ಶಿವಮೊಗ್ಗ ಅಯ್ಯಾ ಸ್ನಾರ್ಟ್ ಮಾಡಲು ಹೋಗಿ ಸ್ಮಾರ್ಟ್ ಆಗುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಯ ಇಂಜಿನಿಯರ್ ಗಳೇ, ಅಧಿಕಾರಿಗಳೇ ಈ ಗುಂಡಿ ಮುಚ್ಚಲು ಇನ್ನು ಎಷ್ಟು ಕಾಲ ಬೇಕು…?
ಶಿವಮೊಗ್ಗ ಕೋರ್ಟ್ ಸರ್ಕಲ್ ನಲ್ಲಿ ಈ ಪೈಪ್ ಲೈನ್ ಕಲೆಕ್ಷನ್ ಜೋಡಿಸುವ ಈ ಕಾಮಗಾರಿ ಸುಮಾರು ಎರಡು ತಿಂಗಳಿನಿಂದ ಇದೇ ರೀತಿ ಇದೆ.
ಇಲ್ಲಿ ಮನುಷ್ಯರು ವಾಹನಗಳಲ್ಲಿ ಇಲ್ಲವೇ ಪಾದಾಚಾರಿಗಳಾಗಿ ಓಡಾಡ್ತಾರೆ. ಗುಂಡಿ ಅವರ ಅಪಾಯಕ್ಕೆ ಕಾಯುತ್ತಿದ್ದರೂ ಆ ನೆನಪೇ ಇಲ್ಲದಂತೆ ನೀವು ಸ್ಮಾರ್ಟ್ ಆಗುತ್ತಿದ್ದೀರಾ. ಕನಿಷ್ಟ ಅಪಘಾತದಂತಹ ಅಪಾಯ ತಪ್ಪಿಸಲಾಗದೆ ನಿಮಗೆ ಎಂದು ಜನ ಹಿಡಿ ಶಾಪ ಹಾಕುತ್ತಿದ್ದಾರೆ. ಗಮನಿಸುವವರು ಈಗಲಾದರೂ ಕಣ್ ಬಿಡ್ತಾರಾ?