ಶಿವಮೊಗ್ಗ: ಸೆ.9ರಂದು ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ನಡೆಯಲಿದ್ದು, ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮೆರವಣಿಗೆ ಸಮಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಭಾರೀ ಬಂದೋಬಸ್ತ್ ಕಲ್ಪಿಸಲಾಗಿದ್ದು, ಪ್ರಮುಖವಾಗಿ ಹಳೇ ಶಿವಮೊಗ್ಗ ಭಾಗ ಪೊಲೀಸ್ ಭದ್ರಕೋಟೆಯಾಗಿದೆ.
ಬಂದೋಬಸ್ತ್ ಕರ್ತವ್ಯಕ್ಕೆ 2 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 19 ಪೊಲೀಸ್ ಉಪಾಧೀಕ್ಷಕರು, 46 ಪೋಲಿಸ್ ನಿರೀಕ್ಷಕರು, 71 ಪೊಲೀಸ್ ಉಪನಿರೀಕ್ಷಕರು, 1970 ಪೊಲೀಸ್ ಸಿಬ್ಬಂದಿಗಳು, 700 ಗೃಹರಕ್ಷಕ ದಳ ಸಿಬ್ಬಂದಿಗಳು, 01 ಆರ್’ಎಎಫ್ ಕಂಪನಿ (200 ಅಧಿಕಾರಿ ಮತ್ತು ಸಿಬ್ಬಂದಿಗಳು), 15 ಕೆಎಸ್’ಆರ್’ಪಿ ತುಕಡಿಯ (300 ಅಧಿಕಾರಿ ಮತ್ತು ಸಿಬ್ಬಂದಿಗಳು), 15 ಡಿಎಆರ್ ತುಕಡಿ(120 ಅಧಿಕಾರಿ ಹಾಗೂ ಸಿಬ್ಬಂದಿ)ಗಳನ್ನು ನಿಯೋಜಿಸಲಾಗಿದೆ.