ಶಿವಮೊಗ್ಗ,ಏ.12: ಭಾರತದ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಕರ್ನಾಟಕದ ಹುಬ್ಬಳ್ಳಿಯಲ್ಲಿ ತನ್ನ ಹೊಸ ದಿನಸಿ ಫುಲ್ ಫಿಲ್ಮೆಂಟ್ ಕೇಂದ್ರವನ್ನು ಆರಂಭಿಸಿದೆ.
ಗ್ರಾಹಕರಿಗೆ ಆರ್ಡರ್ ಮಾಡಿದ ಮರುದಿನವೇ ದಿನಸಿ ಉತ್ಪನ್ನಗಳನ್ನು ತಲುಪಿಸುವ ಬದ್ಧತೆಯನ್ನು ಪೂರೈಸುವ ನಿಟ್ಟಿನಲ್ಲಿ ಈ ಕೇಂದ್ರ ಕಾರ್ಯನಿರ್ವಹಿಸಲಿದೆ. ಸ್ಥಳೀಯ ಗ್ರಾಹಕ ಒಳನೋಟಗಳ ಆಧಾರದಲ್ಲಿ ಹುಬ್ಬಳ್ಳಿಯಲ್ಲಿ ಈ ಫುಲ್ ಫಿಲ್ಮೆಂಟ್ ಕೇಂದ್ರದಿಂದ 6,000 ಕ್ಕೂ ಅಧಿಕ ಉತ್ಪನ್ನಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶವನ್ನು ಹೊಂದಿದೆ.
ನಂದಿನಿ ಉತ್ಪನ್ನಗಳು, ನಾಗ ಮತ್ತು ವಿಜಯ್ ಸೇರಿದಂತೆ ರಾಜ್ಯದ ಜನಪ್ರಿಯ ಉತ್ಪನ್ನಗಳು ಸೇರಿದಂತೆ ಇನ್ನಿತರ ಬ್ರ್ಯಾಂಡ್ ಗಳ ಉತ್ಪನ್ನಗಳನ್ನು ಈ ಕೇಂದ್ರಗಳಿಂದ ವಿತರಿಸಲಾಗುತ್ತದೆ. ಈ ಮೂಲಕ ಪ್ರಾದೇಶಿಕ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ಉತ್ಪನ್ನಗಳನ್ನು ತಲುಪಿಸುವ ವ್ಯವಸ್ಥೆ ಇಲ್ಲಿಂದಲೇ ಆಗಲಿದೆ.
60,000 ಚದರಡಿಗೂ ಅಧಿಕ ವಿಸ್ತೀರ್ಣದಲ್ಲಿ ಆರಂಭವಾಗಿರುವ ಈ ಕೇಂದ್ರವು ಹುಬ್ಬಳ್ಳಿ ಮತ್ತು ಸುತ್ತಮುತ್ತಲಿನ ಸ್ಥಳಗಳಾದ ಬಳ್ಳಾರಿ, ದಾವಣಗೆರೆ, ಧಾರವಾಡ, ಶಿವಮೊಗ್ಗ ಮತ್ತು ದಕ್ಷಿಣ ಮತ್ತು ಉತ್ತರ ಭಾಗದ ಗೋವಾದ ಪ್ರದೇಶಗಳಿಗೂ ಪ್ರತಿದಿನ 9,000 ಕ್ಕೂ ಅಧಿಕ ಆರ್ಡರ್ ಗಳನ್ನು ಪೂರೈಸುವ ಸಾಮಥ್ರ್ಯವನ್ನು ಹೊಂದಿದೆ. ಈ ಕೇಂದ್ರವನ್ನು ಆರಂಭಿಸುವ ಮೂಲಕ ಫ್ಲಿಪ್ ಕಾರ್ಟ್ ಡೈರಿ ಉತ್ಪನ್ನಗಳು, ಪಾನೀಯಗಳು, ಸ್ಟಾಪೆಲ್ ಗಳು, ಕ್ಲೀನಿಂಗ್ ಏಡ್ಸ್, ಆರೋಗ್ಯ ಮತ್ತು ಸೌಂದರ್ಯ ವರ್ಧಕ ಮತ್ತು ಇನ್ನಿತರ ಉತ್ಪನ್ನಗಳು ಸೇರಿದಂತೆ ವೈವಿಧ್ಯಮಯ ಶ್ರೇಣಿಯ ಗುಣಮಟ್ಟದ ದಿನಸಿ ಉತ್ಪನ್ನಗಳನ್ನು ಗ್ರಾಹಕರಿಗೆ ಅನುಕೂಲಕ್ಕೆ ತಕ್ಕಂತೆ ತಲುಪಿಸುವ ಬದ್ಧತೆಯನ್ನು ಹೊಂದಿದೆ.
