ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾನೇ ನಿಲ್ಲುವೆ. ಅಪ್ಪ ಮಕ್ಕಳ ಪಕ್ಷವನ್ನಾಗಿ ಮಾಡಿಕೊಂಡವರಿಗೆ ಪಾಠ ಕಲಿಸುವೆ ಎಂದು ಮಾಜಿ ಉಪಮುಖ್ಯಮಂತ್ರಿ ಇಂದಿಲ್ಲಿ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಕುಟುಂಬದ ರಾಜಕಾರಣ ವಿರೋಧಿಸಿ ಬಂದವನು ನಾನು ಎಂದು ಇಂದು ನಡೆದ ಬೆಂಬಲಿಗರ ಸಭೆಯಲ್ಲಿ ತಿಳಿಸಿದರು.
ನನ್ನ ಮಗನ ಮೇಲೆ ಪ್ರಮಾಣ ಮಾಡಿ ಹೇಳುವೆ ಎಂದ ಅವರ, ಯಡಿಯೂರಪ್ಪ ಟಿಕೆಟ್ ಕೊಡಿಸುವೆ ಎಂದು ಹೇಳಿದ್ದು ನಿಜ.
ನನ್ನ ಮಗನಿಗೆ ನೀಡದ ಟಿಕೆಟ್ ಒಂದು ಕಡೆಯಾಗಿದರೆ, ಯಡಿಯೂರಪ್ಪ ಶೋಭಕರಂದ್ಲಾಜೆ ಗೆ ಟಿಕೆಟ್ ಕೊಡಿಸಿದ್ದು ಯಾಕೆ ಎಂದು ಪ್ರಶ್ನಿಸಿದರು.
ಪಕ್ಷ ರಾಜಕಾರಣದ ವಿರುದ್ದ ಹೋರಾಟ ನಡೆಸಿದ ನಾನು ಇದೀಗ ಪಕ್ಷದ ನಿಷ್ಟಾವಂತರಿಗೆ ಅಪ್ಪ ಮಕ್ಕಳ ಪಕ್ಷದಲ್ಲಿ ಏನಾಗುತ್ತಿದೆ ಎಂದು ಪ್ರಶ್ಣಿಸಿದ ಈಶ್ವರಪ್ಪ
ನಿಮ್ಮ ಒಬ್ಬ ಮಗ ಎಂಪಿ.,ಇನ್ನೂಬ್ಬ ಎಂ.ಎಲ್.ಎ.ಮತ್ತು ರಾಜ್ಯಾಧ್ಯಕ್ಷ…ನನ್ನ ಮಗ ಏನಾಗಿದಾನೆ ಎಂದು ನೋವಿನಿಂದ ನುಡಿದರು.
ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲಕ್ಕೆ ನಾನಿದ್ದೇನೆ. ಆದರೆ ನನ್ನ ಬೆಂಬಲ ಕುಟುಂಬದ ರಾಜಕಾರಣಕ್ಕಿಲ್ಲ.
ಕಾಂಗ್ರೆಸ್ ನಂತಹ ರಾಜಕೀಯ ವಂಶಪಾರಂಪರ್ಯವನ್ನು ವಿರೋದಿಸುವುದು ನನ್ನ ನಿಲುವು.
ನಾನು ಪಕ್ಷ ಬಿಟ್ಟು ಹೋಗಲ್ಲ. ಪಕ್ಷ ನನ್ನ ತಾಯಿ ಎಂದಿದ್ದೆ. ಆದರೆ ನನ್ನ ತಾಯಿ ನನಗೆ ಸಾಯಿಸುತ್ತಿರುವಾಗ ಸುಮ್ಮನಿರಬೇಕಾ ಎಂದು ಈಶ್ವರಪ್ಪ ಪ್ರಶ್ನಿಸಿದರು.
ಲೋಕಸಭಾ ಚುನಾವಣೆಯಲ್ಲಿ ಬಿ.ಜೆ.ಪಿ ಎಷ್ಚು ಜನ ಗೆಲ್ಲುತ್ತಾರೆ ನೋಡುವೆ. ಯಡಿಯೂರಪ್ಪ ನವರೆ., ಇದು ನನ್ನ ಮಾತಲ್ಲ ನೊಂದ ಕಾರ್ಯಕರ್ತರು ಅಭಿಮಾನಿಗಳ ನೋವು ಎಂದು ಆಕ್ರೋಶ ವ್ಯಕ್ತಪಡಿಸಿದರು.