ಸಾಗರ: ತಾಲ್ಲೂಕಿನ ಕೆಳದಿ ಕೆನರಾ ಬ್ಯಾಂಕ್ ಎದುರು ತಮ್ಮನ್ನು ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಬ್ಯಾಂಕ್ ಮಿತ್ರರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರದಲ್ಲಿ ಶುಕ್ರವಾರ ಬ್ಯಾಂಕ್ಮಿತ್ರ ಹುದ್ದೆಯಿಂದ ವಜಾಗೊಂಡಿರುವ ಶಕುಂತಲ ಸ್ಥಳದಲ್ಲಿಯೆ ವಿಷ ಸೇವಿಸಿ, ತೀವೃ ಅಸ್ವಸ್ಥಗೊಂಡ ಘಟನೆ ನಡೆದಿದೆ.
ಕೆಳದಿ ಕೆನರಾ ಬ್ಯಾಂಕ್ನಿಂದ ದೇವು ಸೂರಗುಪ್ಪೆ ಹಾಗೂ ಶಕುಂತಲಾ ಅವರನ್ನು ಬ್ಯಾಂಕ್ಮಿತ್ರ ಕೆಲಸದಿಂದ ವಜಾಗೊಳಿಸಲಾಗಿತ್ತು. ದೇವು ಸೂರಗುಪ್ಪೆ ಮತ್ತು ಶಕುಂತಲಾ ಅವರನ್ನು ಪುನರ್ ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿ ಬ್ಯಾಂಕ್ ಮಿತ್ರರ ಸಂಘ, ಮಾನವಹಕ್ಕು ಕ್ಷೇಮಾಭಿವೃದ್ದಿ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ದೀವರ ಯುವ ವೇದಿಕೆ ಕೆಳದಿ ಕೆನರಾ ಬ್ಯಾಂಕ್ ಎದುರು ಪ್ರತಿಭಟನೆ ನಡೆಸುತ್ತಿದೆ.
ಶುಕ್ರವಾರ ಬೆಳಿಗ್ಗೆ ಪ್ರತಿಭಟನೆ ಪ್ರಾರಂಭವಾಗುತ್ತಿದ್ದಂತೆಯೆ ಶಕುಂತಲಾ ಅವರು ಕಳೆನಾಶಕ ಸೇವನೆ ಮಾಡಿದ್ದಾರೆ. ತಕ್ಷಣ ಅವರನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಚಿಕಿತ್ಸೆಗೆ ಕರೆ ತರಲಾಯಿತು. ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ.