ಶಿವಮೊಗ್ಗ, ಜ.28:
ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗೆ ಟಿಸಿ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ಸುಮಾರು ಹತ್ತು ಸಾವಿರ ಲಂಚ ಕೇಳಿದ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಮೆಸ್ಕಾಂನ AEE ಬಿ.ಎಸ್.ಪ್ರಕಾಶ್ ಅವರು ಇಂದು ಸಂಜೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಕಾಶ್ ಅವರು ಇಂದು ಹಳ್ಳಿಯ ರೈತನೊಬ್ಬನ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕೋರಿದ್ದರು. ಈ ಸಂದರ್ಭದಲ್ಲಿ ಪ್ರಕಾಶ್ ಸೇರಿದಂತೆ ಎಲ್ಲರೂ ಲಂಚಕ್ಕೆ ಪೀಡಿಸುತ್ತಿದ್ದರು ಎನ್ನಲಾಗಿದೆ.
ಇಂದು ಸಂಜೆ 4ಗಂಟೆಯ ಹೊತ್ತಿಗೆ ನಿಗಧಿಯಂತೆ ಎಇಇ ಪ್ರಕಾಶ್ ಅವರಿಗೆ ಐದು ಸಾವಿರ ಲಂಚನೀಡುವ ಸಮಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ದಾಳಿ ನಡೆಸಿದೆ.
ಎಸಿಬಿಯ ಪೂರ್ವ ವಲಯ ಎಸ್ಪಿ ಜಯಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಲೋಕೇಶ್, ಇನ್ಸ್ ಸ್ಪೆಕ್ಟರ್ ಇಮ್ರಾನ್ ಬೇಗ್, ಸಿಬ್ಬಂದಿಗಳಾದ ವಸಂತ, ರಘು ನಾಯ್ಕ, ನಾಗರಾಜ, ಸುರೇಂದ್ರ, ಯೋಗಿಶಪ್ಪ, ಶ್ರೀನಿವಾಸ ಹಾಗೂ ಇತರರಿದ್ದರು.