ಶಿವಮೊಗ್ಗ, ಏ.12:
ಶಿವಮೊಗ್ಗ ತಾಲ್ಲೂಕು ಸೋಮಿನಕೊಪ್ಪ ಆಲ್ದಳ್ಳಿಯಲ್ಲಿ ಇಂದು ಬೆಳಗ್ಗೆ 20 ವರ್ಷದ ಯುವತಿ ನೇಣಿಗೆ ಶರಣಾಗತಿಯಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಈಕೆಯ ವಿವಾಹ ಸದ್ಯದಲ್ಲೇ ನಿಗದಿಯಾಗಿತ್ತು ಎನ್ನಲಾಗಿತ್ತು. ಆತ್ಮಹತ್ಯೆಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ.
ಆಕೆ ವಿವಾಹ ಬೇಸರದಿಂದ ಆತ್ಮಹತ್ಯೆ ಮಾಡಿಕೊಂಡರೆ ಅಥವಾ ಪ್ರೇಮ ವೈಪಲ್ಯದಿಂದಲೇ…, ಎಂಬುದು ಇನ್ನು ಗೊತ್ತಾಗಿಲ್ಲ.
ಆಕೆಯನ್ನು ಕೂಡಲೇ ಹೊಳಲೂರಿನ ಆಸ್ಪತ್ರೆಗೆ ಆಕೆಯನ್ನು ಕರೆದುಕೊಂಡು ಹೋಗಿದ್ದು ಅಷ್ಟರಲ್ಲಿ ಆಕೆ ಮೃತಪಟ್ಟಿದ್ದು, ಶಿವಮೊಗ್ಗ ಮೆಗಾನ್ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸರು ಈ ಸಂಬಂಧ ಮಾಹಿತಿ ಪಡೆದು, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.