ಹೊಸನಗರ : ತಾಲ್ಲೂಕಿನ ಗಡಿಭಾಗ ಶರಾವತಿ ಹಿನ್ನೀರಿನ ದ್ವೀಪ ಗ್ರಾಮಗಳ ಜನತೆ ಗುರುವಾರ ಕೃಷಿ ಕೆಲಸಕ್ಕೆ ಅಲ್ಪ ವಿರಾಮ ನೀಡಿ ಫುಲ್ ರಿಲ್ಯಾಕ್ಸ್ ಆಗಿದ್ರು. ಇದಕ್ಕೆ ಸಾಕ್ಷಿಯಾಗಿದ್ದು ಪಕ್ಕದ ಸಾಗರ ತಾಲ್ಲೂಕಿನ ಗ್ರಾಮಗಳಿಗೂ ಹೊಂದಿಕೊಂಡಿರುವ ಹೊಸನಗರ ತಾಲ್ಲೂಕಿನ ಹೆಬ್ಬಿಗೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

1953 ರಲ್ಲಿ ಆರಂಭಗೊಂಡ ಈ ಶಾಲೆಯು 70 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿ

ಮಾತನಾಡಿದ ಗ್ರಾಮ ಪಂಚಾಯತ್ ಸದಸ್ಯ ಪುರುಷೋತ್ತಮ್ ಶ್ಯಾನುಭೋಗ್, ಜನ ಸಮುದಾಯವನ್ನು ಶಾಲೆಯತ್ತ ಆಕರ್ಷಿಸಲು ಇಂತಹ ಸ್ಪರ್ಧಾ ಕಾರ್ಯಕ್ರಮಗಳು ಮಾದರಿಯಾಗಿವೆ. ಕೆಲಸದ ಒತ್ತಡದ ಸನ್ನಿವೇಶಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಜನರಿಗೆ ಮನರಂಜನೆಯ ಜೊತೆಗೆ ಮಾನಸಿಕ ಸ್ಥೈರ್ಯ ಹೆಚ್ಚಿಸುತ್ತವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಮಮೂರ್ತಿ ಸಂಪ ಮಾತನಾಡಿದರು. ಮುಖ್ಯಶಿಕ್ಷಕರಾದ ಸುನೀಲ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತುಮರಿ

ಗ್ರಾಮ ಪಂಚಾಯತ್ ಸದಸ್ಯ ಶೇಖರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ವಿವಿಧ ಕ್ರೀಡಾ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮಕ್ಕಳು ಹಾಗೂ ಗ್ರಾಮಸ್ಥರು ಅತ್ಯುತ್ಸಾಹದಿಂದ ಭಾಗವಹಿಸಿದ್ದರು. 60 ವರ್ಷ ಮೇಲ್ಪಟ್ಟವರೂ ಕಿರಿಯರು ನಾಚುವಂತೆ ಉತ್ಸುಕವಾಗಿ ಸ್ಪರ್ಧಿಸಿದ್ದು ವಿಶೇಷವಾಗಿತ್ತು.

ಶಾಲಾ ಮಕ್ಕಳು ಪ್ರಾರ್ಥಿಸಿದರು. ಸಹಶಿಕ್ಷಕಿ ಶಾಲಿನಿ ವಂದಿಸಿದರು. ಶಿಕ್ಷಕರುಗಳಾದ ಸಾವಿತ್ರಮ್ಮ, ಅನಿತಾ, ರವಿಜಾ ಹಾಗೂ

ಅಡುಗೆ ಸಿಬ್ಬಂದಿಗಳು ಮತ್ತು ಎಸ್.ಡಿ.ಎಂ.ಸಿ ಯ ಪದಾಧಿಕಾರಿಗಳು ಮತ್ತು ಪೋಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸ್ಪರ್ಧೆಗಳಿಗೆ ತೀರ್ಪುಗಾರಾಗಿ ಶಿಕ್ಷಕರುಗಳಾದ ಕುಂಬಳೆ ಶಾಲೆಯ ಶ್ರವಣ್ ಕುಮಾರ್, ಮೂಕಾರ್ತಿ ಶಾಲೆಯ ಗುರುಮೂರ್ತಿ ಹಾಗೂ ಬಾಣಾವರ ಶಾಲೆಯ ರಾಜೇಶ್ ಆಗಮಿಸಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!