ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಲಕ್ಷಾಂತರ ರೂಪಾಯಿ ವ್ಯಯ ಮಾಡಿ ಅಳವಡಿಸಿರುವ ನಾಮಫಲಕಗಳು ನಿರ್ವಹಣೆ ಇಲ್ಲದೇ ಹಾಳಾಗುತ್ತಿದ್ದು, ಇದಕ್ಕೆ ಸಾರ್ವಜನಿಕರ ಆಕ್ಷೇಪ ವ್ಯಕ್ತವಾಗುತ್ತಿದೆ.


ಬಹುತೇಕ ಕಡೆ ನಾಮಫಲಕಗಳೇ ಮಾಯವಾದರೆ, ಇನ್ನೂ ಕೆಲವೆಡೆ ರಸ್ತೆಯ ಪಕ್ಕದಲ್ಲಿ ಬಿದ್ದು ಒದ್ದಾಡುತ್ತಿವೆ! ಇದಕ್ಕೆಲ್ಲ ಕಾರಣ ಸರಿಯಾದ ನಿರ್ವಹಣೆ ಇಲ್ಲದಿರುವುದು ಎಂಬ ಕೂಗು ನಗರದ ಸಾರ್ವಜನಿಕರದ್ದು.


ಇದಕ್ಕೆ ಉದಾಹರಣೆ ಎಂದರೆ ವಾರ್ಡ್ ನಂ.೦೭ ಕೆಂಚಪ್ಪ ಬಡಾವಣೆ, ೧ನೇ ಮುಖ್ಯ ರಸ್ತೆಗೆ ಅಳವಡಿಸಿದ್ದ ನಾಮಫಲಕ ಹಲವು ತಿಂಗಳುಗಳಿಂದ ಧರೆಗೆ ಉರಳಿ ಬಿದ್ದರೂ ಸಹ ಇದನ್ನು ಸರಿಪಡಿಸದೇ ಇರುವುದು ದುರಂತ.

ಅದರಲ್ಲಿ ಮಾಜಿ ಆದ ಕಾರ್ಪೂರೇಟರ್ ಹೆಸರೇಕೆ ಬೇಕು? ಅವರ ಹೆಸರನ್ನ ಎಲ್ಲಾ ಕಡೆ ಅಳಿಸಲಿ, ಮಾರ್ಗ ತೋರುವ ನಾಮಫಲಕ ಇರಲಿ ಸಾಕು.!


ಇನ್ನಾದರೂ ಪಾಲಿಕೆ ನಾಮಫಲಕಗಳ ನಿರ್ವಹಣೆಗೆ ನಿರಾಸಕ್ತಿ ತೋರದೇ ಧರೆಗೆ ಉರುಳಿ ಬಿದ್ದಿರುವ ನಾಮಫಲಕವನ್ನು ಸರಿಪಡಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!