ಶಿವಮೊಗ್ಗ: ನಗರದ ಜೆ.ಎಚ್.ಪಟೇಲ್ ಬಡಾವಣೆಯ ಮನೆಯೊಂದರಲ್ಲಿದ್ದ ಹಕ್ಕಿ ಗೂಡಿಗೆ ಕೆರೆ ಹಾವು ನುಗ್ಗಿದ್ದು ಗೂಡಿನಲ್ಲಿದ್ದ ಪಾರಿವಾಳವನ್ನು ತಿಂದುಹಾಕಿದೆ. ಮನೆಯಲ್ಲಿ ಹಾವು ಕಾಣಿಸಿಕೊಂಡಿದ್ದರಿಂದ ಮನೆಯವರಲ್ಲಿ ಆತಂಕವನ್ನುಂಟು ಮಾಡಿತ್ತು. ಗುರುವಾರ ರಾತ್ರಿ ಪಂಜರಕ್ಕೆ ನುಗ್ಗಿದ್ದ ಹಾವು ಅದರಲ್ಲಿದ್ದ ಎರಡು ಪಾರಿವಾಳಗಳ ಪೈಕಿ ಒಂದನ್ನು ತಿಂದಿದೆ.
ಮತ್ತೊಂದು ಪಾರಿವಾಳವನ್ನು ರಕ್ಷಿಸಲು ಮನೆಯವರು ಸ್ನೇಕ್ ಕಿರಣ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಕಿರಣ್ ಕೆರೆ ಹಾವನ್ನು ಹಿಡಿದು ಪಕ್ಷಿಯನ್ನು ರಕ್ಷಿಸಿದ್ದಾರೆ.
