ಶಿವಮೊಗ್ಗ, ಡಿ.01:
ಶಿವಮೊಗ್ಗ ಫ್ರೀಡಂ ಪಾರ್ಕ್, ಹಳೆ ಜೈಲು ಆವರಣದಲ್ಲಿ ಸ್ವಾವಲಂಬಿ ಪರಿಕಲ್ಪನೆಯ ಸ್ವದೇಶಿ ಮೇಳ ಡಿಸೆಂಬರ್ 6 ರಿಂದ 10 ರವರೆಗೆ ನಡೆಯಲಿದ್ದು, ಉಚಿತ ಪ್ರವೇಶದ ಜೊತೆಗೆ ಈಗಾಗಲೇ ನಿಗದಿಯಾಗಿರುವ ಇನ್ನೂ240 ಮಳಿಗೆಳಲ್ಲಿ ಬಗೆ ಬಗೆಯ ದೇಶಿಯ ಉತ್ಪನ್ನಗಳ ತಿಂಡಿ ತಿನಿಸುಗಳ, ಊಟ ಕ್ರೀಡೆಗಳ ಲೋಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸವಿ ಸವಿಯಲು ವ್ಯವಸ್ಥೆ ಮಾಡಲಾಗಿದೆ ಎಂದು
ಸ್ವದೇಶಿ ಜಾಗರಣ ಮಂಚ್ ನ ಸಂಚಾಲಕರು ಹಾಗೂ ಪ್ರಮುಖರು ಇಂದಿಲ್ಲಿ ತಿಳಿಸಿದರು.


ಅವರಿಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಇಲ್ಲಿ ನಿತ್ಯ ಸೀರೆ ತೊಟ್ಟುಕೊಂಡು ಬಂದ 10 ಮಹಿಳೆಯರಿಗೆ ಲಕ್ಕಿ ಡಿಪ್ ಮೂಲಕ ಪ್ರತಿದಿನ 10 ಸೀರೆಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.


ಡಿ.6 ರಂದು ಸಂಜೆ ಆರು ಗಂಟೆಗೆ ತರಳಬಾಳು ಬೃಹನ್ಮಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಮೈಸೂರು ಸಂಸ್ಥಾನದ ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಕಟ ಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಸಂಸದ ಬಿವೈ ರಾಘವೇಂದ್ರ, ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆಗಮಿಸಲಿದ್ದಾರೆ ಎಂದು ಸಂಘಟಕರು ವಿವರಣೆ ನೀಡಿದರು.

ಸ್ವದೇಶಿ ಮೇಳದ ಪ್ರಯುಕ್ತ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.


ಡಿ.7 ರಂದು ಸಂಜೆ 7 ಗಂಟೆಗೆ ಪಂಡಿತ್ ಡಾ. ಪ್ರವೀಣ್ ಗೋಡ್ಕಿಂಡಿ ಅವರ ಬಾನ್ಸುರಿ ವಾದನ ನಡೆಯಲಿದೆ. ಅಂತೆಯೇ ಪ್ರತಿದಿನ ಯಕ್ಷಗಾನ, ಭರತನಾಟ್ಯ, ಡಿ. 10 ರಂದು ಕುದ್ರೋಳಿ ಗಣೇಶ ಅವರ ಜಾದೂ ಪ್ರದರ್ಶನ ಸೇರಿದಂತೆ 10 ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.


ಇದೇ ಸಂದರ್ಭದಲ್ಲಿ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಶಾಲಾ ಕಾಲೇಜು ಮಕ್ಕಳಿಗೆ ಚಿತ್ರಕಲಾ ಹಾಗೂ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಪ್ರೌಢಶಾಲೆ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಸ್ವದೇಶಿ ಹೇಗೆ ಏಕೆ, ಪದವಿ ವಿದ್ಯಾರ್ಥಿಗಳಿಗೆ ಸ್ವದೇಶಿ ಮತ್ತು ಜಾಗತೀಕರಣ ವಿಷಯದ ಕುರಿತು ಪ್ರಬಂಧ ಏರ್ಪಡಿಸಿದ್ದು, ಒಂದರಿಂದ 10ನೇ ತರಗತಿ ಮಕ್ಕಳಿಗೆ ಸ್ವದೇಶಿ ಪರಿಕಲ್ಪನೆ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಪ್ರತಿದಿನ ಒಂದೊಂದು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಕಾರ್ಯಕ್ರಮದ ಸದುಪಯೋಗ ಪಡೆಯಲು ಕೋರಲಾಗಿದೆ.


