ಬೆಂಗಳೂರು/ಶಿವಮೊಗ್ಗ: ಇಂದು 158ನೇ ವಿಧಾನಮಂಡಲ ಅಧಿವೇಶನದ ವಿಧಾನಪರಿಷತ್ತಿನಲ್ಲಿ ಚುಕ್ಕೆ ಗುರುತಿನ ಪ್ರಶ್ನೆಯ ಮೂಲಕ ವಿಧಾನ ಪರಿಷತ್ ಶಾಸಕರಾದ ಡಿ.ಎಸ್. ಅರುಣ್ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಗಳ ನಿರ್ಮಾಣಕ್ಕಾಗಿ ಸರ್ಕಾರಿ ಜಮೀನುಗಳನ್ನು ಕೇವಲ guidance value ನ 5% ದರದಲ್ಲಿ ಶಾಶ್ವತವಾಗಿ ಮಂಜೂರು ಮಾಡಿರುವ ಗಂಭೀರ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದರು.

ತುಮಕೂರು, ಬಾಗಲಕೋಟೆ, ಶಿವಮೊಗ್ಗ, ದೇವನಹಳ್ಳಿ, ಮಂಡ್ಯ, ಬಾದಾಮಿ, ಚಾಮರಾಜನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 22ಕ್ಕೂ ಹೆಚ್ಚು ಆಸ್ತಿಗಳನ್ನು ಕಾಂಗ್ರೆಸ್ ಪಕ್ಷದ ಕಚೇರಿಗಳ ನಿರ್ಮಾಣಕ್ಕಾಗಿ ಸರ್ಕಾರಿ ಜಮೀನನ್ನು guidance value ಗೆ ಕೇವಲ 5% ದರದಲ್ಲಿ ಶಾಶ್ವತವಾಗಿ ಮಂಜೂರು ಮಾಡಿರುವುದರಿಂದ ರಾಜ್ಯ ಖಜಾನೆಗೆ ಎಷ್ಟು ಆರ್ಥಿಕ ನಷ್ಟವಾಗಿದೆ ಎಂಬುದರ ಕುರಿತು ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಸರ್ಕಾರಿ ಜಮೀನನ್ನು ಒಂದು ರಾಜಕೀಯ ಪಕ್ಷದ ಆಸ್ತಿಯನ್ನಾಗಿ ಮಾಡುವುದು ಅನೂಚಿತ ಕ್ರಮವಾಗಿದ್ದು, ಇಷ್ಟು ಕಡಿಮೆ ದರದಲ್ಲಿ ಶಾಶ್ವತವಾಗಿ ಜಮೀನು ನೀಡುವುದು ಸಾರ್ವಜನಿಕ ಆಸ್ತಿಯ ದುರುಪಯೋಗವಾಗಿದ್ದು, ರಾಜ್ಯ ಖಜಾನೆಗೆ ನೇರ ನಷ್ಟ ಉಂಟುಮಾಡುವ ಕ್ರಮವಾಗಿದೆ ಎಂದು ಅವರು ಆರೋಪಿಸಿದರು. ಜನರ ಆಸ್ತಿಯನ್ನು ಪಕ್ಷದ ಹಿತಾಸಕ್ತಿಗಾಗಿ ಬಳಸುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಇಂತಹ ನಿರ್ಧಾರ ಕೈಗೊಳ್ಳುವ ಮೊದಲು ಹಣಕಾಸು ಇಲಾಖೆಯ ಅಭಿಪ್ರಾಯ ಪಡೆಯದೇ ಮುಂದುವರಿದಿರುವುದು ಗಂಭೀರ ಆಡಳಿತಾತ್ಮಕ ನಿರ್ಲಕ್ಷ್ಯವಾಗಿದೆ ಎಂದು ಡಿ.ಎಸ್. ಅರುಣ್ ಅವರು ಹೇಳಿದರು.
ಸರ್ಕಾರದಲ್ಲೇ ಇರುವ ವ್ಯಕ್ತಿಗಳು ಕಾಂಗ್ರೆಸ್ ಟ್ರಸ್ಟ್ನಲ್ಲೂ ಇದ್ದು, ಅದೇ ಸರ್ಕಾರದ ಸಚಿವ ಸಂಪುಟದಲ್ಲಿ ಜಮೀನು ಮಂಜೂರಾತಿಗೆ ಅನುಮೋದನೆ ಪಡೆಯುತ್ತಿರುವುದು ಸಚಿವ ಸಂಪುಟದ ಅಧಿಕಾರ ದುರುಪಯೋಗವಾಗುತ್ತಿದೆ ಎಂದು ಅವರು ಆಕ್ಷೇಪಿಸಿದರು.
ಇದಲ್ಲದೆ, ಇಂತಹ ಮಂಜೂರಾತಿಗೆ ಮುನ್ನ ಯಾವುದೇ ಸಾರ್ವಜನಿಕ ಟೆಂಡರ್ ಅಥವಾ ಮುಕ್ತ ಅರ್ಜಿ ಪ್ರಕ್ರಿಯೆಯನ್ನು ಅನುಸರಿಸದೇ, ಎಲ್ಲಾ ನಿಯಮಗಳನ್ನು ಕಡೆಗಣಿಸಿ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವುದು ಸ್ಪಷ್ಟವಾಗಿದೆ. ಸಾರ್ವಜನಿಕ ಆಸ್ತಿಯನ್ನು ಈ ರೀತಿಯಾಗಿ ಅತೀ ಕಡಿಮೆ ದರದಲ್ಲಿ ರಾಜಕೀಯ ಪಕ್ಷದ ಕಚೇರಿಗಳ ನಿರ್ಮಾಣಕ್ಕೆ ಶಾಶ್ವತವಾಗಿ ಮಂಜೂರು ಮಾಡಿರುವುದು ಗಂಭೀರ ಹಾಗೂ ಖಂಡನೀಯ ಕ್ರಮವಾಗಿದೆ ಎಂದು ಡಿ.ಎಸ್. ಅರುಣ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಡಿ.ಎಸ್. ಅರುಣ್ ಅವರು ಸದನದಲ್ಲಿ ಎತ್ತಿದ ಈ ಗಂಭೀರ ವಿಷಯಕ್ಕೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಸಿ.ಟಿ. ರವಿ ಸೇರಿದಂತೆ ಹಲವಾರು ವಿಧಾನ ಪರಿಷತ್ ಶಾಸಕರು ಬೆಂಬಲ ವ್ಯಕ್ತಪಡಿಸಿದರು.
ಸರ್ಕಾರಿ ಜಮೀನನ್ನು guidance value ಗೆ ಕೇವಲ 5% ದರದಲ್ಲಿ ಶಾಶ್ವತವಾಗಿ ಮಂಜೂರು ಮಾಡಿರುವುದು ರಾಜ್ಯ ಖಜಾನೆಗೆ ನಷ್ಟ ಉಂಟುಮಾಡುವ ಹಾಗೂ ಸಾರ್ವಜನಿಕ ಆಸ್ತಿಯ ದುರುಪಯೋಗಕ್ಕೆ ಉದಾಹರಣೆಯಾದ ನಿರ್ಧಾರವಾಗಿದೆ ಎಂದು ಅವರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು.
ವಂದನೆಗಳೊಂದಿಗೆ
ಡಿ.ಎಸ್.ಅರುಣ್
ಮಾನ್ಯ ವಿಧಾನಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳು