ಶಿವಮೊಗ್ಗ: ಸಾರ್ವಜನಿಕರಿಗೆ ಆರೋಗ್ಯ ನೀಡುವ, ಕೊಡುವ ಜಿಲ್ಲಾ ಆಸ್ಪತ್ರೆಯ ಮೆಗ್ಗಾನ್‌ನಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ.
ಇಡೀ ಆಸ್ಪತ್ರೆಯನ್ನು ಒಂದು ಸುತ್ತು ಹಾಕಿದಾಗ ಆಸ್ಪತ್ರೆಯಲ್ಲಿ ರೋಗಿಗಳನ್ನು ಕರೆದುಕೊಂಡು ಹೋಗಲು, ಜನರು ಓಡಾಡಲು ಮಾಡಿರುವ ಆಸ್ಪತ್ರೆಯೊಳಗಿನ ದಾರಿಯಲ್ಲಿ ನೀರಿನ ಬಾಟೆಲ್‌ಗಳು, ವಿಮಲ್‌ನ ಕವರ್‌ಗಳು, ಗೋಡೆಗಳಿಗೆ ಗುಟ್ಕಾ ಉಗಿದಿರುವುದು ಹಾಗೂ ಎರಡ್ಮೂರು ಕಡೆ ಮಲಮೂತ್ರ ಮಾಡಿರುವು ಕಂಡು ಬಂದಿತ್ತು.
ಇದನ್ನು ನೋಡಿದರೆ ಆಸ್ಪತ್ರೆಯಲ್ಲಿ ರೋಗ ವಾಸಿಯಾಗಿ ಹೋಗಬೇಕಾಗದ ರೋಗಿಗಳು ಹಾಗೂ ರೋಗಿಗಳನ್ನು ನೋಡಲು ಹೋದವರಿಗೆ ಇನ್ನಿಲ್ಲದ ರೋಗಗಳು ಬರುವುದಂತೂ ಸತ್ಯ ಎಂದು ಇಲ್ಲಿನ ಓರ್ವ ರೋಗಿಯ ಸಂಬಂಧಿಕರು ತಿಳಿಸಿದ್ದಾರೆ.
ಇನ್ನಾದರೂ ಆಸ್ಪತ್ರೆಯ ಆಡಳಿತ ಮಂಡಳಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಿ ಎಂಬುದು ಪತ್ರಿಕೆಯ ಆಶಯ.