ಡಿಸೆಂಬರ್ 10ರಂದು ಬೆಳಗ್ಗೆ 10:30ಕ್ಕೆ ರೈತರೊಂದಿಗೆ ಸಂವಾದ ನಡೆಯಲಿದೆ ಅಂದು ಬೆಳಗ್ಗೆ 7:30 ರಿಂದ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ನಡೆಯಲಿದ್ದು ವಿವರಗಳಿಗೆ 974076 026 ಗೆ ಸಂಪರ್ಕಿಸಬಹುದು ಕಾರ್ಯಕ್ರಮದಲ್ಲಿ ವಿಶೇಷವಾಗಿ ಸ್ವದೇಶಿಯ ಬರಪೂರ ಆಹಾರ ವ್ಯವಸ್ಥೆ ಇದ್ದು, ತಾರಸಿ ತೋಟ ಕಾರ್ಯಗಾರ ಡಿಸೆಂಬರ್ 7ರ ಬೆಳಿಗ್ಗೆ 10:30ಕ್ಕೆ ಅಡಿಗ ಅವರಿಂದ ನಡೆಯಲಿದೆ. ಅಂದು ಮಧ್ಯಾಹ್ನ 3 ರಿಂದ ಶಿವಮೊಗ್ಗದಲ್ಲಿ ಕೃಷಿ ಮಾರುಕಟ್ಟೆಯಲ್ಲಿ ಯುವಕರ ಪಾತ್ರ ಕುರಿತು ಸಂವಾದ ಮತ್ತು ಸಾವಯವ ಕೃಷಿ ಪ್ರಾತ್ಯಕ್ಷಿಕೆ ಪ್ರದರ್ಶನ ವಿಸ್ತರಣೆ ಕಾರ್ಯಗಳ ನಡೆಯಲಿದೆ. ಡಿಸೆಂಬರ್ 8ರಂದು ಖ್ಯಾತ ಎಂ ವೈ ಗುರುರಾಜ ಅವರಿಂದ ಆಯುರ್ವೇದ ಶಿಬಿರ ನಡೆಯಲಿದ್ದು, ಅಂದು ಸಂಜೆ 6 ಗಂಟೆಗೆ ಹನುಮಗಿರಿ ಕೋದಂಡರಾಮ ಕೃಪಾ ಪೋಷಿತ ಯಕ್ಷಗಾನ ಮಂಡಳಿಯಿಂದ ಶ್ವೇತ ಕುಮಾರ ಚರಿತ್ರೆ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಡಿಸೆಂಬರ್ 9ರಂದು ರಾತ್ರಿ 7:00ಗೆ ಮೈಸೂರಿನ ನೃತ್ಯ ನಿಪುಣ ತಂಡದಿಂದ ನೃತ್ಯ ರೂಪಕ ನಡೆಯಲಿದೆ. ಡಿಸೆಂಬರ್ 9ರಂದು ಪಂಚಗವ್ಯ ಚಿಕಿತ್ಸಾ ಶಿಬಿರವು ವೈದ್ಯ ರಮೇಶ ಅವರಿಂದ ನಡೆಯಲಿದೆ. ಡಿ.10ರ ಬೆಳಿಗ್ಗೆ 10:30ಕ್ಕೆ ನಿತ್ಯ ಬಳಕೆ ವಸ್ತುಗಳ ತಯಾರಿಕಾ ಶಿಭಿರ ನಡೆಯಲಿದ್ದು, ಸಂಜೆ 4 ರಿಂದ ಯೋಗಾಸನ ಪ್ರದರ್ಶನ ನಡೆಯಲಿದೆ. ಮೆಗಾ ಮೆಜೆಸ್ಟಿಕ್ ಸ್ಟಾರ್ ಕುದ್ರೊಳಿ ಗಣೇಶ ಅವರಿಂದ ಅಬ್ರಕಡಬ್ರ ಜಾದೂ ಪ್ರದರ್ಶನ ನಡೆಯಲಿದೆ ಎಂದರು. ವಿಶೇಷವಾಗಿ ಮಡಿಕೆ ಚಿತ್ತಾರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ನೈಸರ್ಗಿಕ ಬಣ್ಣದಿಂದ ಕೂಡಿದ ಮಡಿಕೆ ಬಿಡಿಸಿ ಡಿಸೆಂಬರ್ 4ರೊಳಗೆ ತಲುಪಿಸಬೇಕಾಗಿದೆ.


ಇಲ್ಲಿ ಭಾಗವಹಿಸುವ ಮೂಲಕ ಸ್ವದೇಶಿ ಮೇಳವನ್ನು ಯಶಸ್ವಿಗೊಳಿಸಿಕೊಡಲು ಕೋರಿರುವ ಸಂಘಟಕರು ಹೆಚ್ಚಿನ ಮಾಹಿತಿಗಾಗಿ 91485 24854 ಅಥವಾ 7019108 511 ಕೋರಲಾಗಿದೆ. ಸುದ್ದಿಗೋಷ್ಠಿಯಲ್ಲಿ ಸ್ವದೇಶಿ ಜಾಗರಣ ಮಂಚ್ ನ ದಕ್ಷಿಣ ಮಧ್ಯ ಕ್ಷತ್ರಿಯ ಸಂಘಟಕ ಕೆ. ಜಗದೀಶ್, ಮೇಳದ ಸಂಚಾಲಕ ಹಾಗೂ ಶಾಸಕ ಡಿ.ಎಸ್. ಅರುಣ್, ಸಂಯೋಜಕ ಡಾ. ಧನಂಜಯಸರ್ಜಿ, ಸಂಘಟಕರಾದ ಹರ್ಷ ಬಿ. ಕಾಮತ್, ಪರಿಸರ ತಜ್ಞ ಪ್ರೊ. ಬಿ ಎಂ ಕುಮಾರಸ್ವಾಮಿ, ಸಮಿತಿ ಕಾರ್ಯದರ್ಶಿ ದತ್ತಾತ್ರಿ, ಪ್ರಾಂತ ವಿಚಾರ ಸಹ ಪ್ರಮುಖ ಜನಾರ್ಧನ್, ಜಿಲ್ಲಾ ಸಂಯೋಜಕ ದಿಲೀಪ್ ಎನ್, ಪ್ರಮುಖರಾದ ಸುರೇಖಾ ಮುರುಳಿಧರ್ ಶುಭಂ ಮಾಲಿಕರಾದ ಉದಯ್ ಹಾಗೂ ಇತರರಿದ್ದರು

By admin

ನಿಮ್ಮದೊಂದು ಉತ್ತರ

You missed

error: Content is protected !!