
ಶಿವಮೊಗ್ಗ,ಮಾ.10:
ಶಿವಮೊಗ್ಗ ನಗರದಲ್ಲಿ ಎಂತಹ ವಿಕೃತ, ವಿಕಾರ ವ್ಯಕ್ತಿ ಇದ್ದಾನೆ ನೋಡಿ. ಕಿಡಿಗೇಡಿಯೊಬ್ಬ ಸತ್ತ ಬೆಕ್ಕನ್ನು ರಸ್ತೆ ಡಿವೈಡರ್’ನಲ್ಲಿರುವ ವಿದ್ಯುತ್ ಕಂಬಕ್ಕೆ ತಲೆ ಕೆಳಗಾಗಿ ನೇತು ಹಾಕಿರುವ ಅಮಾನವೀಯ ದಾರುಣ ಘಟನೆ ನಗರದಲ್ಲಿ ನಡೆದಿದೆ.

ಇಲ್ಲಿನ ಶಿವಮೂರ್ತಿ ವೃತ್ತದ ಮೆಟ್ರೋ ಆಸ್ಪತ್ರೆ ಎದುರು ಇರುವ ರಸ್ತೆ ಡಿವೈಡರ್’ನಲ್ಲಿರುವ ವಿದ್ಯುತ್ ಕಂಬಕ್ಕೆ ಸತ್ತ ಬೆಕ್ಕನ್ನು ಕಿಡಿಗೇಡಿಗಳು ದಾರದಲ್ಲಿ ಕಟ್ಟಿ ತಲೆ ಕೆಳಗಾಗಿ ನೇತು ಹಾಕಿದ್ದಾರೆ. ಆತನೇ ಈ ಬೆಕ್ಕನ್ನ ಕೊಂದನೇ?
ಈ ಕುರಿತಂತೆ ತ್ಯಾಗರಾಜ ಮಿತ್ಯಾಂತ ಎನ್ನುವವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಸತ್ತ ಬೆಕ್ಕನ್ನು ನೇತು ಹಾಕಿದ್ದಾರೋ ಅಥವಾ ಸಾಯಿಸಿ ನೇತು ಹಾಕಿದ್ದಾರೋ ಎನ್ನುವುದು ತಿಳಿದಿಲ್ಲ. ಆದರೆ, ಒಂದು ಸತ್ತಿರುವ ಬೆಕ್ಕನ್ನು ಇಷ್ಟು ಅಮಾನವೀಯವಾಗಿ ನಡು ರಸ್ತೆಯ ಲೈಟ್ ಕಂಬಕ್ಕೆ ತಲೆಕೆಳಗಾಗಿ ನೇತು ಹಾಕಿರುವುದು ನಾಗರಿಕ ಸಮಾಜವನ್ನು ಅಣಕಿಸುವಂತಿದೆ.
ಅಲ್ಲದೇ, ಬೆಕ್ಕು ಕೊಳೆತು ತುಂಬಾ ವಾಸನೆ ಬರುತ್ತಿದ್ದು ಇಲ್ಲಿ ವಾಹನ ಸವಾರರಿಗೆ ಸಿಗ್ನಲ್’ಗೆ ಕಾಯಲು ಅಸಾಧ್ಯವಾದ ಸ್ಥಿತಿ ಇದೆ.
ಸರ್ಕಲ್’ನಲ್ಲಿ ಸಿಸಿ ಕ್ಯಾಮಾರ ಇರುವುದರಿಂದ ವ್ಯಕ್ತಿಯ ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು ಎಂಬುದು ಎಲ್ಲರ ಒತ್ತಾಯ.