ಈ ಸೆಂಟರ್ ಆರಂಭದ ಬಗ್ಗೆ ಮಾತನಾಡಿದ ಈಸ್ಟರ್ನ್ ಕಾಂಡಿಮೆಂಟ್ಸ್ ನಲ್ಲಿ ಇ-ಕಾಮರ್ಸ್ ಅಂಡ್ ಮಾಡರ್ನ್ ಟ್ರೇಡ್ ಹೆಡ್ ಹಿತೇಶ್ ಅಗರ್ವಾಲ್ ಅವರು, “2024 ರಲ್ಲಿ ಈಸ್ಟರ್ನ್ ತನ್ನ 40 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ ಮತ್ತು ನಾವು ಫ್ಲಿಪ್ ಕಾರ್ಟ್ ನೊಂದಿಗೆ ಪಾಲುದಾರಿಕೆಯನ್ನು ಹೊಂದುವ ಮೂಲಕ ಫ್ಲಿಪ್ ಕಾರ್ಟ್ ನ ವಿಸ್ತಾರವಾದ ವಿತರಣಾ ಜಾಲದ ವಿಸ್ತರಣೆಗೆ ಮತ್ತಷ್ಟು ಮೌಲ್ಯವನ್ನು ತಂದುಕೊಡಲಿದ್ದೇವೆ. ನಮ್ಮ ಪ್ರಮುಖ ಮಾರುಕಟ್ಟೆಗಳಲ್ಲಿ ಬ್ರ್ಯಾಂಡ್ ಅನ್ನು ಇನ್ನಷ್ಟು ವಿಸ್ತರಿಸಿಕೊಂಡು ನಮ್ಮ ವ್ಯವಹಾರವನ್ನು ವೃದ್ಧಿಸಿಕೊಳ್ಳಲು ಫ್ಲಿಪ್ ಕಾರ್ಟ್ ಪಾಲುದಾರಿಕೆಗೆ ನಮಗೆ ಪ್ರಮುಖವಾಗಿದೆ ಎಂದರು.
ಫ್ಲಿಪ್ ಕಾರ್ಟ್ ಗ್ರೂಪ್ ನ ಚೀಫ್ ಕಾಪೆರ್Çರೇಟ್ ಅಫೇರ್ಸ್ ಆಫೀಸರ್ ರಜನೀಶ್ ಕುಮಾರ್ ಅವರು ಮಾತನಾಡಿ, “ಕರ್ನಾಟಕದಲ್ಲಿ ನಮ್ಮ ಮೂರನೇ ದಿನಸಿ ಫುಲ್ ಫಿಲ್ಮೆಂಟ್ ಸೆಂಟರ್ ಅನ್ನು ಆರಂಭಿಸಿರುವುದು ನಮ್ಮ ಗ್ರಾಹಕರಿಗೆ ತಾಜಾತನದ ದಿನಸಿ ಪದಾರ್ಥಗಳನ್ನು ತಲುಪಿಸುವ ನಮ್ಮ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ. ಅಲ್ಲದೇ, ಇದು ರಾಜ್ಯದ ಗ್ರಾಹಕರಿಗೆ ಫ್ಲಿಪ್ ಕಾರ್ಟ್ ನ ಸಾಮೀಪ್ಯ ಇನ್ನಷ್ಟು ಗಟ್ಟಿಗೊಂಡಿರುವುದಕ್ಕೆ ಇದು ಸಾಕ್ಷಿಯಾಗಿದೆ ಎಂದರು.
ಫ್ಲಿಪ್ ಕಾರ್ಟ್ ನ ಉಪಾಧ್ಯಕ್ಷ ಮತ್ತು ಗ್ರಾಸರಿ ವಿಭಾಗದ ಮುಖ್ಯಸ್ಥ ಹರಿಕುಮಾರ್ ಜಿ ಅವರು ಮಾತನಾಡಿ, “ರಾಜ್ಯದ ಕರಾವಳಿ ಪ್ರದೇಶವು ನಮ್ಮ ಪ್ರಗತಿಗೆ ಸದೃಢವಾದ ಪ್ರದೇಶವಾಗಿದೆ. ಸ್ಥಳೀಯ ಗ್ರಾಹಕರಿಂದ ದಿನಸಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳವಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ ಎಂದರು.
ಈ ಹಿಂದೆ ಹುಬ್ಬಳ್ಳಿಯು ಬೆಂಗಳೂರಿನಲ್ಲಿರುವ ಫುಲ್ ಫಿಲ್ಮೆಂಟ್ ಸೆಂಟರ್ ಮೇಲೆ ಅವಲಂಬಿತವಾಗಿತ್ತು. ಇದೀಗ ಹುಬ್ಬಳ್ಳಿಯಲ್ಲಿಯೇ ಕೇಂದ್ರವನ್ನು ಆರಂಭಿಸಿರುವುದರಿಂದ ತ್ವರಿತವಾಗಿ ಉತ್ಪನ್ನಗಳು ಗ್ರಾಹಕರ ಮನೆ ಬಾಗಿಲಿಗೆ ತಲುಪುವುದು ಸುಲಭವಾಗಿದೆ. ಅಲ್ಲದೇ, ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ದಿನಸಿಗಳ ವ್ಯಾಪಕ ಆಯ್ಕೆಯನ್ನು ನೀಡುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ಇನ್ನಷ್ಟು ಹತ್ತಿರವಾಗಿದೆ ಎಂದರು