ಶಿವಮೊಗ್ಗ, ಜ.28:
ಕುಡಿತದ ಮತ್ತಿನಲ್ಲಿ ಸುಮಾರು ಐದಾರು ಯುವಕರ ತಂಡ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಿನ್ನೆ ಮದ್ಯರಾತ್ರಿ ನಗರದ ಎನ್ ಟಿ ರಸ್ತೆ ಸುಂದರಾಶ್ರಯದ ಬಳಿ ನಡೆದಿದೆ.
ಮಾತಿಗೆ ಮಾತು ಬೆಳೆದು ಕೆ.ಆರ್. ಪುರಂನ ಜೀವನ್ (26) ಹಾಗೂ ಕೇಶನ್ ಶೆಟ್ಟಿ (27) ಮೇಲೆ ಹಲ್ಲೆ ನಡೆಸಿದ್ದು, ಜೀವನ್ ಸಾವುಕಂಡಿದ್ದಾನೆ. ಕೇಶವ್ ಶೆಟ್ಟಿಗೆ ಗಂಬೀರವಾಗಿ ಗಾಯಗೊಂಡಿದ್ದಾನೆನ್ನಲಾಗಿದೆ.
ಸುಂದರಾಶ್ರಯ ಬಳಿಯಿಂದ ಸುಮಾರು ರಾತ್ರಿ 11.30ಕ್ಕೆ ಜಗಳಕ್ಕಿಳಿದ ಈ ಪೆಡ್ಡೆಗಳ ತಂಡ ತಪ್ಪಿಸಿಕೊಂಡು ಹೋಗಲೆತ್ನಿಸಿದ ಜೀವನ್ ಹಾಗೂ ಕೇಶವ್ ರಿಗೆ ವಿಠ್ಠಲ ಸ್ವಾಮಿ ದೇವಸ್ಥಾನ ಬಳಿ ಚಾಕುವಿನಿಂದ ಇರಿದಿದ್ದಾರೆ.
ಸ್ಥಳಕ್ಕೆ ಆಗಮಿಸಿದ ದೊಡ್ಡ ಪೇಟೆ ಸಿಪಿಐ ವಸಂತಕುಮಾರ್, ಎಸೈ ಶಂಕರಮೂರ್ತಿ ಅವರ ತಂಡ ಆರೋಪಿಗಳ ಪತ್ತೆಗೆ ಜಾಲ ಬೀಸಿದೆ. ಗಾಯಗೊಂಡಿದ್ದ ಕೇಶವ್ ನನ್ನು ಮೆಗಾನ್ ಆಸ್ಪತ್ರೆಗೆ ದಾಖಲಿಸಿದೆ.