟುಂಬಸ್ಥರಿಗೆ ಅಗತ್ಯ ಮಾಹಿತಿ, ಮಾರ್ಗದರ್ಶನ ಮತ್ತು ಆಪ್ತಸಮಾಲೋಚನೆ ನೀಡುವಲ್ಲಿ ಇವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.