ಶಿವಮೊಗ್ಗ, ಜು.29: ಶಿವಮೊಗ್ಗ ನಗರದ ಅತಿಮುಖ್ಯ ಪೊಲೀಸ್ ಠಾಣೆಗಳಲ್ಲಿ ಒಂದಾದ ಹಾಗೂ ಕೋವಿಡ್ ಸೆಂಟರ್ ವ್ಯಾಪ್ತಿಯನ್ನು ಹೊಂದಿರುವ ದೊಡ್ಡಪೇಟೆ ಪೊಲೀಸ್ ಠಾಣಾ ಪೊಲೀಸ್ ಸಿಬ್ಬಂದಿಗಳ ರಕ್ಷಣೆ ಹಾಗೂ ಅವರ ಆರೋಗ್ಯದ ಬಗ್ಗೆ ಅಲ್ಲಿನ ಅಧಿಕಾರಿಗಳು ವಿಶೇಷ ಗಮನಹರಿಸಿರುವುದು ಕಂಡುಬರುತ್ತದೆ.
ಸರ್ಕಲ್ ಇನ್ಸ್ ಸ್ಪೆಕ್ಟರ್ ವಸಂತಕುಮಾರ್ ಹಾಗೂ ಸಬ್ ಇನ್ಸ್ ಸ್ಪೆಕ್ಟರ್ ಶಂಕರಮೂರ್ತಿ ಅವರು ಪೊಲೀಸ್ ಸಿಬ್ಬಂದಿಗಳ ಆರೋಗ್ಯರಕ್ಷಣೆಗಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದೆ.
ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಗಳು ಕೆಲ ನಿಯಮವನ್ನು ಕಡ್ಡಾಯವಾಗಿ ನಿಭಾಯಿಸಲು ಸೂಚಿಸಲಾಗಿದೆ. ಸುಭದ್ರವಾದ ಮಾಸ್ಕ್ ಗಳನ್ನು ಠಾಣೆಯಿಂದ ನೀಡುವ ಜೊತೆಗೆ ಪ್ರತಿ ಹಂತದಲ್ಲೂ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ.
ಆರೋಪಿಯೊಬ್ಬನಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿದ್ದ ಪಿರ್ಯಾದುದಾರನಿಂದ ದೂರು ದಾಖಲಿಸಿಕೊಳ್ಳುವ ಹಾಗೂ ಕಂಟೈನ್ಮೆಂಟ್ ಜೋನ್ ನಲ್ಲಿ ಕಾರ್ಯ ನಿರ್ವಹಿಸುವ ಪೊಲೀಸರಿಬ್ಬರಿಬ್ಬರಿಗೆ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೊಡ್ಡಪೇಟೆ ಪೊಲೀಸರು ತಮ್ಮ ಸಿಬ್ಬಂದಿಗಳ ಕೆಲಸದ ನಡುವೆ ಸಿಬ್ಬಂದಿಗಳ ಆರೋಗ್ಯ ರಕ್ಷಣೆಗೆ ಅತಿ ಹೆಚ್ಚಿನ ಆದ್ಯತೆ ನೀಡಿರುವುದು ವಿಶೇಷ.
ಪ್ರಸಕ್ತ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ನಿರೀಕ್ಷೆಯಷ್ಟು ಮಾಸ್ಕ್ ಗಳು ಹಾಗೂ ಸ್ಯಾನಿಟೈಸರ್ ದಾಸ್ತಾನು ಮಾಡಲಾಗಿದ್ದು, ನಿತ್ಯ ಕೋವಿಡ್ 19 ಮಾರ್ಗಗಳನ್ನು ಹಾಕಿಕೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ. ಅಲ್ಲಿನ ಸಿಬ್ಬಂದಿಗಳಿಗೆ ಸಂಗತಿಯಾಗಿದೆ.