ಶಿವಮೊಗ್ಗ,ಸೆ.11:
ಇಂದು ಶಿವಮೊಗ್ಗದಲ್ಲಿ ಗ್ರಾಮಾಂತರ ಶಾಸಕರಾದ ಶಾರದಾ ಪೂರ್ಯಾನಾಯ್ಕ್, ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ನೇತೃತ್ವದಲ್ಲಿ ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ರಿಂಗ್ ರೋಡ್ ಹೋರಾಟ ಸಮಿತಿಯಿಂದ ಅವೈಜ್ಞಾನಿಕ ರಿಂಗ್ ರೋಡನ್ನು ವಿರೋಧಿಸಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ಸಹಾಯಕ ನಿರ್ದೇಶಕರು, ನಗರ ಮತ್ತು ಗ್ರಾಮಾಭಿವೃದ್ದಿ ಇಲಾಖೆ, ಶಿವಮೊಗ್ಗ ಇವರಿಗೆ ಯಾವುದೇ ಕಾರಣಕ್ಕೂ ಈ ಅವೈಜ್ಞಾನಿಕ ರಿಂಗ್ ರೋಡ್ ಮಾಡಬಾರದೆಂದು ಒತ್ತಾಯಿಸಿ ಮನವಿ ಹಾಗೂ ತಮ್ಮ ವೈಯಕ್ತಿಕ ತಕರಾರು ಅರ್ಜಿಯನ್ನು ಸಲ್ಲಿಸಲಾಯಿತು.

ಹಾಗೂ ಈ ಯೋಜನಾ ವ್ಯಾಪ್ತಿಯ ರೈತರು ರಿಂಗ್ ರೋಡ್ ಮಾಡಬಾರದೆಂದು ವೈಯಕ್ತಿಕವಾಗಿ ತಕರಾರು ಅರ್ಜಿಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ
ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶಾರದಾ ಪೂರ್ಯಾನಾಯ್ಕ್,
ಕೃಷಿಕ್ ಸಮಾಜದ ಜಿಲ್ಲಾಧ್ಯಕ್ಷರಾದ ನಾಗರಾಜ್,
ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಟಿ.ಎಂ. ಚಂದ್ರಪ್ಪ,
ರಾಜ್ಯ ಮಹಿಳಾ ಸಂಚಾಲಕಿ ಭಾಗ್ಯ ರಾಘವೇಂದ್ರ,
ಜಿಲ್ಲಾಧ್ಯಕ್ಷರಾದ ಕೆ. ರಾಘವೇಂದ್ರ.

ಜಿಲ್ಲಾ ಕಾರ್ಯದರ್ಶಿ ಗುರುಶಾಂತ,
ತಾ|| ಅಧ್ಯಕ್ಷರಾದ ಸಿ.ಚಂದ್ರಪ್ಪ,
ಹೋರಾಟ ಸಮಿತಿಯ ಮುಖಂಡರಾದ ಮಹೇಶ್ ಸುಗೂರು,
ಓಂಕಾರಪ್ಪ,
ಲೋಕೇಶ್ ರಾವ್,
ಚಂದ್ರಶೇಖರ್ ಹಾಗೂ ಎಲ್ಲಾ ಮುಖಂಡರು, ರೈತರು ಹಾಜರಿದ್ದರು.