ಅವರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇಂದು ಬಿರುಸಿನ ಪ್ರಚಾರ ನಡೆಸಿ ತಾಲೂಕಿನ ಮುದ್ದನಹಳ್ಳಿ ಗ್ರಾಮದಲ್ಲಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ನಾನು ಶಿವಮೊಗ್ಗ ಜಿಲ್ಲೆಯ ಮಗಳು ಬೆಂಗಳೂರಿನ ಸೊಸೆ, ನನಗೆ ಶಿವಮೊಗ್ಗ ಜಿಲ್ಲೆಯಲ್ಲಿ ಮನೆ ಇಲ್ಲ ಎನ್ನುವವರು ಬೆಂಗಳೂರಿನಲ್ಲಿ ಮನೆಯನ್ನು ಹೊಂದಿದ್ದಾರೆ , ನನಗೆ ಒಮ್ಮೆ ಲೋಕಸಭೆಗೆ ಕಳುಹಿಸಿ ನಿಮ್ಮ ಸೇವೆ ಮಾಡಲು ಅವಕಾಶ ನೀಡಿ ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಘೋಷಿಸಿದ ಐದು ಗ್ಯಾರಂಟಿಗಳಾದ ಮಹಿಳೆಯರ ಖಾತೆಗೆ ಎರೆಡು ಸಾವಿರ ರೂಪಾಯಿ, ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣ , 10 ಕೆಜಿ ಉಚಿತ ಅಕ್ಕಿ , ಎರಡು ನೂರು ಯೂನಿಟ್ ಉಚಿತ ವಿದ್ಯುತ್, ನಿರುದ್ಯೋಗಿ ಭತ್ತೆ ಗಳನ್ನು ನಮ್ಮ ಸರ್ಕಾರ ಬಂದ ಕೆಲವೇ ದಿನಗಳಲ್ಲಿ ಜಾರಿಗೊಳಿಸಿ ನುಡಿದಂತೆ ನಡೆದಿದೆ ಎಂದರು.
ಪಾರದರ್ಶಕತೆಯಿಂದ ಆಡಳಿತವನ್ನು ನಡೆಸುತ್ತಿರುವ ನಮ್ಮ ಸರ್ಕಾರ ನೇರವಾಗಿ ಬಡಜನರ ಖಾತೆಗೆ ಹಣವನ್ನು ಜಮಾ ಮಾಡುತ್ತಿದೆ, ಹಗರಣ ಮುಕ್ತ ಪಾರದರ್ಶಕ ಆಡಳಿತವನ್ನು ಸಿದ್ದರಾಮಯ್ಯನವರು ನೀಡುತ್ತಿದ್ದಾರೆ ಎಂದರು. ರೈತರ ಬೆಂಬಲ ಬೆಲೆ ನಿಗದಿ ಹಾಗೂ ರೈತರ ಭೂ ಹಕ್ಕಿನ ಸಮಸ್ಯೆಗಳನ್ನು ಪರಿಹರಿಸಲು ನಾವು ಸಿದ್ಧರಿದ್ದೇವೆ. ರೈತರ ಸಂಪೂರ್ಣ ಸಾಲಮನ್ನಾ ಮಾಡಲು ರಾಹುಲ್ ಗಾಂಧಿಯವರು, ಸೋನಿಯಾ ಗಾಂಧಿಯವರು , ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಚಿಂತನೆ ನಡೆಸಿದ್ದು ಈ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.
ಖ್ಯಾತ ಚಲನಚಿತ್ರ ನಟ ಶಿವರಾಜ್ ಕುಮಾರ್ ಮಾತನಾಡಿ ಬದಲಾವಣೆ ಆಗಬೇಕು , ಹೊಸ ಅಲೆ ಬಂದರೆ ಅದಕ್ಕೊಂದು ಬೆಲೆ ಅದಕ್ಕೊಂದು ಕಳೆ, ನೀವು ನೀಡುವ ಮತವನ್ನು ಯೋಚನೆ ಮಾಡಿ ನೀಡಿ , ನೀವು ನೀಡುವ ಒಂದು ಮತ ಅಧಿಕಾರವನ್ನು ಕೊಡುತ್ತದೆ , ಆ ಅಧಿಕಾರವನ್ನು ನೀವೇ ಉತ್ತಮವಾಗಿ ಅನುಭವಿಸಬೇಕು , ನೀವು ಕೊಡುವ ಅಧಿಕಾರದಿಂದ ನಮಗೆ ಯಾವುದೇ ದುಡಿಮೆ ಇಲ್ಲ ಆದರೆ ಅದೊಂದು ಸೇವೆ , ಹಾಗಾಗಿ ಗೀತಾ ರವರಿಗೂ ಸೇವೆ ಮಾಡುವ ಅವಕಾಶವನ್ನು ನೀಡಿ ಎಂದರು.
ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಾಗರಾಜ್ ಗೌಡ ಮಾತನಾಡುತ್ತಾ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ , ಅರಣ್ಯ ಭೂಮಿ ಒತ್ತುವರಿ, ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ಪರಿಹರಿಸಲಾಗಲಿಲ್ಲ ಅವರಿಗೆ ಹಕ್ಕು ಪತ್ರವನ್ನು ಕೊಡುವ ಸುಳ್ಳು ಭರವಸೆಯನ್ನು ನೀಡುತ್ತಾ ಬಂದರು, ಕಳೆದ ಬಾರಿ ಈ ಭರವಸಗಳನ್ನೇ ನೀಡಿ ಸಂಸತ್ತಿಗೆ ಆಯ್ಕೆಯಾದ ಬಿ ವೈ ರಾಘವೇಂದ್ರ ಮತ್ತೆ ಅದೇ ಭರವಸೆಗಳನ್ನು ನಿಮಗೆ ಕೊಡುತ್ತಿದ್ದಾರೆ ಎಚ್ಚರವಾಗಿರಿ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ , ಭದ್ರಕಾಡ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ , ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ , ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಶಿವರಾಂ, ರಾಜ್ಯತಾಂಡ ಅಭಿವೃದ್ಧಿ ನಿಗಮದ ನಿರ್ದೇಶಕ ಶಿವು ನಾಯಕ್ , ಮುಖಂಡರಾದ ಶಿವು ಹುಲ್ಮಾರ್,ರೇಣುಕಾಸ್ವಾಮಿ, ರಾಘವೇಂದ್ರ ನಾಯಕ್ , ಹುಳ್ಳಿ ದರ್ಶನ್, ಮಾರವಳ್ಳಿ ಉಮೇಶ್ , ನಗರದ ರವಿಕಿರಣ್, ಅನಿಲ್, ಕುಮಾರ್ ನಾಯಕ್ , ಮಾಲತೇಶ್ ಬಂಡಾರಿ, ಸಿದ್ದನಗೌಡ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.