ಶಿವಮೊಗ್ಗ,ಜು.29:
ಸಿಬ್ಬಂದಿಗಳ ರಕ್ಷಣೆಗೆ ಸಾಕಷ್ಟು ಶ್ರಮಿಸುತ್ತಿರುವ ದೊಡ್ಡಪೇಟೆ ಪೊಲೀಸರಿಗೆ ಅದು ಯಾವ ಗ್ರಹಚಾರವೋ ಗೊತ್ತಿಲ್ಲ. ಮತ್ತೆ ಕೊರೊನಾ ಕಾಡತೊಡಗಿದೆ.
ಡಕಾಯಿತಿ, ಗಾಂಜಾ, ರಾಬರಿ ಮುಂತಾದ ವಿವಿಧ ಪ್ರಕರಣಗಳಲ್ಲಿ ಬಂಧಿತರಾಗಿದ್ದ 12 ಜನ ಆರೋಪಿಗಳಲ್ಲಿ ಮೂವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಇದರ ಬೆನ್ನಲ್ಲೇ ಬೆಂಗಾವಲಿಗಿದ್ದ ಪೊಲೀಸ್ ಸಿಬ್ಬಂದಿಯೋರ್ವರಿಗೆ ಪಾಸಿಟೀವ್ ಬಂದಿರುವುದು ಆತಂಕ ಸೃಷ್ಟಿಸಿದೆ.
ದೊಡ್ಡಪೇಟೆ ಪೊಲೀಸರು 12 ಜನರನ್ನು ಬಂಧಿಸಿದ್ದು ಅವರ ವಿಚಾರಣೆ ಹಾಗೂ ಅವರನ್ನು ನ್ಯಾಯಾಂಗ ಒಪ್ಪಿಸುವ ಕ್ರಮಕ್ಕೆ ಮುಂದಾಗಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಈ 12 ಜನ ಆರೋಪಿಗಳಲ್ಲಿ ಮೂವರಿಗೆ ಪಾಸಿಟಿವ್ ಬಂದಿದ್ದು ಆತಂಕ ಸೃಷ್ಟಿಸಿದೆ.
ಅವರ ಬೆಂಗಾವಲಿನ ಕಾನ್ಸ್ಟೇಬಲ್ ಒಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಅವರ ಪ್ರಥಮ ಹಂತದ ಸಂಪರ್ಕದಲ್ಲಿದ್ದ 12 ಜನ ಪೊಲೀಸರು ಈಗ ಕ್ವಾರಂಟೈನ್ ಗೆ ಒಳಗಾಗುವ ಪರಿಸ್ಥಿತಿ ಬಂದಿದೆ.
ಹಿಂದೆ ಇಂತಹದೇ ಎರಡು ಪ್ರಕರಣದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯ ಮೊವರಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ದೂರುದಾರ ಆಸ್ಪತ್ರೆಯಲ್ಲಿ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಅಲ್ಲಿ ದೂರು ಪಡೆಯಲು ಹೋಗಿದ್ದ ಪೊಲೀಸ್ ಸಿಬ್ಬಂದಿಗಳು ಕೊರೋನಾ ಆತಂಕ ಎದುರಿಸಿದ್ದರು. ಆ ದೂರುದಾರನ ಬಳಿಕ ಪೊಲೀಸರೊಬ್ಬರಿಗೆ ಪಾಸಿಟೀವ್ ಬಂದಿತ್ತು. ಅದೇ ಬಗೆಯಲ್ಲಿ ಕಂಟೈನ್ಮೆಂಟ್ ಜೋನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯೋರ್ವರಿಗೆ ಬಂದಿತ್ತು.

By admin

ನಿಮ್ಮದೊಂದು ಉತ್ತರ

error: Content is protected !!