ನಗು ಜೀವನಕ್ಕೆ ಅಮೂಲ್ಯ, ಜೋಕ್ ಓದಿ


ಅದೊಂದು ಕಾಲೇಜಿನಲ್ಲಿ ಹೊಸತಾಗಿ ಬಂದ ಯುವ ಮನಶಾಸ್ತ್ರದ ಉಪನ್ಯಾಸಕರು ಪಾಠ ಮಾಡುತ್ತಿದ್ದರು. ಅವರು ತರಗತಿಯಲ್ಲಿ ಪಾಠ ಮಾಡುತ್ತಾ ಬೋರ್ಡಿನಲ್ಲಿ ಬರೆಯುವಾಗ ಕ್ಲಾಸಿನಲ್ಲಿ ಯಾರೋ ಒಬ್ಬ ಹುಡುಗ ಶಿಳ್ಳೆ ಹೊಡೆದ. ತಕ್ಷಣ ಅವರು ಹಿಂದೆ ತಿರುಗಿದಾಗ ಎಲ್ಲರೂ ತಲ್ಲೀನರಾಗಿ ಅವರನ್ನೇ ನೋಡುತ್ತಿದ್ದರು. ಮತ್ತೆ ಅವರು ಬೋರ್ಡಿನ‌ ಕಡೆಗೆ ತಿರುಗಿದಾಗ ಅದೇ ವಿದ್ಯಾರ್ಥಿಯಿಂದ ಇನ್ನೊಂದು ಶಿಳ್ಳೆ. ಆದರೆ ಹೊಡೆವನ್ಯಾರೆಂದು‌ ಅವರಿಗೆ ಗೊತ್ತಾಗಲಿಲ್ಲ. ಹುಡುಗರೂ ಹೇಳಲಿಲ್ಲ. ಇದು ಮೂರ್ನಾಲ್ಕು ಸಲ ಪುನರಾವರ್ತನೆಯಾದಾಗ ಆ ಪ್ರಾಧ್ಯಾಪಕರು ತಾಳ್ಮೆ ಕಳೆದುಕೊಂಡರು. ಆದರೂ ಅದನ್ನು ತೋರ್ಪಡಿಸದೆ ತನ್ನ ಕೈಯಲ್ಲಿದ್ದ ಪುಸ್ತಕವನ್ನು ಕೆಳಗಿಟ್ಟು ಕೈಕಟ್ಟಿ ಗಂಭೀರವಾಗಿ ನಿಂತರು.

“ಸರಿ ವಿದ್ಯಾರ್ಥಿಗಳೇ, ನಿಮಗೆ ಪಾಠದಲ್ಲಿ ಆಸಕ್ತಿಯಿಲ್ಲದಂತೆ ತೋರುತ್ತದೆ‌. ಅದಕ್ಕೆ ನಿಮಗೆ ಆಸಕ್ತಿ ಬರಲು ನನ್ನದೊಂದು ವೈಯುಕ್ತಿಕ ವಿಷಯವನ್ನು ಹೇಳುತ್ತೇನೆ” ಎಂದಾಗ ವಿದ್ಯಾರ್ಥಿಗಳು ಉತ್ಸಾಹ ತೋರಿದರು.
“ನಾನು ಕೆಲ‌ದಿನಗಳಿಂದ ಒಂದು ಚಂದದ ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಆದರೆ…” ಎಂದಾಗ “ಹ್ಹಾಂ” ಎಂದು‌ ಎಲ್ಲರೂ ಉದ್ಗಾರ ತೆಗೆದು ಅವರ ಮುಂದಿನ ಮಾತಿಗೆ ಆಸಕ್ತರಾದರು.

“ಹೌದು. ನಾವಿಬ್ಬರೂ ಮೂರು ವರ್ಷದಿಂದ ಪ್ರೀತಿಸುತ್ತಿದ್ದರೂ ನಮಗೆ ಮದುವೆಯಾಗಲು ಸಾಧ್ಯವಾಗುತ್ತಿಲ್ಲ..”
“ಯಾಕೆ ಸಾರ್?” ಎಂದು ಎಲ್ಲರೂ ಒಕ್ಕೊರಲಿನಿಂದ ಕೇಳಿದರು.
“ಯಾಕೆಂದರೆ ಅವಳಿಗೆ ಒಬ್ಬ ತಮ್ಮನಿದ್ದಾನೆ. ಅವನಿಗೆ ನನ್ನನ್ನು ಕಂಡರೆ ಆಗುವುದಿಲ್ಲ. ಅವನು ನನ್ನನ್ನು ಎಲ್ಲಾ ಕಡೆ ಹಿಂಬಾಲಿಸಿಕೊಂಡು ಬಂದು ನನಗೆ ವಿನಾ ಕಾರಣ ತೊಂದರೆ ಕೊಡುತ್ತಿದ್ದಾನೆ…”
“ಈಗ ಅವನೆಲ್ಲಿದ್ದಾನೆ ಸಾರ್?” ಎಲ್ಲರೂ ಮತ್ತೆ ಕುತೂಹಲದಿಂದ ಕೇಳಿದರು.
“ಅವನು ನಿಮ್ಮ ತರಗತಿಯಲ್ಲೇ ಇದ್ದಾನೆ. ಅವನ ಅಕ್ಕ ಹೇಳಿದಂತೆ ಅವನಿಗೆ ಆಗಾಗ ಶಿಳ್ಳೆ ಹೊಡೆಯುವ ಅಭ್ಯಾಸವಿದೆಯಂತೆ..” ಎಂದು ಅವರು ಹೇಳುವಷ್ಟರಲ್ಲೇ ಎಲ್ಲರೂ ತಕ್ಷಣ ಹುಡುಗನೊಬ್ಬನ ಕಡೆಗೆ ತಿರುಗಿ ನೋಡಿದರು. ಕ್ಷಣದಲ್ಲಿ ಹೀಗೆ ಹುಡುಗರಿಂದಲೇ ಸಿಕ್ಕಿಬಿದ್ದ ಆ ಶಿಳ್ಳೆಯ ಹುಡುಗ ಗಲಿಬಿಲಿಯಿಂದ ಎದ್ದು ನಿಂತು “ಸಾರಿ ಸಾರ್, ನನಗೆ ಅಕ್ಕನೇ ಇಲ್ಲ..!” ಎಂದ.
“ಹೌದಪ್ಪಾ, ನನಗೂ ಯಾರೂ ಗರ್ಲ್ ಫ್ರೆಂಡ್ ಇಲ್ಲ. ಬಟ್ ಯು ಆರ್ ಡಿಬಾರ್ಡ್ ಫಾರ್ ವಿಶಲ್ಲಿಂಗ್ ಇನ್ ದಿ ಕ್ಲಾಸ್…!” ಎಂದು ಅವನನ್ನು ಹೊರದಬ್ಬುತ್ತಾ, “ನಾನು ಮನಃಶಾಸ್ತ್ರದಲ್ಲಿ ಪದವಿಯನ್ನು ಗಳಿಸಿದ್ದು ಸುಮ್ಮನೆ ಅಲ್ಲ..!” ಎಂದರು.

Students shocked, rocked…! (ಸಂಗ್ರಹ)

By admin

ನಿಮ್ಮದೊಂದು ಉತ್ತರ

You missed

error: Content is protected !!